»   » ಕನ್ನಡದಲ್ಲಿ ರಿಲೀಸ್ ಆಗ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್-8'

ಕನ್ನಡದಲ್ಲಿ ರಿಲೀಸ್ ಆಗ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್-8'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ಇರುವ ಹಿನ್ನೆಲೆ ಒಂದೊಂದೆ ಚಿತ್ರಗಳು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ತಮಿಳು ನಟ ಅಜಿತ್ ಕುಮಾರ್ ಅಭಿನಯದ ತಮಿಳಿನ ಸಿನಿಮಾ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಆಗಿ ರಿಲೀಸ್ ಆಗಿತ್ತು. ಈಗ ಹಾಲಿವುಡ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ತೆರೆ ಕಾಣಲು ಸಿದ್ದವಾಗಿದೆ.

ಹೌದು, ಹಾಲಿವುಡ್ ಸೂಪರ್ ಹಿಟ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್-8' ಈಗ ಕನ್ನಡದಲ್ಲಿ 'ವೇಗ ಮತ್ತು ಉದ್ವೇಗ-8' ಎಂಬ ಹೆಸರಿನಲ್ಲಿ ಚಿತ್ರಮಂದಿರಕ್ಕೆ ಬರಲು ಸಿದ್ದವಾಗಿದೆ.

Fast And Furious 8 Kannada dubbing movie Release on 1st September

ಹಾಲಿವುಡ್ ನ 'ಸ್ಪೈಡರ್ ಮ್ಯಾನ್' ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಯ್ಯೂಟ್ಯುಬ್ ನಲ್ಲಿ ಟ್ರೈಲರ್ ರಿಲೀಸ್ ಮಾಡಿದ್ದರು. ಇದೀಗ, ಹಾಲಿವುಡ್ ನಟರಾದ ವಿನ್ ಡಿಸೇಲ್, ಡ್ವೇನ್ ಜಾನ್ಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಫಾಸ್ಟ್ ಅಂಡ್ ಫ್ಯೂರಿಯಸ್-8' ಕನ್ನಡಕ್ಕೆ ಡಬ್ ಆಗಿದ್ದು, ಟ್ರೈಲರ್ ಬಿಡುಗಡೆ ಮಾಡಿದೆ.

ಅಂದ್ಹಾಗೆ, 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಹಾಲಿವುಡ್ ಚಿತ್ರ ಮುಂಬೈನಲ್ಲಿ ಕನ್ನಡಕ್ಕೆ ಡಬ್ ಆಗಿದ್ದು, ಖ್ಯಾತ ಬರಹಗಾರರು ಮತ್ತು ಕಂಠದಾನ ಕಲಾವಿದರು ಆದ ಜಯಶೀಲ ಸುವರ್ಣ ಮತ್ತು ಅರುಷಾ ಎನ್.ಶೆಟ್ಟಿ ಎಂಬುವವರು ಡಬ್ಬಿಂಗ್ ಗೆ ನಿರ್ದೇಶನ ನೀಡಿ ವಾಯ್ಸ್ ನೀಡಿದ್ದಾರೆ. ಟ್ರೈಲರ್ ನಲ್ಲಿ ಉಲ್ಲೇಖಿಸಿರುವಂತೆ ಸೆಪ್ಟಂಬರ್ 1 ರಂದು ಭಾರತ 'ವೇಗ ಮತ್ತು ಉದ್ವೇಗ 8' ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಲಿದೆ.

English summary
Hollywood film Fast And Furious-8 Kannada dubbing movie Release on September 1st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada