For Quick Alerts
  ALLOW NOTIFICATIONS  
  For Daily Alerts

  ಅಪ್ಪು ನೆನೆದು ದುಖಃತಪ್ತರಾದ ಚಂದನವನದ ತಾರೆಯರು!

  |

  ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಕೊನೆಯ ಉಸಿರೆಳೆದಿದ್ದಾರೆ. ಪುನೀತ್ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಇಷ್ಟು ಕೈ ಪುನೀತ್ ಎಲ್ಲರನ್ನೂ ಬಿಟ್ಟು ಹೋಗ್ತಾರೆ ಅನ್ನುವ ಕಹಿಸತ್ಯ ಸದ್ಯ ಎಲ್ಲರನ್ನೂ ಬಾಧಿಸುತ್ತಿದೆ ಅಪ್ಪುವನ್ನು ನೆನೆದು ಅವರ ಅಭಿಮಾನಿ ಬಳಗ ಚಿತ್ರರಂಗ ಇಡೀ ಕರುನಾಡೆ ಕಣ್ಣೀರು ಹತ್ತಿದೆ.

  ಸದಾ ಸರಳತೆಯಿಂದ ನಗುಮುಖದಿಂದ ಇರ್ತಾ ಇದ್ದ ಪುನೀತ್‌ ರಾಜಕುಮಾರ್ ರನ್ನ ಅಜಾತ ಶತ್ರು ಎಂದರೆ ಹೇಳಬಹುದು. ಅಪ್ಪು ಅಂದ್ರೆ ಎಲ್ಲರಿಗೂ ಅಪ್ಪಿ ಕೊಳ್ಳುವಷ್ಟು ಪ್ರೀತಿ. ಸಿನಿಮಾ ರಂಗದ ಸಾಕಷ್ಟು ಮಂದಿ ಅಪ್ಪುಗಾಗಿ ಕಣ್ಣೀರು ಹಾಕಿದ್ದಾರೆ. ಅಪ್ಪು ಅಗಲಿಕೆಯನ್ನ ಜೀರ್ಣಿಸಿಕೊಳ್ಳಲಾಗದೆ ಮನ ಮಿಡಿಯುತ್ತಿದ್ದಾರೆ.

  ಅಪ್ಪು ನೆನೆದು ಕಣ್ಣೀರಿಟ್ಟ ನಟಿ ರಮ್ಯಾ

  ಅಪ್ಪು ಅಗಲಿಕೆ ನಂಬೋಕೆ ಆಗೊಲ್ಲ.. ದ್ವಿತ್ವ ಸಿನಿಮಾ ಲಾಂಚ್‌ ಸಮಯದಲ್ಲಿ ಮಾತಾಡಿದ್ದಿವಿ ಅದೆ ಕೊನೆ. ನಾನು ಕಮ್‌ ಬ್ಯಾಕ್‌ ಮಾಡಿದ್ರೆ ನಿಮ್ಮ ಜೊತೆಗೆನೆ ಅಂತ ಹೇಳಿದ್ದೆ. ಅವರು ಕೂಡ ಒಂದೊಳ್ಳೆ ಸಿನಿಮಾ ಮಾಡೋಣ ಅಂತ ಹೇಳಿದ್ದರು. ಅದೆ ಕೊನೆದಾಗಿ ಅಪ್ಪು ಜೊತೆಗೆ ಮಾತಾಡಿದ್ದು ರಮ್ಯ ಭಾವುಕರಾಗಿದ್ದಾರೆ. ಪ್ರತಿ ಚಿತ್ರದಲ್ಲಿ ಅಭಿನಯಿಸಿದಾಗ ತುಂಬಾ ನಗಿಸುವರು, ಡಲ್‌ನಲ್ಲಿ ನಾನು ಅವ್ರನ್ನ ನೋಡೆ ಇಲ್ಲ. ಸದಾ ಕಾಲೆಳೆದು ನಗಿಸುತ್ತ ಇದ್ದರು. ನಾನು ಟೆನ್ಷನ್‌ನಲ್ಲಿ ಇದ್ದರೆ ಯಾಕೆ ಅಂತ ಕೇಳುತ್ತಿದ್ರು, ಖುಷಿಯಾಗಿ ಇರಿ ಎಂದು ಸದಾ ಹೇಳುತ್ತಿದ್ದರು. ನಾನು ರಾಜಕೀಯಕ್ಕೆ ಹೋದಾಗಲು ಉತ್ತಮ ಸಪೋರ್ಟ್ ಮಾಡಿದ್ದರು. ಅಭಿಮಾನಿಗಳನ್ನ ತುಂಬಾ ಗೌರವದಿಂದ ನೋಡಿಕೊಳ್ಳುತ್ತಾ ಇದ್ದರು. ಅವರ ಜೊತೆಗೆ ಸಿನಿಮಾ ಮಾಡಿ ನಾನು ತುಂಬಾ ಒಳ್ಳೆ ಗುಣಗಳನ್ನ ಕಲಿತಿದ್ದೇನೆ. ಅವರು ಪ್ರತಿಯೊಬ್ಬರನ್ನು ಸಪೋರ್ಟ್ ಮಾಡುತ್ತಾ ಇದ್ದರು. ಯಾವುದಕ್ಕೂ ಇಲ್ಲ ಅಂತ ಇರಲಿಲ್ಲ. ಚಿತ್ರರಂಗದಲ್ಲಿ ಎಲ್ಲರೂ ಬದಲಾಗುತ್ತಾರೆ. ಆದರೆ ಅಪ್ಪು ಬದಲಾಗಲಿಲ್ಲ ಎಂದು ರಮ್ಯ ಭಾವುಕರಾದರು.

  ಅಪ್ಪು ಅಂತರಾಳದ ಬಗ್ಗೆ ಮಾತನಾಡಿದ ಅನಂತನಾಗ್

  ಈ ವಿಚಾರ ಕೇಳಿ ಗರಬಡಿದಂಗೆ ಆಯ್ತು, ಕೈ ಚೆಲ್ಲಿ ಕೂತಿದ್ದೇನೆ ಎಂದು ನಟ ಅನಂತ್‌ನಾಗ್‌ ದುಖಃ ತಪ್ತರಾದ್ರು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಾರದನ ಪಾತ್ರ ಮಾಡಿದ್ದೇ, ಆಗ ಅಪ್ಪು ತೊದಲು ಮಾತಾಡುತ್ತಾ ಇದ್ದರು. ಪರಮಾತ್ಮ ಸಿನಿಮಾದಲ್ಲೂ ಅವರೊಟ್ಟಿಗೆ ನಟಿಸಿದ್ದೆ. ಇದು ದೊಡ್ಡ ದುರಂತ- ನಟ ಅನಂತ್‌ನಾಗ್‌

  ಹೀಗೆ ಸಿನಿಮಾ ತಾರೆಯರು ಕಪ್ಪು ಜೊತೆಗೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಪ್ಪು ಅಂತಹ ಅಪರೂಪದ ರತ್ನ ಮತ್ತೆ ಸಿಗಲು ಸಾಧ್ಯವಿಲ್ಲ. ಅಪ್ಪು ಇಷ್ಟು ಬೇಗ ನಮ್ಮೆಲ್ಲರನ್ನು ಆಗಲಿ ಹೋಗಬಾರದಿತ್ತು. ಎಂದು ಭಾರವಾದ ಮನಸ್ಸಿನಿಂದಲೇ ಅನಿವಾರ್ಯವಾಗಿ ಭಾವುಕ ನಮನವನ್ನು ಸಲ್ಲಿಸುತ್ತಿದ್ದಾರೆ.

  English summary
  Celebrity Shocking Over Puneeth Rajkumar Death

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X