»   » ಹಿರಿಯ ನಟ ದತ್ತಣ್ಣಗೆ ಅಂತಾರಾಷ್ಟೀಯ ಪ್ರಶಸ್ತಿಯ ಗರಿ

ಹಿರಿಯ ನಟ ದತ್ತಣ್ಣಗೆ ಅಂತಾರಾಷ್ಟೀಯ ಪ್ರಶಸ್ತಿಯ ಗರಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಅತ್ಯುತ್ತಮ ನಟರ ಸಾಲಿನಲ್ಲಿ ನಿಲ್ಲುವ ಖ್ಯಾತ ಹಿರಿಯ ನಟ ದತ್ತಣ್ಣ ಯಾನೆ ಎಚ್ ಜಿ ದತ್ತಾತ್ರೇಯ ಅವರಿಗೆ ಫಿಜಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (2013ನೇ ಸಾಲಿಗೆ) ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಮುನ್ನುಡಿ, ಅತಿಥಿ, ಬೇರು ಮತ್ತು ಭಾರತ್ ಸ್ಟೋರ್ಸ್ ಚಿತ್ರಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪಿ ಶೇಷಾದ್ರಿ ನಿರ್ದೇಶನದ ಮತ್ತು ಬಸಂತ್ ಕುಮಾರ್ ಪಾಟೀಲ್ ನಿರ್ಮಾಣದ 'ಭಾರತ್ ಸ್ಟೋರ್ಸ್' ಚಿತ್ರದ ನಟನೆಗಾಗಿ ದತ್ತಣ್ಣ ಅವರಿಗೆ ಈ ಪ್ರಶಸ್ತಿ ಒಲಿದಿದೆ.

H G Dattatreya won the best actor award in Fiji Film Festival

ಪ್ರಶಸ್ತಿಯು ಬಂಗಾರದ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಫಿಜಿಯಲ್ಲಿನ ಭಾರತದ ಹೈಕಮಿಷನರ್ ಆಗಿರುವ ವಿನೋದ್ ಕುಮಾರ್ ಅವರು ವರ್ಣರಂಜಿತ ಸಮಾರಂಭದಲ್ಲಿ ಭಾರತ್ ಸ್ಟೋರ್ಸ್ ಚಿತ್ರತಂಡದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಎಫ್ ಡಿ ಐ ವಿಷಾಯಾಧಾರಿತ ಭಾರತ್ ಸ್ಟೋರ್ಸ್ ಚಿತ್ರದಲ್ಲಿ ದತ್ತಣ್ಣ, ಸುಧಾರಾಣಿ, ಗುರುದತ್ ಪ್ರಮುಖ ಭೂಮಿಕೆಯಲ್ಲಿದ್ದರು. ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದರು. ಚಿತ್ರಕ್ಕೆ ಒಲಿದ ಎರಡನೇ ಪ್ರಶಸ್ತಿ ಇದಾಗಿದೆ.

60ನೇ ನ್ಯಾಷನಲ್ ಫಿಲಂ ಅವಾರ್ಡಿನಲ್ಲಿ ಈ ಚಿತ್ರಕ್ಕೆ ಕನ್ನಡದ ಬೆಸ್ಟ್ ಫೀಚರ್ ಫಿಲಂ ಪ್ರಶಸ್ತಿ ಬಂದಿತ್ತು. ಈ ಮೊದಲು 'ಮುನ್ನುಡಿ' ಚಿತ್ರದಲ್ಲಿ ನೀಡಿದ ಮನೋಜ್ಞ ಅಭಿನಯಕ್ಕಾಗಿ ದತ್ತಣ್ಣ ಅವರಿಗೆ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ದತ್ತಣ್ಣ ಅವರಿಗೆ ಸಮಸ್ತ ಒನ್ ಇಂಡಿಯಾ ಓದುಗರ ಪರವಾಗಿ ಅಭಿನಂದನೆಗಳು.

English summary
Senior Actor H G Dattatreya won the best actor award in the Fiji Film Festival 2013 for his outstanding performance in Kannada movie 'Bharat Stores'. Congratulations to Dattanna. 
Please Wait while comments are loading...