For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಹೊಸ ಇತಿಹಾಸ ಬರೆದ ನಮ್ ಏರಿಯಾದಲ್ಲಿ

  By Rajendra
  |

  ಸೆಂಚುರಿ ವೀರ ಶಿವರಾಜ್ ಕುಮಾರ್ ಅಭಿನಯದ 'ಸುಗ್ರೀವ; ಚಿತ್ರವನ್ನು ದಾಖಲೆ ಸಮಯದಲ್ಲಿ ಚಿತ್ರೀಕರಿಸಿ ಹೊಸ ದಾಖಲೆ ನಿರ್ಮಿಸಲಾಗಿತ್ತು. 'ಸುಗ್ರೀವ' ಚಿತ್ರವನ್ನು ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸುವ ಮೂಲಕ ನಿರ್ಮಾಪಕ ಅಣಜಿ ನಾಗರಾಜ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು.

  ಈಗ ಆ ದಾಖಲೆಯನ್ನು ನಾಮಾವಶೇಷ ಮಾಡಿದೆ 'ನಮ್ಮ ಏರಿಯಾದಲ್ಲಿ ಇನ್ನೊಂದಿನ' ಚಿತ್ರ. ಒಂದೇ ಟೇಕ್ ನಲ್ಲಿ ಒಂದು ಗಂಟೆ 54 ನಿಮಿಷದಲ್ಲಿ ಚಿತ್ರೀಕರಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆ ನಿರ್ಮಿಸಿದೆ ಈ ಚಿತ್ರ.

  'ಸುಗ್ರೀವ' ಚಿತ್ರವನ್ನು ಸತತ 18 ಗಂಟೆಗಳಲ್ಲಿ ನಿರ್ಮಿಸಿದ್ದ ಅಣಜಿ ನಾಗರಾಜ್ ಅವರೇ 'ನಮ್ ಏರಿಯಾದಲ್ಲಿ ಇನ್ನೊಂದಿನ' ಚಿತ್ರದ ನಿರ್ಮಾಪರು. ಅವರ ದಾಖಲೆಯನ್ನು ಅವರೇ ಅಳಿಸಿಹಾಕಿರುವುದು ಈ ಚಿತ್ರದ ಮತ್ತೊಂದು ವಿಶೇಷ.

  ಮಂಗಳವಾರ (ಜು.3) ಬೆಳಗ್ಗೆ 8 ಗಂಟೆಗೆ ಮುಹೂರ್ತ ಆರಂಭವಾಗಿ ಬೆಳಗ್ಗೆ 9.54 ನಿಮಿಷಕ್ಕೆ ಚಿತ್ರೀಕರಣ ಪೂರ್ಣವಾಗಿ ಕುಂಬಳಕಾಯಿ ಒಡೆಸಿಕೊಂಡಿದೆ ನಮ್ ಏರಿಯಾದಲ್ಲಿ ಇನ್ನೊಂದು ದಿನ ಚಿತ್ರ. ಸರಿಸುಮಾರು 2.15 ಗಂಟೆ ಕಾಲಾವಕಾಶವಿರುವ ಈ ಚಿತ್ರವನ್ನು ಕೇವಲ 1.45 ನಿಮಿಷಗಳಲ್ಲಿ ಆಕ್ಷನ್ ಕಟ್ ಹೇಳಿ ಪ್ಯಾಕಪ್ ಹೇಳಿದ್ದಾರೆ ನಿರ್ದೇಶಕ ಅರವಿಂದ್ ಕೌಶಿಕ್.

  ಎಂಟು ಹುಡುಗರ ಸುತ್ತ ಕಥೆ ಸುತ್ತುತ್ತದೆ. ಎರಡು ರೆಡ್ ಕ್ಯಾಮೆರಾ, 5 ಡಿ ಕ್ಯಾನನ್ ಕ್ಯಾಮೆರಾಗಳನ್ನು ಬಳಸಿ ಏಳು ಜನರ ತಂಡ ಪ್ರಸಾದ್ ಹಾಗೂ ಸೆಫ್ಟಿ ನೇತೃತ್ವದಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಚಿತ್ರದಲ್ಲಿ ಎರಡು ಹಾಡುಗಳಿವೆ.

  ಅರವಿಂದ್ ಕೌಶಿಕ್ ಈ ಹಿಂದೆ 'ನಮ್ ಏರಿಯಾದಲ್ಲಿ ಒಂದಿನ' ಹಾಗೂ 'ತುಗ್ಲಕ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈ ಬಗ್ಗೆ ಮಾತನಾಡಿದ ಕೌಶಿಕ್, "ಸಿಂಗಲ್ ಶಾಟ್ ನಲ್ಲಿ ಚಿತ್ರವನ್ನು ತೆಗೆಯುವುದು ಅಷ್ಟು ಪ್ರಾಕ್ಟಿಕಲ್ ಆಗಿ ಇರಲ್ಲ ಎಂದು ಗೆಳೆಯರು ಸಲಹೆ ಕೊಟ್ಟರು. ಆದರೂ ನಾನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿದ್ದೇನೆ.

  ಇದಕ್ಕೆಲ್ಲಾ ಕಾರಣರಾಗಿದ್ದು ಅಣಜಿ ನಾಗರಾಜ್. ಅವರ ಬಳಿ ಯಾವುದೋ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲು ಹೋಗಿದ್ದೆ. ಆದರೆ ಆ ದಿನ ಮಳೆ ಬರುತ್ತಿತ್ತು. ಕೇವಲ 120 ನಿಮಿಷಗಳಲ್ಲಿ ಚಿತ್ರೀಕರಿಸಬಹುದಾದ ಇನ್ನೊಂದು ಚಿತ್ರದ ಕಡೆಗೆ ಮಾತು ಹೊರಳಿತು. ಆ ಚಿತ್ರದ ಒನ್ ಲೈನ್ ಸ್ಟೋರಿ ಅವರಿಗೆ ಹೇಳಿದೆ.

  ಇಂಪ್ರೆಸ್ ಆದ ಅಣಜಿ ಅವರಿಗೆ ನನ್ನ ಐಡಿಯಾ ಹಿಡಿಸಿತು. ಈ ಬಗ್ಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು. ಉಳಿದಿದ್ದೆಲ್ಲಾ ಇತಿಹಾಸ. ಮೊದಲು ಚಿತ್ರಕತೆ ರಚಿಸಿಕೊಂಡೆ. ಅದಕ್ಕೆ ಹೊಂದಿಕೊಳ್ಳುವಂತೆ ಲೊಕೇಷನ್ ಕೂಡ ಆಯ್ಕೆ ಮಾಡಿಕೊಂಡೆ" ಎಂದು ವಿವರ ನೀಡಿದರು.

  ಚಿತ್ರದ ಪಾತ್ರವರ್ಗದಲ್ಲಿ ಸತ್ಯ, ಪಟ್ರೆ ಅಜಿತ್, ರವಿಶಂಕರ್ ಹಾಗೂ ಚೇತನ್ ಚಂದ್ರ ಇದ್ದಾರೆ. ಇವರಿಗೆಲ್ಲಾ ಏಕೈಕ ನಾಯಕಿ ರೂಪಿಕಾ. ಕೈಲಾಶ್, ರಿಷಬ್, ರವಿತೇಜ ಹಾಗೂ ಚೇತನ್ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada film director Arvind Kaushik created a record by wrapping up his film "Nam Areiali Innondhina" in just 1.45 hours. Produced by Anaji Nagaraj, the entire film and the two songs were shot by using two Red cameras and five Canon 5D cameras.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X