For Quick Alerts
  ALLOW NOTIFICATIONS  
  For Daily Alerts

  ಓದುಗರ ನೆಚ್ಚಿನ ಐಶ್ವರ್ಯ ಅರ್ಜುನ್ ಗೆ 'ಉದಯೋನ್ಮುಖ ನಟಿ-2018' ಪ್ರಶಸ್ತಿ

  |

  2018ನೇ ಸಾಲಿನ 'ಅತ್ಯುತ್ತಮ ಉದಯೋನ್ಮುಖ ನಟಿ-2018' ಪ್ರಶಸ್ತಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಪಾಲಾಗಿದೆ. 'ಪ್ರೇಮ ಬರಹ' ಚಿತ್ರದಲ್ಲಿನ ಅಭಿನಯವನ್ನು ಮೆಚ್ಚಿ ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರು 'ಅತ್ಯುತ್ತಮ ಉದಯೋನ್ಮುಖ ನಟಿ' ಪಟ್ಟವನ್ನು ಐಶ್ವರ್ಯ ಅರ್ಜುನ್ ಗೆ ನೀಡಿದ್ದಾರೆ.

  ಹೌದು, ನಿಮ್ಮ ಫಿಲ್ಮಿಬೀಟ್ ಕನ್ನಡ 2018ನೇ ಸಾಲಿನ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

  ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018 ಫಲಿತಾಂಶ ಇಲ್ಲಿದೆ ನೋಡಿ

  ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರಬಿದ್ದಿದೆ.

  ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ಉದಯೋನ್ಮುಖ ನಟಿ'ಯಾಗಿ ಹೊರಹೊಮ್ಮಿರುವುದು ನಟಿ ಐಶ್ವರ್ಯ ಅರ್ಜುನ್. ಮುಂದೆ ಓದಿರಿ...

  2018 ರ ಬೆಸ್ಟ್ ಡೆಬ್ಯೂ ನಟಿ ಐಶ್ವರ್ಯ ಅರ್ಜುನ್

  2018 ರ ಬೆಸ್ಟ್ ಡೆಬ್ಯೂ ನಟಿ ಐಶ್ವರ್ಯ ಅರ್ಜುನ್

  'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಉದಯೋನ್ಮುಖ ನಟಿ ಐಶ್ವರ್ಯ ಅರ್ಜುನ್. ನಾಮನಿರ್ದೇಶನಗೊಂಡಿದ್ದ 7 ಉದಯೋನ್ಮುಖ ನಟಿಯರ ಪೈಕಿ 'ಪ್ರೇಮ ಬರಹ' ಚಿತ್ರದ ನಟನೆಗಾಗಿ ಐಶ್ವರ್ಯ ಅರ್ಜುನ್ ಅವರು 36% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

  2018ರ 'ಅತ್ಯುತ್ತಮ ನಿರ್ದೇಶಕ'ನಾದ 'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ನೀಲ್.!2018ರ 'ಅತ್ಯುತ್ತಮ ನಿರ್ದೇಶಕ'ನಾದ 'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ನೀಲ್.!

  ಐಶ್ವರ್ಯ ಅರ್ಜುನ್ ಗೆ ಸಿಕ್ಕ ಮತಗಳು ಎಷ್ಟು.?

  ಐಶ್ವರ್ಯ ಅರ್ಜುನ್ ಗೆ ಸಿಕ್ಕ ಮತಗಳು ಎಷ್ಟು.?

  ಒಟ್ಟು 3758 ಜನರು ಐಶ್ವರ್ಯ ಅರ್ಜುನ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಐಶ್ವರ್ಯ ಅರ್ಜುನ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಉದಯೋನ್ಮುಖ ನಟಿ'ಯಾಗಿದ್ದಾರೆ.

  ಫಿಲ್ಮಿಬೀಟ್ ಓದುಗರ ತೀರ್ಪು: 2018ರ ಅತ್ಯುತ್ತಮ ನಟ ಅಂಬರೀಶ್ಫಿಲ್ಮಿಬೀಟ್ ಓದುಗರ ತೀರ್ಪು: 2018ರ ಅತ್ಯುತ್ತಮ ನಟ ಅಂಬರೀಶ್

  ನಂತರದ ಸ್ಥಾನದಲ್ಲಿ...

  ನಂತರದ ಸ್ಥಾನದಲ್ಲಿ...

  'ಕೆ.ಜಿ.ಎಫ್' ಚಿತ್ರದಲ್ಲಿನ ನಟನೆಗಾಗಿ ಶ್ರೀನಿಧಿ ಶೆಟ್ಟಿ (2678), 'ಬಕಾಸುರ' ಚಿತ್ರದಲ್ಲಿನ ನಟನೆಗಾಗಿ ಕಾವ್ಯ ಗೌಡ (2282) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

  ಓದುಗರ ತೀರ್ಪು: 2018 ರ 'ಅತ್ಯುತ್ತಮ ನಾಯಕಿ' ಆಶಿಕಾ ರಂಗನಾಥ್.!ಓದುಗರ ತೀರ್ಪು: 2018 ರ 'ಅತ್ಯುತ್ತಮ ನಾಯಕಿ' ಆಶಿಕಾ ರಂಗನಾಥ್.!

  ಉಳಿದವರು...

  ಉಳಿದವರು...

  ನಾಲ್ಕನೇ ಸ್ಥಾನ - ನಿಶ್ವಿಕಾ ನಾಯ್ಡು (1291)

  ಐದನೇ ಸ್ಥಾನ - ಪೂಜಾ ದೇವರಿಯಾ (187)

  ಆರನೇ ಸ್ಥಾನ - ಮಿಷ್ಠಿ ಚಕ್ರವರ್ತಿ (111)

  ಏಳನೇ ಸ್ಥಾನ - ನಿಧಿ ಕುಶಾಲಪ್ಪ (97)

  ಸಿನಿ ಪ್ರಿಯರ ಇಚ್ಛೆ: 2018ರ 'ಅತ್ಯುತ್ತಮ ಖಳನಟ' ಡಾಲಿ ಧನಂಜಯ್.! ಸಿನಿ ಪ್ರಿಯರ ಇಚ್ಛೆ: 2018ರ 'ಅತ್ಯುತ್ತಮ ಖಳನಟ' ಡಾಲಿ ಧನಂಜಯ್.!

  ಎಲ್ಲರಿಗೂ ಧನ್ಯವಾದಗಳು

  ಎಲ್ಲರಿಗೂ ಧನ್ಯವಾದಗಳು

  ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

  English summary
  Best of 2018 - Filmibeat Kannada Awards 2018 poll results are out. Kannada Actress Aishwarya Arjun is selected as Best Debut Actress-2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X