For Quick Alerts
ALLOW NOTIFICATIONS  
For Daily Alerts

  ಚಿತ್ರರಂಗವೆಂಬ ಬಣ್ಣದ ಜಗತ್ತಿನ 'ಡೈವೋರ್ಸ್' ದುನಿಯಾ

  |

  ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿತ್ತು. ಅಡುಗೆ ಕೋಣೆಯಿಂದ ಆರಂಭವಾಗುವ ಸತಿ ಪತಿ ಜಗಳಗಳು ಬೆಡ್ ರೂಮಿನಲ್ಲಿ ಅಂತ್ಯ ಗೊಳ್ಳುತಿದ್ದ ಕಾಲವಿತ್ತು. ಅದಕ್ಕೆ ಏನೋ ದೊಡ್ಡವರು ಈ ಗಾದೆ ಮಾತನ್ನು ಬರೆದಿದ್ದರು.

  ದಶಕಗಳ ಕೆಳಗೆ 'ಡೈವೋರ್ಸ್' ಎನ್ನುವ ಪದವನ್ನು dirty word ಅನ್ನುತ್ತಿದ್ದರು. ಆದರೆ ಈಗಿನ ವೈಜ್ಞಾನಿಕ ಬದುಕಿನಲ್ಲಿ ಗಂಡ ಹೆಂಡಿರ ಜಗಳ ಉಂಡು ಮಲಗುವಲ್ಲಿ ಕೊನೆಗೊಳ್ಳದೆ ಕೊಲೆ, ಆತ್ಮಹತ್ಯೆ, ವಿಚ್ಛೇದನ, ಕೌಟುಂಬಿಕ ನ್ಯಾಯಾಲಯದ ಕಡೆಗೆ ಹೆಚ್ಚಾಗಿ ತಿರುಗುತ್ತಿರುವುದು ಬೇಸರದ ಸಂಗತಿ.

  ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ, ಆದರೆ ಕೋರ್ಟಿನಲ್ಲಿ ಖುಲಾಸೆಯಾಗುತ್ತವೆ ಎನ್ನುವಂತೆ ವಿವಾಹ ಕಾಯ್ದೆಯಲ್ಲಿ ಕೇಂದ್ರ ಸರಕಾರ ತಿದ್ದುಪಡಿ ತಂದ ನಂತರ ವಿಚ್ಛೇದನ ಪ್ರಕ್ರಿಯೆ ಈಗ ಸರಳ.

  ಡಬ್ಲ್ಯುಡಿಎಸ್ (widowed/divorced or separated) ಸರ್ವೇ ಪ್ರಕಾರ ತಮಿಳುನಾಡಿನಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದ್ದು.

  ವಿವಾಹ ವಿಚ್ಛೇದನದ ವಿಷಯದಲ್ಲಿ ಜನ ಸಾಮಾನ್ಯರದ್ದು ಈ ರೀತಿಯ ಬವಣೆಯಾದರೆ, ಚಿತ್ರರಂಗದ ಮಂದಿಯ ತೆರೆಯ ಹಿಂದಿನ ಕಥೆಯೇನು? ಕನ್ನಡ ಚಿತ್ರರಂಗ ಸೇರಿ ಸೆಲೆಬ್ರಿಟಿ ಜಗತ್ತಿನ ಕೆಲವು ಪ್ರಮುಖ ವಿವಾಹ ವಿಚ್ಛೇದನ ಪ್ರಕರಣಗಳು ಫೋಟೋ ಸ್ಲೈಡ್ ನಲ್ಲಿ ನೋಡಿ ..

  ಟೈಗರ್ ಪ್ರಭಾಕರ್ - ಜಯಮಾಲಾ

  ಕಾಡಿನ ರಹಸ್ಯ ಚಿತ್ರದಲ್ಲಿ ಖಳನಟನಾಗಿ ಬೆಳ್ಳಿತೆರೆಗೆ ಪ್ರವೇಶಿಸಿದ ಪ್ರಭಾಕರ್ ಮಂಗಳೂರು ಚೆಲುವೆ ಜಯಮಾಲರನ್ನು ಮದುವೆಯಾದರು. ಡಯಾಬೆಟಿಕ್ ಗ್ಯಾಂಗ್ರಿನ್ ಕಾಯಿಲೆ ವಿಪರೀತಕ್ಕೆ ತಿರುಗಿ ವೈದ್ಯರು ಒಂದು ಕಾಲು ಕತ್ತರಿಸುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೆ ಒಪ್ಪದ ಪ್ರಭಾಕರ್ ನಂತರ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ 25.03.2001ರಲ್ಲಿ ನಿಧನರಾದರು. ಪ್ರಭಾಕರ್ ನಿಧನಕ್ಕೂ ಮುಂಚೆಯೇ ಅವರ ಮತ್ತು ಜಯಮಾಲ ನಡುವೆ ವಿವಾಹ ವಿಚ್ಚೇದನವಾಗಿತ್ತು. ಛಾಯಾಗ್ರಾಹಕ ಎಚ್ ಎಂ ರಾಮಚಂದ್ರ ಅವರನ್ನು ಜಯಮಾಲ ನಂತರ ಮದುವೆಯಾದರು.

  ಶ್ರುತಿ - ಮಹೇಂದರ್

  ಮಹೇಂದರ್ ಮತ್ತು ಶ್ರುತಿ ಅವರ ಮದುವೆ 1998ರಲ್ಲಿ ಪುರಿ ಜಗನ್ನಾಥ ದೇವಾಲಯದಲ್ಲಿ ಆಗಿತ್ತು. ಇವರಿಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿ ಅಂತರ್ಜಾತಿಯ ವಿವಾಹ ಮಾಡಿಕೊಂಡಿದ್ದರು. ಬಿಜೆಪಿ ಕಾರ್ಯಕರ್ತರಾಗಿಯೂ ಶ್ರುತಿ ಮತ್ತು ಮಹೇಂದರ್ ದಂಪತಿಗಳು ಸಕ್ರಿಯರಾಗಿದ್ದರು. ಆದರೆ 05.05.2009ರಂದು ಶ್ರುತಿ ವಿವಾಹ ವಿಚ್ಛೇದನಕ್ಕಾಗಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಎಸ್ ಮಹೇಂದರ್ ಜೊತೆಗಿನ ದಾಂಪತ್ಯ ಜೀವನ ಅಂತ್ಯವಾಯಿತು.

  ಪ್ರಕಾಶ್ ರೈ - ಲಲಿತಾ ಕುಮಾರಿ

  ಪ್ರಕಾಶ್ ರೈ ಅವರು ಲಲಿತಾ ಕುಮಾರಿ ಅವರನ್ನು ಡಿಸೆಂಬರ್ 25, 1994ರಲ್ಲಿ ಮದುವೆಯಾಗಿದ್ದರು. ಮದುವೆಯಾದ 15 ವರ್ಷಗಳ ಬಳಿಕ ಪ್ರಕಾಶ್ ರೈ ಯಾನೆ ಪ್ರಕಾಶ್ ರಾಜ್ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕಾಶ್ ರೈ ದಂಪತಿಗಳನ್ನು ಒಂದು ಮಾಡಲು ಕಾನೂನನ್ನು ಬದಿಗಿಟ್ಟು ವಕೀಲರು ಸಾಕಷ್ಟು ಶ್ರಮಿಸಿದ್ದರು. ಆದರೆ ಅವರ ಪ್ರಯತ್ನ ಫಲಕಾರಿಯಾಗದೆ ಪ್ರಕಾಶ್ - ಲಲಿತಾ ಜೀವನ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಪ್ರಕಾಶ್ ರೈ ಬಾಲಿವುಡ್ ನ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಮದುವೆಯಾಗಿದ್ದಾರೆ.

  ಅರವಿಂದ್ ಸ್ವಾಮಿ - ಗಾಯತ್ರಿ

  ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ, ಬಾಂಬೆ ಚಿತ್ರಗಳಲ್ಲಿ ನಟಿಸುವ ಮೂಲಕ ಅರವಿಂದ ಸ್ವಾಮಿ ಚಿತ್ರರಸಿಕರ ಮನಗೆದ್ದಿದ್ದರು.ಸತತ ಎರಡು ವರ್ಷಗಳಿಂದ ಅರವಿಂದ್ ಸ್ವಾಮಿ ತಮ್ಮ ಪತ್ನಿ ಗಾಯತ್ರಿ ಅವರಿಂದ ವಿವಾಹ ವಿಚ್ಛೇದನಕ್ಕಾಗಿ ಪ್ರಯತ್ನಿಸುತ್ತಿದ್ದರು. 02.06.2010ರಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಲಯ ಇವರ ವಿವಾಹ ವಿಚ್ಛೇದನಕ್ಕೆ ಅಸ್ತು ಎಂದಿತ್ತು.

  ದುನಿಯಾ ವಿಜಯ್ - ನಾಗರತ್ನ

  ಬ್ಲ್ಯಾಕ್ ಕೋಬ್ರಾ, ನಟ ದುನಿಯಾ ವಿಜಯ್ ತಮ್ಮ ಪತ್ನಿಗ ನಾಗರತ್ನ ಅವರಿಗೆ ವಿಚ್ಛೇದನ ನೀಡಲು ಬಯಸಿ ಇದೇ ಜನವರಿ 17ರಂದು ಅರ್ಜಿ ಸಲ್ಲಿಸಿದ್ದಾರೆ. ಹದಿನಾಲ್ಕು ವರ್ಷಗಳಷ್ಟು ಸುದೀರ್ಘ ಸಮಯ ಸಂಸಾರದ ಬಂಡಿ ಎಳೆದು ಕೊಂಡು ಬಂದಿದ್ದ ವಿಜಯ್ ಈಗ ನಾಗರತ್ನ ಜೊತೆ ಸಂಸಾರ ಬೇಡವೆಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆದರೆ ವಿಜಿ ಪತ್ನಿ ಮಾತ್ರ ತಾನು ತನ್ನ ಗಂಡನೊಂದಿಗೇ ಬದುಕುತ್ತೇನೆ ಎನ್ನುತ್ತಿದ್ದಾರೆ. ಇವರಿಗೆ ಮೂರು ಮಕ್ಕಳು. ಈ ದಂಪತಿಗಳ ವಿಷಯ ಈಗ ರೆಬೆಲ್ ಸ್ಟಾರ್ ಅಂಬರೀಶ್ ಮನೆಯಂಗಣದಲ್ಲಿದೆ.

  English summary
  Film industries five divorced couples. Prabhakar - Jayamala, Shruthi - Mahendar, Prakash Rai - Lalita Kumari, Arvind Swamy - Gayathri. And now Duniya Vijay applied divorce application to his wife Nagarathna.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more