Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಲಾರ್ ನೋಡಿ ಮಾತೇ ಹೊರಡುತ್ತಿಲ್ಲ.. ಪ್ರಭಾಸ್ ಮತ್ತೆ ತಿರುಗೇಟು ಕೊಡ್ತಾರೆ' ಎಂದ ವಿಮರ್ಶಕ!
'ಬಾಹುಬಲಿ'ಯಂತಹ ರೆಕಾರ್ಡ್ ಬ್ರೇಕಿಂಗ್ ಸಿನಿಮಾ ಬಳಿಕ ಪ್ರಭಾಸ್ ಬಾಕ್ಸಾಫೀಸ್‌ನಲ್ಲಿ ಘರ್ಜಿಸುತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಇತ್ತೀಚೆಗೆ 'ಆದಿಪುರುಷ್' ಟೀಸರ್ ಕೂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಡಾರ್ಲಿಂಗ್ ಫ್ಯಾನ್ಸ್ ಕೂಡ ನಿರಾಸೆ ವ್ಯಕ್ತಪಡಿಸಿದ್ದರು.
ಈ ಕಾರಣಕ್ಕೆ ಪ್ರಭಾಸ್ ಮುಂದಿನ ಭವಿಷ್ಯವೇನು? ಅಂತ ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದರು. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದ ಮೇಲೆ ಭಾರ ಹಾಕಿ ಕೂತಿದ್ದರು. ಈ ಬೆನ್ನಲ್ಲೇ ಯುಕೆ ಹಾಗೂ ಯುಎಇ ಮೂಲದ ಸಿನಿಮಾ ವಿಮರ್ಶಕ ಉಮೈರ್ ಸಂಧು 'ಸಲಾರ್' ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
'ಸಲಾರ್'
ಸಿನಿಮಾದಲ್ಲಿ
ನಟಿಸಿ
ಬರುತ್ತಿದ್ದಂತೆ
'ಬಾಂಡ್
ರವಿ'
ರಿಲೀಸ್‌ಗೆ
ಮುಹೂರ್ತ
ಫಿಕ್ಸ್!
'ಸಲಾರ್' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ನಿರೀಕ್ಷೆಯೇನು ಕಮ್ಮಿಯಿಲ್ಲ. 2023ಯಲ್ಲಿ ಈ ಸಿನಿಮಾ ರಿಲೀಸ್ ರೆಡಿಯಾಗಿದ್ದು, 'ಆದಿಪುರುಷ್' ಬಿಡುಗಡೆ ಮೇಲೆ ಎಲ್ಲವೂ ನಿಂತಿದೆ. ಆದ್ರೀಗ ಉಮೈರ್ ಸಂಧು 'ಸಲಾರ್' ತುಣುಕುಗಳನ್ನು ನೋಡಿದ್ದಾಗಿ ಕೇಳಿಕೊಂಡಿದ್ದಾರೆ. ಅದೇ ಈಗ ಕುತೂಹಲವನ್ನ ಸೃಷ್ಟಿಸಿದೆ.

30 ಸೆಕೆಂಡುಗಳ 'ಸಲಾರ್' ಹೇಗಿದೆ?
ಉಮೈರ್ ಸಂಧು ಭಾರತೀಯ ಸಿನಿಮಾಗಳ ಬಗ್ಗೆ ಆಗಾಗ ಏನಾದರು ಸುದ್ದಿಗಳನ್ನು ತಿಳಿಸುತ್ತಲೇ ಇರುತ್ತಾರೆ. ಈಗ 'ಸಲಾರ್' ಸಿನಿಮಾದ ಬಗ್ಗೆ ಖುಷಿ ಪಡುವಂತಹ ಸುದ್ದಿಯೊಂದನ್ನು ಹೊತ್ತು ತಂದಿದ್ದಾರೆ. " ಸಲಾರ್ ಸಿನಿಮಾದ 30 ಸೆಕೆಂಡುಗಳ ದೃಶ್ಯವನ್ನು ನೋಡಿದೆ. ಮಾತೇ ಹೊರಡುತ್ತಿಲ್ಲ. ರೋಮಾಂಚನ ಎಂದೆನಿಸಿತ್ತು. 2023ಯಲ್ಲಿ ಪ್ರಭಾಸ್ ಕಂಡಿತಾ ತಿರುಗೇಟು ಕೊಡುತ್ತಾರೆ." ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'ಸಲಾರ್' ಸಿನಿಮಾದಲ್ಲಿ ವಿಜಯ್, ಪೃಥ್ವಿರಾಜ್
ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' 2023ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. 'ಕೆಜಿಎಫ್ 2' ದಾಖಲೆ ಗಳಿಕೆ ಬಳಿಕ 'ಸಲಾರ್' ಮೇಲೆ ಎಲ್ಲರ ನಿರೀಕ್ಷೆಯಿದೆ. ಇದರೊಂದಿಗೆ ಒಬ್ಬೊಬ್ಬರೇ ನಟರು ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಅತಿಥಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಿನಿಪ್ರಿಯರಿಗೆ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ವಿಜಯ್ ದೇವರಕೊಂಡ ಪ್ರಭಾಸ್ ತಮ್ಮ
ವಿಜಯ್ ದೇವರಕೊಂಡ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಸಹೋದರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ 'ಸಲಾರ್' ಸೆಟ್‌ನಲ್ಲಿ ಇರುವ ಫೋಟೊ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಈ ಫೋಟೊ 'ಸಲಾರ್' ಸಿನಿಮಾದ ಸೆಟ್‌ನಲ್ಲಿದ್ದು ಅಲ್ಲ. ಅದು ಜಾಹೀರಾತಿಗಾಗಿ ಸೆಟ್‌ನಲ್ಲಿ ಫೋಟೊ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೂ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ.

'ಸಲಾರ್' ರಿಲೀಸ್ ಯಾವಾಗ?
ಪ್ರಭಾಸ್ ಸಿನಿಮಾ 'ಸಲಾರ್' ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಅನೌನ್ಸ್ ಮಾಡಿದೆ. ಆದರೆ, 'ಆದಿಪುರುಷ್'ಗೂ 'ಸಲಾರ್'ಗೂ 9 ತಿಂಗಳ ಅಂತರವಿತ್ತು. ಆದ್ರೀಗ 'ಆದಿಪುರುಷ್' ರಿಲೀಸ್ ಡೇಟ್ ಅನ್ನು ಮುಂದೂಡಲಾಗಿದ್ದು, ಜೂನ್ 16ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ 'ಸಲಾರ್' ಕೂಡ ಮುಂದಕ್ಕೆ ಹೋಗುತ್ತಾ? ಇಲ್ಲಾ ಅದೇ ಡೇಟ್‌ನಲ್ಲಿಯೇ ರಿಲೀಸ್ ಆಗುತ್ತಾ? ಅನ್ನೋ ಅನುಮಾನ ಎಲ್ಲರಲ್ಲೂ ಇದೆ.