»   » 'ಹ್ಯಾಪಿ ಫಾದರ್ಸ್ ಡೇ': ಸಿನಿ ತಾರೆಯರಿಗೆ ತಂದೆಯೇ ಮೊದಲ ಹೀರೋ

'ಹ್ಯಾಪಿ ಫಾದರ್ಸ್ ಡೇ': ಸಿನಿ ತಾರೆಯರಿಗೆ ತಂದೆಯೇ ಮೊದಲ ಹೀರೋ

Posted By:
Subscribe to Filmibeat Kannada

ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ 'ತಾಯಿ' ದೇವರಾದರೇ, ತಂದೆ ಮೊದಲ ಗುರು. ತಾಯಿ ಮೇಲಿನ ಅತೀವ ಪ್ರೀತಿಯನ್ನು ಎಲ್ಲರೂ 'ಮದರ್ಸ್ ಡೇ' ದಿನದಂದು ತೋರ್ಪಡಿಸುತ್ತಾರೆ. ಅದೇ ರೀತಿ ಇಂದು ಪ್ರತಿಯೊಬ್ಬರೂ ತಮ್ಮ ಜೀವನದ ದೀರ್ಘಕಾಲದ ಏಕ ಮಾತ್ರ ಮಾರ್ಗದರ್ಶಕ ತಂದೆಯನ್ನು ಬಿಗಿದಪ್ಪಿ ಪ್ರೀತಿಯಿಂದ ಗೌರವ ಸಲ್ಲಿಸುವ ದಿನ.

ತಂದೆ ಪ್ರತಿಯೊಬ್ಬ ವ್ಯಕ್ತಿಗೆ ನೂರು ಆನೆಗಳ ಬಲವಿದ್ದಂತೆ. ಆತನೊಬ್ಬ ನಮ್ಮ ಬಾಳಿನಲ್ಲಿ ದೀರ್ಘಕಾಲ ಇದ್ದರೇ ಏನನ್ನಾದರೂ ಸಾಧಿಸುವ ಚಲ. ಆ ಚಲಕ್ಕೆ ಬಲ ಎರಡೂ ಇದ್ದಂತೆ. ಇಂದು ಅಂತಹ ತಂದೆಯ ದಿನವನ್ನು ಆಚರಿಸುವ ದಿನ. ನಿಮ್ಮನ್ನ ಸದಾ ಪ್ರೀತಿಯಿಂದ ಸಲುಹಿ ಸದಾ ಬೆನ್ನಲುಬಾಗಿ ನಿಲ್ಲುವ ನಿಮ್ಮ ತಂದೆಗೆ ಇಂದು ಒಂದು ಸೆಲ್ಯೂಟ್ ಸಲ್ಲಿಸಿಬಿಡಿ.

ಅಂದಹಾಗೆ ಎಲ್ಲರಂತೆ ಇಂದು ಸ್ಯಾಂಡಲ್ ವುಡ್ ಮತ್ತು ಇತರೆ ಚಿತ್ರರಂಗದ ಹಲವು ತಾರೆಯರು ಸಹ ತಮ್ಮ ತಂದೆಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ಅಲ್ಲದೇ ತಮ್ಮ ಜೀವನದಲ್ಲಿ ತಂದೆಯ ಪಾತ್ರ ಹೇಗಿತ್ತು ಎಂಬುದನ್ನು ಟ್ವಿಟ್ಟರ್ ನಲ್ಲಿ ಫೋಟೋ ಸಹಿತ ಶೇರ್ ಮಾಡಿಕೊಂಡಿದ್ದಾರೆ. ಯಾರ್ಯಾರು ಹೇಗೆಲ್ಲಾ 'ಫಾದರ್ಸ್ ಡೇ' ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ ನೋಡೋಣ ಬನ್ನಿ...

ತಂದೆಯಿಲ್ಲದೇ ಫನ್ ಇಲ್ಲ

ಕಳೆದ ವರ್ಷ ತಮ್ಮ ತಂದೆಯನ್ನು ಕಳೆದುಕೊಂಡ ರಮೇಶ್ ಅರವಿಂದ್ ರವರು ತಮ್ಮ ತಂದೆಯನ್ನು ನೆನೆದು 'its no fun without you'(ನೀವಿಲ್ಲದೇ ಜೀವನದಲ್ಲಿ ಸಂತೋಷವಿಲ್ಲ) ಎಂದು ಟ್ವೀಟ್ ಮಾಡಿದ್ದಾರೆ.

ಅಪ್ಪ-ಮಕ್ಕಳು

ಇಂದು 'ಫಾದರ್ಸ್ ಡೇ' ಪ್ರಯುಕ್ತ ಅಪ್ಪನ ಮಹತ್ವ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ನಟ ಜಗ್ಗೇಶ್ ರವರು ತಮ್ಮ ಅಪ್ಪನನ್ನು ಸ್ಮರಿಸುತ್ತಾ ಅವರೊಂದಿಗೆ ತೆಗೆಸಿಕೊಂಡ ಫೋಟೋ ಹಾಗೂ ಅವರು ತಮ್ಮ ಮಗನೊಂದಿಗೆ ಇರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.['ಫಾದರ್ಸ್ ಡೇ' ಅಂದ್ರೆ ಏನು?.. ಅಪ್ಪನ ಮಹತ್ವದ ಬಗ್ಗೆ ಜಗ್ಗೇಶ್ ಹೇಳಿದ್ದು ಹೀಗೆ..]

ಅಪ್ಪನೇ ಮೊದಲ ಹೀರೋ

ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ತಂದೆ ಜೊತೆಗೆ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಅವರೇ ನನ್ನ ಮೊದಲ ಹೀರೋ ಎಂದು ಟ್ವೀಟ್ ಮಾಡಿದ್ದಾರೆ.

ದುಃಖದಿಂದ ತಂದೆಯನ್ನು ನೆನೆದ ಶಿಲ್ಪಾ ಶೆಟ್ಟಿ

"ನನ್ನ ತಂದೆಯೇ ನನ್ನ ಮೊದಲ ಹೀರೋ.. ಹ್ಯಾಪಿ ಫಾದರ್ಸ್ ಡೇ.. ಲವ್ ಯು ಅಂಡ್ ಮಿಸ್ ಯು" ಎಂದು ತಮ್ಮ ತಂದೆಯೊಂದಿಗಿನ ಫೋಟೋಗಳ ಸಹಿತ ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಬೆಸ್ಟ್ ಡ್ಯಾಡಿ

ಅಪ್ಪನ ಮಹತ್ವವನ್ನು ಅರಿತಿರುವ ಕನ್ನಡತಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಅಪ್ಪನೊಂದಿಗಿನ ಫೋಟೋ ಮಾತ್ರವಲ್ಲದೇ ಆಕೆಯ ಮಗ ಅವರ ಅಪ್ಪನೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿ, "ನನ್ನ ಜೀವನದ ಉತ್ತಮ ಕ್ಷಣಗಳೆಂದರೇ ನಿಮಗಾಗಿ ದೀರ್ಘಕಾಲ ಕಾದಿದ್ದು.. ನಮ್ಮ ಮಗ ಪ್ರಪಂಚದಲ್ಲಿಯೇ ಉತ್ತಮ ತಂದೆಯನ್ನು ಪಡೆದಿದ್ದಾನೆ. ಹ್ಯಾಪಿ ಫಾದರ್ಸ್ ಡೇ" ಎಂದು ಟ್ವೀಟ್ ಮಾಡಿದ್ದಾರೆ.

ತಾಯಿಗೆ 'ಫಾದರ್ಸ್ ಡೇ' ವಿಶ್

ಬಾಲಿವುಡ್ ನಟ ಬೊಮನ್ ಇರಾನಿ ರವರು "ನನ್ನ ತಾಯಿಗೆ 'ಫಾದರ್ಸ್ ಡೇ' ವಿಶ್ ಮಾಡುತ್ತೇನೆ. ಅವರು ನನ್ನ ಜೀವನದಲ್ಲಿ ತಾಯಿ-ತಂದೆ ಪಾತ್ರವನ್ನು ಸಮನಾಗಿ ನಿರ್ವಹಿಸಿರುವ ಗ್ರ್ಯಾಂಡ್ ಲೇಡಿ" ಎಂದು ಟ್ವೀಟಿಸಿದ್ದಾರೆ.

ನಿಮ್ಮಂಥ ತಂದೆ ಇದ್ದರೇ ಪ್ರಪಂಚ ಅದ್ಭುತ

'ಪಿಕೆ' ಚಿತ್ರ ಖ್ಯಾತಿಯ ಬಾಲಿವುಡ್ ನಟಿ ಅನುಷ್ಕ ಶರ್ಮಾ ರವರು ಸಹ 'ಫಾದರ್ಸ್ ಡೇ' ಪ್ರಯುಕ್ತ, "ನಿಮ್ಮ ತರಹದ ಅಪ್ಪ ಇದ್ದರೇ ಪ್ರಪಂಚ ಇನ್ನೂ ಅದ್ಭುತವಾಗಿರುತ್ತದೆ. ನಿಮ್ಮ ಸಹಕಾರ ಮತ್ತು ಪ್ರೀತಿಗೆ ಥ್ಯಾಂಕ್" ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅವರ ತಂದೆಯೊಂದಿಗಿನ ಫೋಟೋ ಸಹಿತ ವಿಶ್ ಮಾಡಿದ್ದಾರೆ.

ಮಹೇಶ್ ಬಾಬು ಜೀವನದ ಸ್ಫೂರ್ತಿ ಅವರ ನಂದೆ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹ ತಮ್ಮ ತಂದೆಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ, "ನನ್ನ ಜೀವನದ ವಿಶೇಷ ವ್ಯಕ್ತಿ, ನನ್ನ ಸ್ಫೂರ್ತಿ.. ನನ್ನ ಮಾರ್ಗದರ್ಶಕ... ಸದಾ ನಾನು ನೋಡಲು ಬಯಸುವ ವ್ಯಕ್ತಿ ನನ್ನ ತಂದೆ. ನಿಮ್ಮ ಮಗನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಹ್ಯಾಪಿ ಫಾದರ್ಸ್ ಡೇ ಮೈ ಡಿಯರ್ ಫಾದರ್" ಎಂದು ಬರೆದಿದ್ದಾರೆ.

English summary
Kannada Actor Jaggesh, Ramesh Aravind, Actress Shilpa Shetty, including tollywood actor Mahesh Baabu and others are taken their twitter account to wish to 'Father's Day'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada