For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳನ್ನ ನೋಡಿ ರಸ್ತೆಯಲ್ಲಿ ಕಾರು ನಿಲ್ಲಿಸಿ ಫೋಟೋ ನೀಡಿದ ಅಪ್ಪು

  |
  ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಭೇಟಿ ಮಾಡಿದ್ದು ಹೀಗೆ | FILMIBEAT KANNADA

  ನಟಸಾರ್ವಭೌಮ ಸಿನಿಮಾಗೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಿತ್ರತಂಡ ಖುಷಿಯಾಗಿದ್ದು, ಅಭಿಮಾನಿಗಳಿಗೆ ಧನ್ಯವಾದ ಹೇಳಲು ವಿಜಯಯಾತ್ರೆ ಕೈಗೊಂಡಿದೆ. ಹೀಗಾಗಿ, ಕಳೆದ ವಾರದಿಂದ ರಾಜ್ಯಾದ್ಯಂತ ಪುನೀತ್ ಅಂಡ್ ಟೀಂ ವಿಜಯಯಾತ್ರೆ ಮಾಡುತ್ತಿದೆ.

  ಈ ಮಧ್ಯೆ ಪುನೀತ್ ರಾಜ್ ಕುಮಾರ್ ಅವರು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದನ್ನ ಗಮನಿಸಿದ ಕೆಲವು ಅಭಿಮಾನಿಗಳು, ಬೈಕ್ ಮತ್ತು ಕಾರಿನಲ್ಲಿ ಅಪ್ಪು ಅವರ ಕಾರನ್ನ ಫಾಲೋ ಮಾಡ್ಕೊಂಡು ಬಂದು ಅಡ್ಡಗಟ್ಟಿದ್ದಾರೆ. ಫಾಲೋ ಮಾಡ್ಕೊಂಡು ಬರ್ತಿದ್ದ ಅಭಿಮಾನಿಗಳನ್ನ ನೋಡಿದ ಪುನೀತ್ ಕೂಡ ರಸ್ತೆ ಮಧ್ಯೆಯೇ ತಮ್ಮ ಕಾರ್ ನಿಲ್ಲಿಸಿ ಅವರಿಗೆ ಬುದ್ದಿವಾದ ಹೇಳಿದ್ದಾರೆ.

  'ನಟಸಾರ್ವಭೌಮ'ನ ಪಾಲಿಗೆ ನಿಜವಾದ ವಿಲನ್ ಆದ ತಮಿಳು ರಾಕರ್ಸ್

  ಅಪ್ಪು ಅವರನ್ನ ಫಾಲೋ ಮಾಡ್ಕೊಂಡು ಅಭಿಮಾನಿಗಳು, ಕೈಯಲ್ಲಿ ಹೂವಿನ ಹಾರ ತಗೊಂಡು ಬಂದಿದ್ದರು. ನಂತರ ಅವರನ್ನ ಮಾತನಾಡಿಸಿದ ಪುನೀತ್, ಹಾರವನ್ನ ಕೈಯಲ್ಲಿ ತಗೊಂಡು ಫೋಟೋ ಕೊಟ್ಟರು. ನಂತರ ಅವರಿಗೆ ಕಿವಿಮಾತು ಹೇಳಿದ ಪುನೀತ್, ''ಮತ್ತೊಮ್ಮೆ ಕಾರ್ ನ್ನ ಫಾಲೋ ಮಾಡೋದು ಮಾಡಬೇಡಿ, ಇದು ಅಪಾಯ'' ಎಂದು ಬುದ್ದಿವಾದ ಹೇಳಿದ್ರು.

  ಹೀರೋ ಆಗಿ ಪುನೀತ್ ಮೊದಲು ಹೇಳಿದ್ದು ಇದೇ ಡೈಲಾಗ್

  ಈ ವಿಡಿಯೋವನ್ನ ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪುನೀತ್ ರಾಜ್ ಕುಮಾರ್ ಅವರ ಸರಳತೆಗೆ ಉದಾಹರಣೆ ನೀಡಿದ್ದಾರೆ.

  ಇನ್ನುಳಿದಂತೆ ನಟಸಾರ್ವಭೌಮ ಮುಗಿಸಿರುವ ಪುನೀತ್ ರಾಜ್ ಕುಮಾರ್ ಈಗ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆ ಯುವರತ್ನ ಎಂಬ ಸಿನಿಮಾ ಮಾಡ್ತಿದ್ದಾರೆ. ಪುನೀತ್ ಗೆ ಈ ಚಿತ್ರದಲ್ಲಿ ಸಯೀಶಾ ಸೈಗಲ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  English summary
  Puneeth rajkumar found some fans chasing his car, then he stopped the car and gave pictures and told them not repeat these kind of acts which is dangerous.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X