»   » ಮತ್ತೆ ಉಪೇಂದ್ರ - ಜಗ್ಗೇಶ್ ಒಟ್ಟಿಗೆ ಸಿನಿಮಾ ಮಾಡಬೇಕಂತೆ!

ಮತ್ತೆ ಉಪೇಂದ್ರ - ಜಗ್ಗೇಶ್ ಒಟ್ಟಿಗೆ ಸಿನಿಮಾ ಮಾಡಬೇಕಂತೆ!

Posted By:
Subscribe to Filmibeat Kannada

ಎರಡು ದಿನದ ಹಿಂದೆ ನಡೆದ ಯಶ್ ಬರ್ತ್ ಡೇ ಪಾರ್ಟಿಗೆ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಹೋಗಿದ್ದರು. ನಟ ಅಂಬರೀಶ್, ಜಗ್ಗೇಶ್, ಉಪೇಂದ್ರ, ಪುನೀತ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಪೇಂದ್ರ ಮತ್ತು ಜಗ್ಗೇಶ್ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

'ಉಪ್ಪಿ 2' ಸಿನಿಮಾದ ಸಮಯದಲ್ಲಿ ಉಪೇಂದ್ರ ಮತ್ತು ಜಗ್ಗೇಶ್ ನಡುವೆ ಸಣ್ಣ ಮುನಿಸು ಬಂದಿತ್ತು. ಆ ಬಳಿಕ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರಿರಲಿಲ್ಲ. ಆದರೆ ಯಶ್ ಬರ್ತ್ ಡೇ ಪಾರ್ಟಿಯಲ್ಲಿ 2 ವರ್ಷದ ಬಳಿಕ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಉಪ್ಪಿ ಜೊತೆಗೆ ಸೆಲ್ಫಿ ತೆಗೆದುಕೊಂಡು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಈ ಫೋಟೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಅನೇಕ ಅಭಿಮಾನಿಗಳು ಉಪೇಂದ್ರ ಮತ್ತು ಜಗ್ಗೇಶ್ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...

ಅಭಿಮಾನಿಗಳು ಸಂತಸ

ಉಪ್ಪಿ ಮತ್ತು ಜಗ್ಗೇಶ್ ಒಟ್ಟಿಗೆ ಇರುವ ಫೋಟೋ ನೋಡಿದ ಅವರಿಬ್ಬರ ಸಾಕಷ್ಟು ಅಭಿಮಾನಿಗಳು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಅನೇಕರು ಜಗ್ಗೇಶ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಳೆ ಮುನಿಸು ಮರೆತು ಒಂದಾದ ಉಪೇಂದ್ರ - ಜಗ್ಗೇಶ್ ಜೋಡಿ

'ತರ್ಲೆ ನನ್ ಮಗ 2'

ಉಪೇಂದ್ರ ಮತ್ತು ಜಗ್ಗೇಶ್ ಕಾಂಬಿನೇಶನ್ ನಲ್ಲಿ ಬಂದ 'ತರ್ಲೆ ನನ್ ಮಗ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಬಳಿಕ ಈಗ 'ತರ್ಲೆ ನನ್ ಮಗ 2' ಹೆಸರಿನಲ್ಲಿ ಒಂದು ಸಿನಿಮಾ ಮಾಡಿ ಅಂತ ಫ್ಯಾನ್ಸ್ ಕೋರಿದ್ದಾರೆ.

ಪ್ರಜಾಕೀಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಉಪೇಂದ್ರ ಅಭಿಮಾನಿಯೊಬ್ಬರು ''ನೀವು ಇದುವರೆಗೆ ಉಪೇಂದ್ರ ಅವರ ಪ್ರಜಾಕೀಯದ ಬಗ್ಗೆ ಮಾತನಾಡಿಲ್ಲ. ಅವರ ಪಕ್ಷದ ಬಗ್ಗೆ ನಿಮ್ಮ ಅಭಿಪ್ರಾಯ ಏನು?'' ಎಂದು ಪ್ರಶ್ನೆ ಮಾಡಿದ್ದಾರೆ.

ಬಿರುಗಾಳಿಗೂ ಆರದಿರಲಿ

''ನೀವು ಯಾವಾಗಲು ಹೀಗೆ ಇರಿ. ನಿಮ್ಮ ಸ್ನೇಹ ಯಾವ ಬಿರುಗಾಳಿಗೂ ಆರದಿರಲಿ'' ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ಜಗ್ಗೇಶ್ ಟ್ವೀಟ್

ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪೇಂದ್ರ, ಅಂಬರೀಶ್ ಮತ್ತು ಯಶ್ ಜೊತೆ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ''ಅಪಾರ್ಥ ಬೇಡ. ಯಾರು ಏನೇ ಅಂದುಕೂಂಡರು ನಾವು ಕಲಾವಿಶಾರದೆ ಮಕ್ಕಳು..ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಗೆಲ್ಗೆ..'' ಎಂದು ಟ್ವೀಟ್ ಮಾಡಿದ್ದರು.

English summary
Fans taken their twitter account to express their opinion about Upendra and Jaggesh photo. Jaggesh took a photos with Upendra and shared it in his twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X