For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆದ್ರಾ ರಿಷಬ್ ಶೆಟ್ಟಿ ?

  By Pavithra
  |
  ಫ್ಯಾನ್ ವಾರ್‌ಗೆ ಕಾರಣವಾಯ್ತಾ ಡ್ಯಾನಿಶ್, ರಿಷಬ್ ಟ್ವೀಟ್..? | Filmibeat Kannada

  'ದಿ ವಿಲನ್' ಸಿನಿಮಾ ಟೀಸರ್ ಬಿಡುಗಡೆ ಆಗುವ ಮುಂಚೆ ಒಂದು ರೀತಿಯ ವಿವಾದ ಸೃಷ್ಟಿ ಆಗಿತ್ತು. ಟೀಸರ್ ಬಿಡುಗಡೆ ಆದ ನಂತರ ಹೊಸ ರೀತಿಯಲ್ಲಿ ವಿವಾದ ಹುಟ್ಟಿಕೊಳ್ಳುತ್ತಿದೆ. ಪ್ರೇಮ್ ಸಿನಿಮಾ ಅಂದರೆ ವಿವಾದನಾ? ಅಥವಾ ಮಲ್ಟಿ ಸ್ಟಾರ್ ಗಳ ಚಿತ್ರಗಳು ಅಂದ್ರೆ ವಿವಾದನಾ? ಯಾವುದು ಸತ್ಯ ಅಂತ ಪ್ರೇಕ್ಷಕರು ಕನ್ಫ್ಯೂಸ್ ಆಗಿದ್ದಾರೆ.

  ಟೀಸರ್ ಬಿಡುಗಡೆ ಆಯ್ತು ಅದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಆಯ್ತು. ಆದ್ರೆ ಸದ್ಯ ಶಿವಣ್ಣನ ಅಭಿಮಾನಿಗಳು ನಿರ್ದೇಶಕ, ನಟ ರಿಷಬ್ ಶೆಟ್ಟಿ ಮೇಲೆ ಕೆಂಡ ಕಾರುತ್ತಿದ್ದಾರೆ. ನಿಮ್ಮಿಂದಾನೇ ಫ್ಯಾನ್ಸ್ ವಾರ್ ಆಗುತ್ತಿರುವುದು ಎನ್ನುತ್ತಿದ್ದಾರೆ.

  ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್ ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್

  ಅರೆ 'ದಿ ವಿಲನ್' ಸಿನಿಮಾಗೂ ರಿಷಬ್ ಶೆಟ್ಟಿ ಅವರಿಗೂ ಎಲ್ಲಿಂದ ಎಲ್ಲಿ ಸಂಬಂಧ ಅಂತ ಹುಡುಕುತ್ತಾ ಹೊರಟರೆ ರಿಷಬ್ ಮಾಡಿರುವ ಒಂದೇ ಒಂದು ಟ್ವೀಟ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದ್ಯಂತೆ. ಅಂತಹ ಟ್ವೀಟ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಅಭಿಮಾನಿಗಳ ಕೋಪ ರಿಷಬ್ ಶೆಟ್ಟಿ ಮೇಲೆ

  'ದಿ ವಿಲನ್' ಸಿನಿಮಾ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿತ್ತು. ಅಭಿಮಾನಿಗಳು ಹಾಗೂ ಚಿತ್ರರಂಗದಿಂದಲೂ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಎಲ್ಲರಂತೆ ಟೀಸರ್ ಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ದರು. ಈಗ ಅದೇ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

  ಶಿವಣ್ಣನ ಹೆಸರು ಹಾಕಿಯೂ ಆರೋಪಿ ಆದ ರಿಷಬ್

  ಟ್ವಿಟ್ಟರ್ ನಲ್ಲಿ ರಿಷಬ್ ಶೆಟ್ಟಿ 'ದಿ ವಿಲನ್' ಟೀಸರ್ ವೀವ್ಸ್ ಪಡೆದುಕೊಳ್ಳುತ್ತಿರುವುದನ್ನು ನೋಡಿದರೆ ಯೂಟ್ಯೂಬ್ ನಲ್ಲಿ ರೆಕಾರ್ಡ್ ಬ್ರೇಕ್ ಮಾಡುವಂತಿದೆ ಎಂದು ಶಿವಣ್ಣನ ಹ್ಯಾಂಡಲ್ ಹಾಕಿ ಸುದೀಪ್ ಅವರ ಟೀಸರ್ ಮಾತ್ರ ಶೇರ್ ಮಾಡಿದ್ದರು.

  ಫ್ಯಾನ್ಸ್ ವಾರ್ ಗೆ ನೀವೆ ಕಾರಣ

  ಫ್ಯಾನ್ಸ್ ವಾರ್ ಗೆ ನೀವೆ ಕಾರಣ

  ರಿಷಬ್ ಶೆಟ್ಟಿ ಒಂದೇ ಟೀಸರ್ ಶೇರ್ ಮಾಡಿರುವುದರಿಂದ ಅಭಿಮಾನಿಗಳಲ್ಲಿ ಒಡಕು ಮೂಡಲು ನೀವೆ ಕಾರಣ ಆಗುತ್ತೀರಾ ಎಂದು ಫ್ಯಾನ್ಸ್ ಆರೋಪ ಮಾಡಿದ್ದಾರೆ. ಎಲ್ಲರೂ ಸುದೀಪ್ ಅವರಿಗೆ ಮಾತ್ರ ಸಪೋರ್ಟ್ ಮಾಡುತ್ತೀರಾ ಎಂದು ದೂರಿದ್ದಾರೆ.

  ಶಿವಣ್ಣನ ಅಭಿಮಾನಿಗಳಲ್ಲಿ ಬೇಸರ

  ಶಿವಣ್ಣನ ಅಭಿಮಾನಿಗಳಲ್ಲಿ ಬೇಸರ

  ಟ್ವಿಟ್ಟರ್ ನಲ್ಲಿ ಕನ್ನಡದ ಸಾಕಷ್ಟು ಕಲಾವಿದರು 'ದಿ ವಿಲನ್' ಟೀಸರ್ ಗೆ ನೋಡಿ ಸುದೀಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಬೆರೆಳೆಣಿಕೆ ಕಲಾವಿದರು ಮಾತ್ರ ಶಿವರಾಜ್ ಕುಮಾರ್ ಅವರಿಗೂ ಶುಭ ಕೋರಿದ್ದಾರೆ. ಅದನ್ನು ಬಿಟ್ಟರೆ ಎಲ್ಲಿಯೂ ಶಿವಣ್ಣನ ಟೀಸರ್ ಕಾಣುತ್ತಿಲ್ಲ.

  ವಿವಾದ ಬೇಕಿಲ್ಲ ಎಂದ ಕಿಚ್ಚ ಸುದೀಪ್

  ರಿಷಬ್ ಶೆಟ್ಟಿ ಅವರನ್ನು ಟ್ವಿಟ್ಟರ್ ನಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದನ್ನು ಕಂಡ ಕಿಚ್ಚ ರಿಷಬ್ ಪರವಾಗಿ ಟ್ವೀಟ್ ಮಾಡಿದ್ದಾರೆ. "ಶಿವಣ್ಣ ನಮ್ಮೆಲ್ಲರಿಗಿಂತಲೂ ದೊಡ್ಡವರು ಹಾಗೂ ಅವರ ಮೇಲೆ ನಮ್ಮೆಲ್ಲರಿಗೂ ಪ್ರೀತಿ ಮತ್ತು ಗೌರವ ಇದೆ. ಈ ರೀತಿಯಲ್ಲಿ ನಡೆದುಕೊಳ್ಳುವುದು ತಪ್ಪು" ಎಂದಿದ್ದಾರೆ.

  English summary
  Kannada actor Shivaraj Kumar fans has been angry with director Rishab Shetty ,Rishab Shetty sharing Sudeep's teaser on twitter is due to fans' anger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X