For Quick Alerts
  ALLOW NOTIFICATIONS  
  For Daily Alerts

  'D56' ಸಿನಿಮಾ ನಾಯಕಿ ಯಾರು? ಅಭಿಮಾನಿಗಳ ಗೆಸ್ ನಿಜವಾಗುತ್ತಾ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಿನಿಮಾಗಳ ಬಗ್ಗೆ ಕಳೆದೊಂದು ವರ್ಷದಿಂದ ಹೆಚ್ಚು ಅಪ್‌ಡೇಟ್ ಸಿಕ್ಕಿರಲಿಲ್ಲ. ಈಗ ಬ್ಯಾಕ್ ಟು ಬ್ಯಾಕ್ ಅಪ್‌ಡೇಟ್ ಸಿಕ್ತಿದ್ದು, ನಾಳೆ ಅಭಿಮಾನಿಗಳಿಗೆ ಡಬಲ್ ಧಮಾಕ ಕಾದಿದೆ.

  'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿರೋ ದರ್ಶನ್ 'D56' ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ರಾಕ್‌ಲೈನ್ ವೆಂಕಟೇಶ್‌ ನಿರ್ಮಾಣದ 'ರಾಜ ವೀರ ಮದಕರಿ ನಾಯಕ' ಸಿನಿಮಾ ತಡವಾಗ್ತಿದ್ದು, ಅದೇ ಬ್ಯಾನರ್‌ನಲ್ಲಿ ಈ ಸಿನಿಮಾ ಶುರುವಾಗುತ್ತಿದೆ. ಈಗಾಗಲೇ ದರ್ಶನ್ ಹೊಸ ಲುಕ್‌ನಲ್ಲಿ ಫೋಟೊಶೂಟ್ ಸಹ ಮಾಡಿದ್ದಾರೆ ಅನ್ನಲಾಗುತ್ತಿದೆ. ಇದೀಗ ಚಿತ್ರದ ನಾಯಕಿಯನ್ನು ಘೋಷಿಸಲು ಮುಹೂರ್ತ ಫಿಕ್ಸ್ ಆಗಿದೆ.

  ಸೆಲೆಬ್ರಿಟಿಗಳಿಗೋಸ್ಕರ ಆ ನಿಯಮ ಮುರಿಯುತ್ತಾರಾ ಚಾಲೆಂಜಿಂಗ್ ಸ್ಟಾರ್?ಸೆಲೆಬ್ರಿಟಿಗಳಿಗೋಸ್ಕರ ಆ ನಿಯಮ ಮುರಿಯುತ್ತಾರಾ ಚಾಲೆಂಜಿಂಗ್ ಸ್ಟಾರ್?

  ದರ್ಶನ್ ಹುಟ್ಟುಹಬ್ಬದ ದಿನವೇ ಥೀಮ್ ಪೋಸ್ಟರ್ 'D56' ಸಿನಿಮಾ ಘೋಷಿಸಲಾಗಿತ್ತು. ಇದೊಂದು ಕಮರ್ಷಿಯಲ್ ಸಿನಿಮಾ ಆಗಿದ್ದು ಒಂದೊಳ್ಳೆ ಸಂದೇಶವನ್ನು ಹೊತ್ತು ಬರ್ತಿದೆ. ದರ್ಶನ್‌ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ 'ರಾಬರ್ಟ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ದರ್ಶನ್‌ ನಟನೆಯ 56ನೇ ಸಿನಿಮಾ ಕುತೂಹಲ ಹೆಚ್ಚಿಸಿದೆ. ಥೀಮ್‌ ಪೋಸ್ಟರ್‌ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯ ಚಿತ್ರವನ್ನು ಹಾಕಿ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ.." ಅಂತ ಬರೆದು ಕುತೂಹಲ ಮೂಡಿಸಿದ್ದರು.

  'D56' ಸಿನಿಮಾ ನಾಯಕಿ ಯಾರು?

  ನಾಳೆ(ಆಗಸ್ಟ್.05) ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ 'D56' ಚಿತ್ರದ ನಾಯಕಿ ಯಾರು ಅನ್ನುವುದನ್ನು ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರದ ನಾಯಕಿಯನ್ನು ಪರಿಚಯಿಸಲು ಉತ್ಸುಕರಾಗಿರುವುದಾಗಿ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಘೋಷಿಸಿದೆ. ಬೆಳಗ್ಗೆ 9.45ಕ್ಕೆ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್‌ ಬೀಳಲಿದೆ.

  'ಕ್ರಾಂತಿ'ಯನ್ನು ಹೊತ್ತು ಮೆರೆಸುತ್ತಿರುವ ದರ್ಶನ್ ಅಭಿಮಾನಿಗಳು, ನಿಲ್ಲದ ಅಭಿಯಾನ!

   ಫ್ಯಾನ್ಸ್ ಗೆಸ್ ನಿಜವಾಗುತ್ತಾ?

  ಫ್ಯಾನ್ಸ್ ಗೆಸ್ ನಿಜವಾಗುತ್ತಾ?

  ನಾಯಕಿಯ ಅರ್ಧ ಮುಖ ಸರಿಯಾಗಿ ಕಂಡು ಕಾಣದಂತೆ 'D56' ಅಪ್‌ಡೇಟ್‌ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಪೋಸ್ಟರ್‌ ನೋಡಿದ ಅಭಿಮಾನಿಗಳು ಯಾರಿರಬಹುದು ಸಿನಿಮಾ ನಾಯಕಿ ಅಂತ ಗೆಸ್ ಮಾಡೋಕೆ ಶುರು ಮಾಡಿದ್ದಾರೆ. ಕೆಲವರು ಶ್ರೀಲೀಲಾ ಅಂದರೆ ಮತ್ತೆ ಕೆಲವರು ರಾಶಿ ಖನ್ನಾ ಅನ್ನುತ್ತಿದ್ದಾರೆ. ಇನ್ನು ಕೆಲವರು ನಾಳೆ ಆಶಿಕಾ ರಂಗನಾಥ್‌ ಬರ್ತ್‌ಡೇ. ಹಾಗಾಗಿ ಬರ್ತ್‌ಡೇ ವಿಶೇಷವಾಗಿ ಸ್ಪೆಷಲ್‌ ಪೋಸ್ಟರ್ ಮೂಲಕ ಶುಭಾಶಯ ಕೋರಿ ಆಶಿಕಾರನ್ನು'D56' ತಂಡಕ್ಕೆ ಆಹ್ವಾನಿಸಬಹುದು ಎಂದು ಲೆಕ್ಕಾಚಾರ ಹಾಕ್ತಿದ್ದಾರೆ.

   ಹಬ್ಬದ ಸಂಭ್ರಮದಲ್ಲಿ ಸಿನಿಮಾ ಮುಹೂರ್ತ

  ಹಬ್ಬದ ಸಂಭ್ರಮದಲ್ಲಿ ಸಿನಿಮಾ ಮುಹೂರ್ತ

  ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ನಾಳೆ 'D56' ಚಿತ್ರಕ್ಕೆ ಪೂಜೆ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಡುವ ಸಾಧ್ಯತೆಯಿದೆ. ಪೋಸ್ಟರ್ ಸಮೇತ ಸಿನಿಮಾ ಟೈಟಲ್‌ ಅನೌನ್ಸ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

   ಅಕ್ಟೋಬರ್ 21ಕ್ಕೆ 'ಕ್ರಾಂತಿ'

  ಅಕ್ಟೋಬರ್ 21ಕ್ಕೆ 'ಕ್ರಾಂತಿ'

  ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಅಕ್ಟೋಬರ್ 21ಕ್ಕೆ ಸಿನಿಮಾ ಬಿಡುಗಡೆ ಅಗುತ್ತದೆ ಅನ್ನಲಾಗ್ತಿದ್ದು, ಹಬ್ಬದ ಸಂಭ್ರಮದಲ್ಲಿ ಈ ವಿಚಾರವನ್ನು ಘೋಷಿಸುವ ಸುಳಿವು ಸಿಕ್ತಿದೆ. ಈಗಾಗಲೇ ವರಲಕ್ಷ್ಮಿ ಹಬ್ಬದ ದಿನ ಬೆಳಗ್ಗೆ 9 ಗಂಟೆಗೆ ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.

  English summary
  Fans Guessing Darshan Starrer D56 Movie Heroine. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X