»   » ಕುತೂಹಲ ಮೂಡಿಸಿದೆ ಪುನೀತ್ ಹಾಗೂ ಭಟ್ಟರ ಸಮಾಗಮ

ಕುತೂಹಲ ಮೂಡಿಸಿದೆ ಪುನೀತ್ ಹಾಗೂ ಭಟ್ಟರ ಸಮಾಗಮ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಗೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಭಾಷಣೆಕಾರ ಮಾಸ್ತಿ ಭೇಟಿ ನೀಡಿದ್ದಾರೆ. ಸಾಕಷ್ಟು ದಿನಗಳ ನಂತರ ಭಟ್ಟರು ಹಾಗೂ ಪುನೀತ್ ರನ್ನ ಮನೆಯಲ್ಲಿ ಭೇಟಿ ಮಾಡಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯೋಗರಾಜ್ ಭಟ್ ಹಾಗೂ ಪುನೀತ್ ಕಾಂಬಿನೆಷನ್ ನಲ್ಲಿ ತೆರೆಗೆ ಬಂದಿದ್ದ ಪರಮಾತ್ಮ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಕೂಡ ಸಾಕಷ್ಟು ಜನರಿಗೆ ಪರಮಾತ್ಮ ಚಿತ್ರ ಇಂದಿಗೂ ಹಾಟ್ ಫೆವರೆಟ್. ಇವರಿಬ್ಬರ ಭೇಟಿ ನೋಡಿರುವ ಗಾಂಧಿನಗರದ ಮಂದಿ ಒಟ್ಟಿಗೆ ಸಿನಿಮಾ ಮಾಡುವ ಸೂಚನೆಯೇ ಈ ಫೋಟೋನಾ ಅಂತ ಪ್ರಶ್ನೆ ಮಾಡ್ತಿದ್ದಾರೆ.

Fans curious about director yograj bhat meets puneeth rajkumar and his wife at sadashivnagar residence

ಈ ಬಗ್ಗೆ ಭಟ್ಟರನ್ನ ಕೇಳಿದ್ರೆ ಅಂತದೇನಿಲ್ಲಾ, ಆಡಿಯೋ ಸಂಸ್ಥೆ ಉದ್ಗಾಟನೆಗೆ ಹೋಗೊದಕ್ಕೆ ಆಗಿರಲಿಲ್ಲ ಆದ್ದರಿಂದ ಮನೆಗೆ ಹೋಗಿದ್ವಿ ಅಂತಾರೆ ಭಟ್ಟರು. ಆದ್ರೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಅನಿಸಿಕೆ.

English summary
Director yograj bhat meets puneeth rajkumar and his wife ashwini at puneeth residency , ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರನ್ನ ಭೇಟಿ ಮಾಡಿದ ನಿರ್ದೇಶಕ ಯೋಗರಾಜ್ ಭಟ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada