»   » 'ಅಣ್ಣಾಬಾಂಡ್' ಪುನೀತ್ ಜೇಮ್ಸ್ ಫಸ್ಟ್ ಲುಕ್ ಔಟ್

'ಅಣ್ಣಾಬಾಂಡ್' ಪುನೀತ್ ಜೇಮ್ಸ್ ಫಸ್ಟ್ ಲುಕ್ ಔಟ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಹಾಗೆ. ಒಂಥರಾ ಹೈವೋಲ್ಟೇಜ್ ಕರೆಂಟ್ ಇದ್ದ ಹಾಗೆ. ಇಂತಹ 'ಪವರ್ ಪಫ್' ಹುಡುಗನ ಹುಟ್ಟುಹಬ್ಬ ಅಂದ್ರೆ ಸುಮ್ನೆನಾ. 'ಪವರ್ ಹೌಸ್' ಭಕ್ತರಿಗೆ ಯುಗಾದಿ ಹಬ್ಬದಷ್ಟೇ ಸಂಭ್ರಮ.

ಅಪ್ಪು ಜನ್ಮದಿನಕ್ಕೆ ಇನ್ನೆರಡು ದಿನ ಬಾಕಿ ಇದೆ. ಅಷ್ಟು ಬೇಗ, ಸಾಮಾಜಿಕ ಜಾಲತಾಣಗಳಲ್ಲಿ #HappyBirthdayAppu ವೈರಲ್ ಆಗುತ್ತಿದೆ. ಅಣ್ಣಾವ್ರ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


First look poster of Puneeth Rajkumar's James out

ಅಪ್ಪು ಭಕ್ತರಿಗೆ ಕಾಣಿಕೆ ರೂಪದಲ್ಲಿ, ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ನೀಡಿರುವ ಹೊಸ ಹೊಸ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಗಳು ಕೂಡ ರಿಲೀಸ್ ಆಗುತ್ತಿವೆ. ನಿನ್ನೆಯಷ್ಟೇ, ಅಪ್ಪು ಅಭಿನಯಿಸುತ್ತಿರುವ 'ದೊಡ್ಮನೆ ಹುಡುಗ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. [ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ 'ಜೇಮ್ಸ್']


ಥೇಟ್ ಅಣ್ಣಾವ್ರಂತೆ ಬಿಳಿ ಪಂಚೆ-ಶರ್ಟು ತೊಟ್ಟು ಅಪ್ಪು ಕಂಗೊಳಿಸಿದ್ದರು. ಇದೀಗ 'ಜೇಮ್ಸ್' ಸರದಿ. 'ಬಹದ್ದೂರ್' ಚಿತ್ರದ ನಿರ್ದೇಶಕ ಚೇತನ್ ಜೊತೆ ಅಪ್ಪು 'ಜೇಮ್ಸ್' ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಇದೀಗ ಆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿದೆ.


'ದಿ ಟ್ರೇಡ್ ಮಾರ್ಕ್' ಅನ್ನುವ ಕ್ಯಾಪ್ಷನ್ ನೊಂದಿಗೆ 'ಜೇಮ್ಸ್' ಹೇಗಿದ್ದಾನೆ ಅಂತ ನೀವೇ ನಿಮ್ಮ ಕಣ್ಣಾರೆ ನೋಡಿಬಿಡಿ. ಫಸ್ಟ್ ಲುಕ್ ನಲ್ಲಿ ಸ್ಪೋರ್ಟ್ಸ್ ಫೀಲ್ ನೀಡಿದರೂ, ಇದು ಕ್ರೀಡಾತ್ಮಕ ಚಿತ್ರ ಅಲ್ಲ. ಪಕ್ಕಾ ಲೋಕಲ್ ಸಿನಿಮಾ.


First look poster of Puneeth Rajkumar's James out

''ಅಪ್ಪ-ಅಮ್ಮ ಹೆಸರಿಡೋದ್ ವಾಡಿಕೆ...ನಮಗ್ ನಾವ್ ಹೆಸರಿಟ್ಕೊಂಡ್ರೆ ಬೇಡಿಕೆ..!'' ಅನ್ನೋ ಡೈಲಾಗ್ ಕೂಡ ಪೋಸ್ಟರ್ ನಲ್ಲಿದೆ. ಇದಕ್ಕೆ ಪೂರಕ ಅನ್ನೋ ಹಾಗೆ, 'ಜೇಮ್ಸ್' ವೃತ್ತಾಂತವನ್ನ ನಾವು ಹೇಳ್ಬೇಕು ಅಂದ್ರೆ, (JA) ಜಕ್ಕಳಿ (M) ಮಾದಪ್ಪ (E) ಈರವ್ವನ ಮಗ (S) ಸಂತು = JAMES..! ['ಜೇಮ್ಸ್' ಬಾಂಡ್ ಚಿತ್ರಕ್ಕೆ ಯಶ್, ಪುನೀತ್ ಗೆ ಆಹ್ವಾನ]


ಅಂದ್ಮೇಲೆ ಈ ಜೇಮ್ಸ್ ಹೇಗೆ ಅಂತ ನೀವೇ ಊಹಿಸಿಕೊಳ್ಳಿ. ಎಲ್ಲಾ ಕಮರ್ಶಿಯಲ್ ಅಂಶಗಳನ್ನಿಟ್ಟುಕೊಂಡು ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ರಚಿಸುತ್ತಿದ್ದಾರೆ ಯುವ ನಿರ್ದೇಶಕ ಚೇತನ್. ಇನ್ನೂ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಕಿಶೋರ್ ಪಟಿಕೊಂಡಾ.


ಪುನೀತ್ ಈಗ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಬಿಜಿಯಿರುವ ಕಾರಣ, ಅದು ಮುಗಿದ ಬಳಿಕ 'ಜೇಮ್ಸ್' ಆಗಲಿದ್ದಾರೆ. (Photo Courtesy - Puneeth Rajkumar Official facebook page)

English summary
Power Star Puneeth Rajkumar starrer 'James' First look poster is out. The Actor looks dashing and stunning in the poster which is released on the account of Appu's Birthday. 'James' is directed by Chethan Kumar of 'Bahaddur' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada