»   » 'ಪುಲಿ'ಯಲ್ಲಿ ಜಲತರಂಗನಾಗಿ ಕಿಚ್ಚನ ದರ್ಬಾರ್ ನೋಡಿ!

'ಪುಲಿ'ಯಲ್ಲಿ ಜಲತರಂಗನಾಗಿ ಕಿಚ್ಚನ ದರ್ಬಾರ್ ನೋಡಿ!

By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದರ ಜೊತೆಗೆ ಇದೀಗ ತಮಿಳು ಪ್ರೇಕ್ಷಕರ ಹೃದಯಕ್ಕೂ ಲಗ್ಗೆ ಇಟ್ಟಿದ್ದಾರೆ. ಕಳೆದ ವಾರ (ಅಕ್ಟೋಬರ್ 1) ತೆರೆಕಂಡ ತಮಿಳು ನಟ ಇಳೆಯದಳಪತಿ ವಿಜಯ್ ಅವರ 'ಫುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ವಿಲನ್ ರೋಲ್ ನಲ್ಲಿ ಮಿಂಚುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ನಿರ್ದೇಶಕ ಚೆಂಬುದೇವನ್ ಆಕ್ಷನ್-ಕಟ್ ಹೇಳಿರುವ 'ಪುಲಿ' ಚಿತ್ರ ಪಕ್ಕಾ ಫ್ಯಾಂಟಸಿ ಜೊತೆಗೆ ರಾಣಿ ಯಮುನಾದೇವಿ (ಶ್ರೀದೇವಿ) ಆಳ್ವಿಕೆಯ ಒಂದು ರಾಜವಂಶದ ಕಥೆ. ಈ ರಾಜವಂಶದಲ್ಲಿ ಕಮಾಂಡರ್ ಆಗಿ ಜಲತರಂಗ (ಸುದೀಪ್) ಇರುತ್ತಾರೆ.

ವಿಶೇಷವಾಗಿ ಕನ್ನಡ ಪ್ರೇಕ್ಷಕರಿಗೆ 'ಪುಲಿ' ಚಿತ್ರದ ಪ್ರಮುಖ ಆಕರ್ಷಣೆ ನಮ್ಮ ಕನ್ನಡದ 'ಮಾಣಿಕ್ಯ' ಕಿಚ್ಚ ಸುದೀಪ್, ಜೊತೆಗೆ ಸುದೀಪ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.['ಪುಲಿ' ಏಕೆ ನೋಡಬೇಕು, ಇಲ್ಲಿದೆ ಟಾಪ್ 10 ಕಾರಣಗಳು]

ಇಳೆಯದಳಪತಿ ವಿಜಯ್ ಅವರು ಅಪ್ಪ-ಮಗನ ಪಾತ್ರ ಮಾಡುವ ಮೂಲಕ ಡಬಲ್ ರೋಲ್ ನಲ್ಲಿ ಮಿಂಚಿದ್ದಾರೆ. ಇವರೊಂದಿಗೆ ನಮ್ಮ ಕನ್ನಡದ 'ನಂದ ಲವ್ಸ್ ನಂದಿತ' ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಅವರೊಂದಿಗೆ ನಟಿಸಿದ್ದ ನಂದಿತ ಶ್ವೇತ ಅವರು ವಿಜಯ್ ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ವಿಜಯ್ ಪತ್ನಿಯಾಗಿ ಮಿಂಚಿದ್ದಾರೆ.

ಸಿಂಪಲ್ ಆಗಿ ವಿಜಯ್, ಶ್ರೀದೇವಿ ಹಾಗೂ ಸುದೀಪ್ ಅವರ ನಡುವೆ ನಡೆಯುವ ಪ್ರತಿಸ್ಪರ್ಧಿಯುಳ್ಳ ಕಥೆಯೇ 'ಪುಲಿ'. ಒಟ್ಟಾರೆ ಚಿತ್ರದಲ್ಲಿ ಕನ್ನಡಿಗರು ಕಿಚ್ಚ ಸುದೀಪ್ ಅವರ ಅದ್ಭುತ ಅಭಿನಯವನ್ನು ಇಷ್ಟಪಡುತ್ತಾರೆ.[ಇಳೆಯದಳಪತಿ 'ಪುಲಿ' ನೋಡಲು 12 ಗಂಟೆ ತನಕ ಕಾಯಿರಿ]

ಈಗಾಗಲೇ ಚಿತ್ರ ವೀಕ್ಷಿಸಿದ ಕನ್ನಡಿಗರು ಕಿಚ್ಚ ಸುದೀಪ್ ಅವರ ಅಭಿನಯಕ್ಕೆ ಖಂಡಿತವಾಗಿಯೂ ಮನಸೋಲುತ್ತಾರೆ. ಖಡಕ್ ಸಂಭಾಷಣೆ ಹಾಗು ಅದ್ಭುತ ಬಾಡಿ ಲಾಂಗ್ವೇಜ್ ಮೂಲಕ ಸುದೀಪ್ ಅವರು ಮತ್ತೊಮ್ಮೆ ಅಭಿನಯ ಚಕ್ರವರ್ತಿ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಮುಂದೆ ಓದಿ.

ಅಭಿನಯ ಚಕ್ರವರ್ತಿ

ಕನ್ನಡದ ನಮ್ಮೆಲ್ಲರ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಅಭಿನಯ ಚಕ್ರವರ್ತಿ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಸುದೀಪ್ ಅವರು ತಮಿಳು ಚಿತ್ರ 'ಪುಲಿ' ಯಲ್ಲಿ ವಿಜಯ್ ಹಾಗೂ ಶ್ರೀದೇವಿ ಅವರ ವಿರುದ್ದ ಪಾತ್ರದಲ್ಲಿ ಮಿಂಚಿ ಕನ್ನಡಿಗರ ಮನಗೆದ್ದಿದ್ದಾರೆ.

ಜಲತರಂಗನಾಗಿ ಕನ್ನಡದ 'ಮಾಣಿಕ್ಯ'

ಕನ್ನಡದ ಮಾಣಿಕ್ಯ ಕಿಚ್ಚ ಸುದೀಪ್ ಅವರು 'ಪುಲಿ' ಚಿತ್ರದಲ್ಲಿ ಝಲತರಂಗ ಎಂಬ ಪಾತ್ರ ಮಾಡುವ ಮೂಲಕ ಕಮಾಂಡರ್ ರೋಲ್ ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.

ಇಳೆಯದಳಪತಿ ವಿಜಯ್ ಮತ್ತು ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದು, ಕನ್ನಡ ಪ್ರೇಕ್ಷಕರಿಗೆ ಸುದೀಪ್ ಅವರ ಅಭಿನಯ ಖಂಡಿತವಾಗಿಯೂ ಇಷ್ಟವಾಗುತ್ತದೆ.

ಬೆಸ್ಟ್ ರೋಲ್

'ಪುಲಿ' ವೀಕ್ಷಿಸಿದ ನಂತರ ಸ್ಪಷ್ಟವಾಗುವುದೇನೆಂದರೆ, ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಲೀಡ್ ನಟ ವಿಜಯ್ ಅವರಿಗಿಂತ ಬೆಸ್ಟ್ ರೋಲ್ ಮಾಡಿದ್ದಾರೆ.

ಬಾಡಿ ಲಾಂಗ್ವೇಜ್

ಎಸ್ ಎಸ್ ರಾಜಮೌಳಿ ಅವರ ತೆಲುಗು 'ಈಗ' ಚಿತ್ರದಲ್ಲಿ ಸುದೀಪ್ ಅವರ ನೆಗೆಟಿವ್ ರೋಲ್ ನ್ನು ಕನ್ನಡ ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದರು. ಇದೀಗ ಮತ್ತೊಮ್ಮೆ 'ಪುಲಿ' ಮೂಲಕ ಪರಭಾಷೆಯಲ್ಲಿ ತಮ್ಮ ಖದರ್ ತೋರಿದ್ದಾರೆ.

ಬಾಲಿವುಡ್ ಬೆಡಗಿ ಶ್ರೀದೇವಿ ಜೊತೆ ಸುದೀಪ್

ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ಬೋನಿ ಕಪೂರ್ ಅವರೊಂದಿಗೆ ಕಿಚ್ಚ ಸುದೀಪ್ ಅವರು ಇದೇ ಮೊದಲ ಬಾರಿಗೆ 'ಪುಲಿ' ಚಿತ್ರದ ಮೂಲಕ ತೆರೆ ಹಂಚಿಕೊಂಡಿದ್ದು, ಕನ್ನಡಿಗರಿಗೆ ಇದೊಂಥರಾ ಹೆಮ್ಮೆಯ ಸಂಗತಿ

ವಿಜಯ್ ಜೊತೆ ಸುದೀಪ್ ನಟನೆ ಹೇಗಿತ್ತು?

ಇದೇ ಮೊದಲ ಬಾರಿಗೆ ತಮಿಳು ನಟ ಇಳೆಯದಳಪತಿ ವಿಜಯ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು, ಇಬ್ಬರು ಸಖತ್ ಅಭಿನಯ ನೀಡಿದ್ದಾರೆ. ಪ್ರೇಕ್ಷಕರು ಹಾಗೂ ಅಭಿಮಾನಿಗಳು ಖಂಡಿತ ವಿಜಯ್ ಹಾಗೂ ಸುದೀಪ್ ಅಬಿನಯವನ್ನು ಮೆಚ್ಚುತ್ತಾರೆ.

ಶ್ರೀದೇವಿ ಮತ್ತು ಸುದೀಪ್

ಬಾಲಿವುಡ್ ಬೆಡಗಿ ಸುರಸುಂದರಿ ಶ್ರೀದೇವಿ ಜೊತೆ ನಮ್ಮ ಕನ್ನಡದ ಕಿಚ್ಚ ಸುದೀಪ್ ಅವರು ತೆರೆ ಹಂಚಿಕೊಂಡಿದ್ದಾರೆ. ಇನ್ನು ತಮಿಳು ಪ್ರೇಕ್ಷಕರು ಮಾತ್ರವಲ್ಲದೇ ಕನ್ನಡದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕೂಡ 'ಪುಲಿ' ಚಿತ್ರ ನೋಡಬಹುದು. ಒಟ್ನಲ್ಲಿ ಕಿಚ್ಚನಿಗೋಸ್ಕರ 'ಪುಲಿ' ನೋಡಿ

ಸುದೀಪ್ ಫ್ಯಾನ್ಸ್ ಗೆ 'ಪುಲಿ' ಭರ್ಜರಿ ಉಡುಗೊರೆ

ತೆಲುಗಿನ ಬ್ಲಾಕ್ ಬಸ್ಟರ್ ಕಿಟ್ 'ಅತ್ತಾರೆಂಟಿಕಿ ದಾರೇದಿ' ಚಿತ್ರದ ರಿಮೇಕ್ 'ರನ್ನ' ಚಿತ್ರದ ನಂತರ ಕಿಚ್ಚ ಸುದೀಪ್ ಅವರು 'ಪುಲಿ' ಮೂಲಕ ತಮ್ಮ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಸದ್ಯಕ್ಕೆ ಕೆ.ಎಸ್ ರವಿಕುಮಾರ್ ಅವರ ಕನ್ನಡ ಹಾಗೂ ತಮಿಳು 'ಮುಡಿಂಜ ಇವನ ಪುಡಿ' ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.

English summary
Abhinaya Chakravarthy aka Sudeep has won the hearts of Tamil audiences in Vijay starrer Puli. Directed by Simbudevan, Puli is a multi-starrer movie and Sudeep plays the main antagonist role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada