For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಮುಂದೆ 'ಹಾಸ್ಟೆಲ್ ಹುಡುಗರ' ಅವಾಂತರ: ಒತ್ತಡಕ್ಕೆ ಮಣಿದೇ ಬಿಟ್ರು ರಮ್ಯಾ!

  |

  ಮೋಹಕ ತಾರೆ ರಮ್ಯಾ ಕನ್ನಡ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿ ಹೆಚ್ಚು ಕಡಿಮೆ 8 ವರ್ಷಗಳೇ ಆಗಿದ್ದವು. ಮತ್ತೆಂದು ಚಿತ್ರರಂಗಕ್ಕೆ ಬರೋದೇ ಇಲ್ಲ ಎಂದಿದ್ದ ರಮ್ಯಾ ಮರಳಿರುವುದು ಅಭಿಮಾನಿಗಳಿಗೆ ಸಮಾಧಾನ ನೀಡಿದೆ. ಹಾಗೇ ಆತಂಕಕ್ಕೂ ಕಾರಣವಾಗಿತ್ತು.

  ರಮ್ಯಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡೋದು ಫಿಕ್ಸ್ ಆಗಿತ್ತು. ಆದರೆ, ಅದ್ಯಾಕೋ ಆ ಸಿನಿಮಾದಲ್ಲಿ ಬರೀ ನಿರ್ಮಾಪಕಿಯಾಗಿಯಷ್ಟೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಇದು ಲಕ್ಕಿ ಗರ್ಲ್ ಫ್ಯಾನ್ಸ್‌ಗೆ ನಿರಾಸೆಯುಂಟು ಮಾಡಿತ್ತು. ಆದ್ರೀಗ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ 'ಹಾಸ್ಟೆಲ್ ಹುಡುಗರು'.

  ಹಾಸ್ಟೆಲ್ ಹುಡುಗರು ಜೊತೆ ರಮ್ಯಾ ಸ್ಯಾಂಡಲ್‌ವುಡ್ ಎಂಟ್ರಿ: ಕಮ್ ಬ್ಯಾಕ್ ಸಿನಿಮಾ ಇದೇನಾ?ಹಾಸ್ಟೆಲ್ ಹುಡುಗರು ಜೊತೆ ರಮ್ಯಾ ಸ್ಯಾಂಡಲ್‌ವುಡ್ ಎಂಟ್ರಿ: ಕಮ್ ಬ್ಯಾಕ್ ಸಿನಿಮಾ ಇದೇನಾ?

  ಹೌದು.. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅನ್ನೋ ಸಿನಿಮಾವೊಂದು ಕೆಲವು ತಿಂಗಳ ಹಿಂದೆ ಸೆಟ್ಟೇರಿತ್ತು. ಈಗ ಅದೇ ಸಿನಿಮಾದ ಪ್ರೋಮೊದಲ್ಲಿ ಮೋಹಕತಾರೆ ರಮ್ಯಾ ಪ್ರತ್ಯಕ್ಷ ಆಗಿದ್ದಾರೆ. ಇದು ಲಕ್ಕಿ ಗರ್ಲ್‌ ಫ್ಯಾನ್ಸ್‌ಗೆ ಮತ್ತೆ ರಿಲೀಫ್ ಕೊಟ್ಟಿದೆ.

  ಉಪ್ಪಿ ಸ್ಟೈಲ್‌ನಲ್ಲಿ ಹಾಸ್ಟೆಲ್ ಹುಡುಗರ ಪ್ರತಿಭಟನೆ!

  ಉಪ್ಪಿ ಸ್ಟೈಲ್‌ನಲ್ಲಿ ಹಾಸ್ಟೆಲ್ ಹುಡುಗರ ಪ್ರತಿಭಟನೆ!

  ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳನ್ನು ನೋಡಿದ್ದರೆ, ಹಾಸ್ಟೆಲ್‌ ಹುಡುಗರ ಪ್ರತಿಭಟನೆ ಕನೆಕ್ಟ್ ಆಗುತ್ತೆ. ರಮ್ಯಾ ಕಮ್ ಬ್ಯಾಕ್ ಮಾಡಲೇ ಬೇಕು ಅಂತ ಪಟ್ಟು ಹಿಡಿದು ಕೂತಿರೋ ಹಾಸ್ಟೆಲ್ ಹುಡುಗರ ಕಿತಾಪತಿಯನ್ನು ಪ್ರೋಮೊದಲ್ಲಿ ಸೆರೆ ಹಿಡಿಯಲಾಗಿದೆ. ರಮ್ಯಾಗಾಗಿ ಕೈ ಕಾಲು, ಕಣ್ಣು ಕೊನೆಗೆ ರುಂಡವನ್ನೂ ಕತ್ತರಿಸಿಕೊಳ್ಳುವಸ ಯುವಕರ ಆರ್ಭಟವನ್ನು ತಮಾಷೆಯಲ್ಲಿ ಸಿನಿಮಾಗಾಗಿ ಮಾಡಿದ ಪ್ರೋಮೊದಲ್ಲಿ ತೋರಿಸಿದ್ದಾರೆ. ಕೊನೆಗೂ ಹುಡುಗರ ಪ್ರತಿಭಟನೆ ಮಣಿದು ರಮ್ಯಾ ಎಂಟ್ರಿ ಮರಳಿದ್ದಾರೆ.

  ಮೋಹಕತಾರೆ ಅಭಿಮಾನಿಗಳು ಥ್ರಿಲ್

  ಮೋಹಕತಾರೆ ಅಭಿಮಾನಿಗಳು ಥ್ರಿಲ್

  ರಮ್ಯಾ ಬಹಳ ದಿನಗಳ ಬಳಿಕ ಸಿನಿಮಾದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹಕತಾರೆ ಎಂಟ್ರಿ ಕೊಟ್ಟಿದ್ದು, ಹಾಸ್ಟೆಲ್ ಹುಡುಗರ ಜೊತೆ ಕಾಣಿಸಿಕೊಂಡಿದ್ದು ಕಿಕ್ ಕೊಟ್ಟಿದೆ. ಹೊಸಬರ ಕಾನ್ಸೆಪ್ಟ್ ಮೆಚ್ಚಿಕೊಂಡಿರುವ ರಮ್ಯಾ ಅವರ ಜೊತೆಗೆ ನಿಂತಿದ್ದಾರೆ. ವರುಣ್ ಗೌಡ, ಪ್ರಜ್ವಲ್ ಸೇರಿದಂತೆ ನಾಲ್ಕು ಮಂದಿ ಜಂಟಿಯಾಗಿ ನಿರ್ಮಿಸಿರುವ ಸಿನಿಮಾ ಈಗಾಗಲೇ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುವುದಕ್ಕೆ ಮುಂದಾಗಿದೆ.

  ರಮ್ಯಾ ಕಮ್ ಬ್ಯಾಕ್ ಮಾಡಿಬಿಟ್ರಾ?

  ರಮ್ಯಾ ಕಮ್ ಬ್ಯಾಕ್ ಮಾಡಿಬಿಟ್ರಾ?

  ಸ್ಯಾಂಡಲ್‌ವುಡ್‌ನಲ್ಲಿ ರಮ್ಯಾ ಹೊಸ ಹುಡುಗರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅದು ಇದೇ ಸಿನಿಮಾನಾ ಅನ್ನೋ ಅನುಮಾನ ಮೂಡಿದೆ. ಮೋಹಕತಾರೆ ಅತಿಥಿ ಪಾತ್ರದಲ್ಲಿ ನಟಿಸಿರುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಆದರೆ, ರಮ್ಯಾ ಆಗಲಿ, ಚಿತ್ರತಂಡ ಆಗಲಿ ಇನ್ನೂ ಕನ್ಫರ್ಮ್ ಮಾಡಿಲ್ಲ. ಹೀಗಾಗಿ ರಮ್ಯಾ ಕಮ್ ಬ್ಯಾಕ್ ಮಾಡಿರುವ ಸಿನಿಮಾ ಇದೇನಾ? ಇಲ್ಲಾ ಬೇರೊಂದು ಸಿನಿಮಾನಾ? ಅನ್ನೋದು ರಿವೀಲ್ ಆಗಬೇಕಿದೆ.

  ಹುಡುಗರಿಗೆ ದಿಗ್ಗಜರ ಬೆಂಬಲ

  ಹುಡುಗರಿಗೆ ದಿಗ್ಗಜರ ಬೆಂಬಲ

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಆರಂಭದಿಂದಲೂ ಸ್ಯಾಂಡಲ್‌ವುಡ್ ದಿಗ್ಗಜರು ಸಾಥ್ ನೀಡಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಹಾಗೂ ಈಗ ಮೋಹಕತಾರೆ ರಮ್ಯಾ ಜೊತೆಯಾಗಿದ್ದಾರೆ. ಹೀಗಾಗಿ ಹೊಸಬರ ತಂಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ.

  English summary
  Finally Ramya Entered Sandalwood With Hostel Hudugaru Bekagiddare Promo Goes Viral, Know More.
  Thursday, November 3, 2022, 23:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X