For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ತಂಡದ ಮೇಲೆ ಅಭಿಮಾನಿಗಳಿಂದ ಒತ್ತಡ!

  |
  KGF 2 film team are being pressurized by the fans

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆ ಚಿತ್ರದ ಸೂಪರ್ ಸಕ್ಸಸ್ ಚಾಪ್ಟರ್ 2 ಮೇಲೆ ಹೆಚ್ಚು ನಿರೀಕ್ಷೆ ಹುಟ್ಟಿಕೊಳ್ಳುವಂತೆ ಮಾಡಿದೆ. ಈಗಾಗಲೇ ಕೆಜಿಎಫ್ 2 ಶೂಟಿಂಗ್ ಆರಂಭವಾಗಿದೆ. ಮುಂದಿನ ವರ್ಷ ಸಿನಿಮಾ ಬರುತ್ತೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಹಾಗಿದ್ದರೂ ಅಭಿಮಾನಿಗಳು ಮಾತ್ರ ಸುಮ್ಮನೆ ಇರುತ್ತಿಲ್ಲ.

  ಕೆಜಿಎಫ್ ಚಿತ್ರತಂಡದ ಮೇಲೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಕೆಜಿಎಫ್ ಅಪ್ಡೇಟ್ ನೀಡಿ ಎಂದು ಬೇಡಿಕೆಯಿಡುತ್ತಿದ್ದಾರೆ.

  ಮನೆ ಮುಂದೆ ನೆರೆದಿದ್ದ ಕೇರಳ ಅಭಿಮಾನಿಗಳನ್ನು ನೋಡಿ ರಾಕಿ ಭಾಯ್ ಮಾಡಿದ್ದೇನು?ಮನೆ ಮುಂದೆ ನೆರೆದಿದ್ದ ಕೇರಳ ಅಭಿಮಾನಿಗಳನ್ನು ನೋಡಿ ರಾಕಿ ಭಾಯ್ ಮಾಡಿದ್ದೇನು?

  ಈ ಬಗ್ಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದು, ''ಅಭಿಮಾನಿಗಳ ಭಾವನೆ, ಕಾತುರ ನಮಗೆ ಅರ್ಥವಾಗುತ್ತಿದೆ. ಚಾಪ್ಟರ್ 2 ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ಚಿತ್ರತಂಡ ನಿರ್ಧರಿಸಿದ ಬಳಿಕ, ಹೇಳುತ್ತೇವೆ. ದಯವಿಟ್ಟು ಸಹಕರಿಸಿ'' ಎಂದು ಮನವಿ ಮಾಡಿದ್ದಾರೆ.

  ರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷ

  2018ರ ಬಹುದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದ್ದ ಕೆಜಿಎಫ್, ಇಡೀ ಕನ್ನಡ ಚಿತ್ರರಂಗಕ್ಕೆ ಹೊಸ ಜೋಶ್ ತಂದಿತ್ತು. ಈ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ಮಾರುಕಟ್ಟೆ ಕೂಡ ವಿಶ್ವಾದ್ಯಂತ ವಿಸ್ತರಿಸಿದೆ. ಪರಭಾಷೆ ನಿರ್ಮಾಪಕರು, ನಿರ್ದೇಶಕರು ಕನ್ನಡ ಚಿತ್ರಗಳ ಕಡೆ ಹೆಚ್ಚು ಗಮನ ಹರಿಸುವಂತಾಗಿದೆ.

  ಇಷ್ಟೆಲ್ಲಾ ಹವಾ ಸೃಷ್ಟಿಸಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಮ್ಮಲ್ಲಿ ಮಾತ್ರವಲ್ಲ, ಹೊರರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಇದೆ. ಟೀಸರ್, ಟ್ರೈಲರ್, ಪೋಸ್ಟರ್ ಏನಾದರೂ ಅಪ್ ಡೆಟ್ ಮಾಡಿ ಎಂದು ಫ್ಯಾನ್ಸ್ ಮುಗಿಬಿದ್ದಿರುವುದು ನೋಡಿದ್ರೆ, ಈ ಚಿತ್ರ ಎಷ್ಟು ಹೈಪ್ ಕ್ರಿಯೇಟ್ ಮಾಡಿದೆ ಎಂಬುದು ಅರ್ಥವಾಗುತ್ತೆ.

  English summary
  Fans are demanding for KGF Chapter 2 movie updates. till today film team did not give any updates about Chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X