For Quick Alerts
  ALLOW NOTIFICATIONS  
  For Daily Alerts

  ಅಮೋಘ ಅರ್ಧ ಸೆಂಚುರಿ ಹೊಸ್ತಿಲಲ್ಲಿ ಶರಣ್ 'ವಿಕ್ಟರಿ'

  By Rajendra
  |

  ಹಾಸ್ಯ ನಟ ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಅರ್ಧ ಸೆಂಚುರಿ ಪೂರೈಸಲು ಸಜ್ಜಾಗಿದೆ. ಈಗಾಗಲೆ ಚಿತ್ರ ನಲವತ್ತಾರು ದಿನಗಳನ್ನು ಪೂರಿಸಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ತ್ರಿಭುವನ್ ನಲ್ಲಿ 'ವಿಕ್ಟರಿ' ಮುನ್ನುಗ್ಗುತ್ತಿದೆ.

  ಚಿತ್ರ ಎಷ್ಟು ಲಾಭ ಮಾಡಿದೆ ಎಂಬುದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲದಿದ್ದರೂ ಮೂಲಗಳ ಪ್ರಕಾರ ರು.6 ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯದಾದ್ಯಂತ 14 ಕೇಂದ್ರಗಳಲ್ಲಿ ಅರ್ಧ ಶತಕ ಪೂರೈಸಲು ಸಿದ್ಧವಾಗಿದೆ. [ಚಿತ್ರ ವಿಮರ್ಶೆ ಓದಿ]

  ದಾಂಪತ್ಯದಲ್ಲಿ ಸಾಮರಸ್ಯ ಕಳೆದುಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದೇ ಚಿತ್ರದ ಕಥಾಹಂದರ. ಗಂಭೀರವಾದ ಈ ಸಮಸ್ಯೆಯನ್ನು ತಮಾಷೆಯಾಗಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದ ಹಾಡುಗಳೂ ಪ್ರೇಕ್ಷಕರ ಮನಗೆದ್ದಿವೆ.

  ಕಡಿಮೆ ಬಜೆಟ್ ನಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಮಾಡಿ ಗೆಲ್ಲಬಹುದು ಎಂಬುದನ್ನು 'ವಿಕ್ಟರಿ' ಚಿತ್ರ ಮಾಡಿ ತೋರಿಸಿದೆ. ಸಂಪೂರ್ಣ ಹಾಸ್ಯಮಯ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಎಸ್.ಆರ್.ಎಸ್ ಮೀಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರದ ನಿರ್ಮಾಪಕರು.

  ಚಿತ್ರದ ಒಂದು ಸ್ಯಾಂಪಲ್ ಡೈಲಾಗ್ ಹೀಗಿದೆ, ಗಂಡಸು ಕೆಟ್ಟವನಾದರೆ ಆತನ ಅದೃಷ್ಟ ಸರಿ ಇಲ್ಲ ಅಂತಾರೆ, ಆದೇ ಹೆಣ್ಣು ಕೆಟ್ಟವಳಾದರೆ ಅವಳೇ ಸರಿ ಇಲ್ಲ ಅಂತಾರೆ...ಪತಿ ಪತ್ನಿ ಮಧ್ಯದ ಸಂಬಂಧಗಳ ಸಾಮರಸ್ಯ ಹೇಳುತ್ತಾ ಬದುಕಿನ ಸರಿ, ತಪ್ಪುಗಳನ್ನು ವಿವರಿಸುವ ಯತ್ನವನ್ನು ಚಿತ್ರದ ನಿರ್ದೇಶಕ ನಂದಕಿಶೋರ್ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada film Victory, starring actors Sharan, Asmita Sood has proved to be mega hit at the box office. The film has been running successfully in theatres and will complete 50 days in 14 centres. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X