For Quick Alerts
  ALLOW NOTIFICATIONS  
  For Daily Alerts

  ಸುರಿವ ಮಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ಭಾರಿ ಫೈಟ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ಹಾಡುಗಳು, ಪಂಚಿಂಗ್ ಡೈಲಾಗ್ ಗಳು ಎಷ್ಟು ಮುಖ್ಯವೋ ಫೈಟ್ ಗಳಿಗೂ ಅಷ್ಟೇ ಪ್ರಾಮುಖ್ಯತೆ ಇರುತ್ತದೆ. ಭಾರಿ ಬಜೆಟ್ ನಲ್ಲಿ ಡಿ.ಸುರೇಶ್ ಗೌಡ ಹಾಗೂ ಪಿ.ಎಸ್. ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಬೃಂದಾವನ ಚಿತ್ರದ ಸಾಹಸ ಸನ್ನಿವೇಶಗಳನ್ನು ಗಜೇಂದ್ರಗಡದಲ್ಲಿ ಚಿತ್ರೀಕರಿಸಲಾಗುತ್ತಿದೆ.

  ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ ಪ್ರೈ. ಲಿ.ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರ ದರ್ಶನ್ ಅವರ ಮತ್ತೊಂದು ಅದ್ದೂರಿ ಚಿತ್ರ. ಮೈಸೂರಿನ ಲಲಿತಮಹಲ್, ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತ ಹಲವಾರು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.

  ಹೊಡೆದಾಟದ ಸನ್ನಿವೇಶವನ್ನು ನಂಜನಗೂಡು, ಮೇಲುಕೋಟೆ ಸುತ್ತಮುತ್ತ ಗೀತೆಯೊಂದನ್ನು ಕಲೈ ನೃತ್ಯ ನಿರ್ದೇಶನದೊಂದಿಗೆ ಹಾಗೂ ಕುಶಾಲನಗರದಲ್ಲಿ ಭಾರೀ ಸುರಿವ ಮಳೆಯಲ್ಲೂ ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ಹೊಡೆದಾಟದ ಸನ್ನಿವೇಶವನ್ನು ಸೆರೆಹಿಡಿದುಕೊಳ್ಳಲಾಯಿತು. ದರ್ಶನ್, ಕಾರ್ತಿಕಾ, ಮಿಲನಾ, ಸಾಯಿಕುಮಾರ್, ಸಾಧುಕೋಕಿಲ, ಜೈ ಜಗದೀಶ್ ಮುಂತಾದವರ ಅಭಿನಯದೊಂದಿಗೆ ರಮೇಶ್ ಬಾಬು ಛಾಯಾಗ್ರಹಣದಲ್ಲಿ ನಿರ್ದೇಶಕ ಮಾದೇಶ್ ಚಿತ್ರಿಸಿಕೊಂಡರು.

  ಹೊಡೆದಾಟದ ಸನ್ನಿವೇಶಗಳನ್ನು ಏಳು ಕ್ಯಾಮರಾ, ಜಿಮ್ಮಿ ಜಿಪ್, ಬಳಸಿ ಚಿತ್ರಿಸಿಕೊಳ್ಳಲಾಯಿತು. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಜುಲೈ ಹದಿನೈದರವರೆವಿಗೂ ಮುಂದುವರೆಯಲಿದೆ ಎಂದು ನಿರ್ಮಾಪಕ ಪಿ.ಎಸ್. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

  ಚಿತ್ರಕ್ಕೆ ಕೆ.ವಿ. ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್ ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್ ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ಗಣೇಶ್ (ಹೈದರಾಬಾದ್) ನೃತ್ಯ, ಲಿಂಗರಾಜು ನಿರ್ದೇಶನ ಸಹಕಾರ, ಸುಂದರರಾಜ್ ನಿರ್ಮಾಣ ಮೇಲ್ವಿಚಾರಣೆ, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆಯಿದೆ. ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಕೆ. ಮಾದೇಶ್.

  ತಾರಾಗಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾರ್ತಿಕಾ ನಾಯರ್, ಮಿಲನಾ, ಗೀತಾ, ಶರತ್ ಬಾಬು, ಸಾಯಿಕುಮಾರ್, ನಿರೋಷಾ, ಜೈಜಗದೀಶ್, ಸಂಗೀತಾ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಜಾನ್ ಕೋಕೈನ್, ಅಜಯ್ ಹೈದರಾಬಾದ್, ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Challenging Star Darshan, Karthika Nair and Milana Nagaraj starrer Brindavana fight sequence are shot near Mysore. The film, a remake of Telugu hit Brindavanam (2010), is directed by K. Madesha and produced by Suresh Gowda under the Sri Seethabaireshwara Productions banner. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X