»   » 60 ವರ್ಷದ ನಂತರ ಪ್ರಧಾನಿ ಆಗುತ್ತೇನೆ ಎಂದ ಹುಚ್ಚ ವೆಂಕಟ್

60 ವರ್ಷದ ನಂತರ ಪ್ರಧಾನಿ ಆಗುತ್ತೇನೆ ಎಂದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಯಾವಾಗಲೂ ಮಾತೆತ್ತಿದರೆ, 'ನನ್ ಮಗಂದ್', 'ನನ್ ಎಕ್ಕಡ' ಅಂತ ಡೈಲಾಗ್ ಜೊತೆಗೆ ಸಿನಿಮಾ ಸಿನಿಮಾ ಅನ್ನುತ್ತಿದ್ದ 'ಫೈರಿಂಗ್ ಸ್ಟಾರ್' ವೆಂಕಟ್ ಇದೀಗ ಹೊಸದಾಗಿ ರಾಜಕೀಯ ಸೇರುವ ಬಗ್ಗೆ ಮಾತನಾಡುತ್ತಿದ್ದಾರೆ.

ಹೌದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರಿಗೆ ರಾಜಕೀಯ ಸೇರಲು ತುಂಬಾ ಒತ್ತಡ ಹಾಕುತ್ತಿದ್ದಾರಂತೆ. ಆದರೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದ ವೆಂಕಟ್ ಇನ್ನೇನು ಮೂರೇ ತಿಂಗಳಿನಲ್ಲಿ ತಾವೇ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟುತ್ತಾರಂತೆ. ಈ ಬಗ್ಗೆ ಸ್ವತಃ ವೆಂಕಟ್ ಅವರೇ ಹೇಳಿಕೊಂಡಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]


'Firing Star' Venkat to float a political party

ಇತ್ತೀಚೆಗೆ ತಮ್ಮ 'ಸ್ವತಂತ್ರ್ಯ ಪಾಳ್ಯ' ಸಿನಿಮಾದ ಪ್ರದರ್ಶನ ಸಂದರ್ಭದಲ್ಲಿ ಪ್ರಚಾರಕ್ಕೆ ಮಂಗಳೂರಿನ ಸುಚಿತ್ರಾ ಚಿತ್ರಮಂದಿರಕ್ಕೆ ಆಗಮಿಸಿದ್ದ 'ಫೈರಿಂಗ್ ಸ್ಟಾರ್' ವೆಂಕಟ್ ಅವರು ಪ್ರೇಕ್ಷಕರೊಂದಿಗೆ ತಾವೂ ಸಿನಿಮಾ ನೋಡಿದರು.


ತದನಂತರ ಮಾಧ್ಯಮದೊಂದಿಗೆ ಮಾತನಾಡಿದ ವೆಂಕಟ್ ಅವರು 'ನನಗೆ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಫರ್ ಗಳು ಬರುತ್ತಿದೆ. ಆದರೆ ನನಗೆ ಯಾವುದೇ ರಾಜಕೀಯ ಪಕ್ಷ ಸೇರುವ ಆಸೆ ಇಲ್ಲ. ಅದರ ಬದ್ಲಾಗಿ ನಾನೇ ಒಂದು ರಾಜಕೀಯ ಪಕ್ಷ ಕಟ್ಟುವ ಯೋಚನೆ ಇದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮೂರು ತಿಂಗಳಲ್ಲಿ ಒಂದು ಹೊಸ ಪಕ್ಷ ಕಟ್ಟುತ್ತೇನೆ'.['ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್]


'Firing Star' Venkat to float a political party

'ನನಗೆ 60 ವರ್ಷ ತುಂಬಿದ ನಂತರ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ ಆಗುತ್ತೇನೆ ಎಂದು ವೆಂಕಟ್ ನುಡಿದಿದ್ದಾರೆ.


ವೆಂಕಟ್ ಅವರು ಮಂಗಳೂರಿನ ಸುಚಿತ್ರಾ ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಭರ್ಜರಿಯಾಗಿ ಬರಮಾಡಿಕೊಂಡರು. ನಂತರ ಅವರು ಮಂಗಳೂರಿನಲ್ಲಿ ತಮಗಾದ ಮೊದಲ ಪ್ರೇಮ ಕಥೆಯನ್ನು ಎಲ್ಲರೆದುರು ಹಂಚಿಕೊಂಡರು.[ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!]


'Firing Star' Venkat to float a political party

'ನಾನು ಮಂಗಳೂರಿಗೆ ಹಲವು ವರ್ಷಗಳ ಬಳಿಕ ಆಗಮಿಸಿದ್ದು, ಮಂಗಳೂರಿನ ಜನತೆ ನನಗೆ ನಿರಾಸೆ ಮೂಡಿಸಿದ್ದಾರೆ. ನನಗೆ ಮೊದಲ ಪ್ರೇಮ ಚಿಗುರೊಡೆದದ್ದು ಇಲ್ಲಿಯೇ. ಮಣ್ಣಗುಡ್ಡೆಯ ಗೋಕರ್ಣನಾಥೇಶ್ವರ ಕಾಲೇಜಿನ ಹುಡುಗಿಯನ್ನು ಪ್ರೀತಿಸಿದ್ದೆ. ಇಲ್ಲಿನ ಬೀಚ್ ಮತ್ತು ಕಟೀಲಿನ ದೇವಸ್ಥಾನಕ್ಕೆಲ್ಲಾ ಅವಳ ಜೊತೆ ಸುತ್ತಿದ್ದೆ. ಆಮೇಲೆ ನನ್ನದೇ ಒಂದು ಚಿಕ್ಕ ತಪ್ಪಿನಿಂದಾಗಿ ಲವ್ ಬ್ರೇಕ್ ಅಪ್ ಆಯ್ತು' ಎಂದು ಫೈರಿಂಗ್ ಸ್ಟಾರ್ ಬೇಸರ ವ್ಯಕ್ತಪಡಿಸಿದ್ದಾರೆ.

English summary
'Firing Star' Venkat is all set to float a political party soon. He himself declared this after the screening of his first film 'Swatantrapalya' in Mangalore. Venkat says that he is getting a lot many offers from politicial parties and he himself is planning to float a political party in the coming months.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada