Just In
Don't Miss!
- Sports
ಐಎಸ್ಎಲ್: ಹೈದರಾಬಾದ್ ಎಫ್ಸಿ vs ಒಡಿಶಾ ಎಫ್ಸಿ, Live ಸ್ಕೋರ್
- News
ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆಯಾದವರ ಬಗ್ಗೆ ಸಮೀಕ್ಷೆ
- Automobiles
2030ರ ವೇಳೆಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್' ಸಿನಿಮಾದ ಬಿಗ್ ಅಪ್ ಡೇಟ್; ಡಿಸೆಂಬರ್ 3ಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ರಾಬರ್ಟ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ.
ಆದರೀಗ ಚಿತ್ರಮಂದಿರಗಳು ಓಪನ್ ಆಗಿವೆ. ನಿಧಾನವಾಗಿ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಒಂದೊಂದಾಗಿ ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬರ್ತಿವೆ. ಆದರೆ ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದರೂ, ಬಿಡುಗಡೆ ಮಾಡಲು ತಯಾರಕರು ಮುಂದಾಗುತ್ತಿಲ್ಲ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಡಿಸೆಂಬರ್ ಗೆ ರಿಲೀಸ್ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ರಿಲೀಸ್ ಬಗ್ಗೆ ಸಿನಿಮಾತಂಡ ಯಾವುದೇ ಅಪ್ ಡೇಟ್ ನೀಡಿಲ್ಲ, ಇದೀಗ ಡಿಸೆಂಬರ್ 3ಕ್ಕೆ ಮತ್ತೊಂದು ಸರ್ಪ್ರೈಸ್ ಕೊಡಲು ಮುಂದಾಗಿದೆ. ಮುಂದೆ ಓದಿ..
ತೆಲುಗಿನಲ್ಲಿ 'ರಾಬರ್ಟ್': ಟೈಟಲ್ ಅನಾವರಣಕ್ಕಾಗಿ ಮೆಗಾ ತಯಾರಿ!

ಡಿಸೆಂಬರ್ 3ಕ್ಕೆ ವಿನೋದ್ ಪ್ರಭಾಕರ್ ಲುಕ್
ರಾಬರ್ಟ್ ಸಿನಿಮಾ ಡಿಸೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಅಪ್ ಡೇಟ್ ನೀಡಿಲ್ಲ. ಆದರೀಗ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಡಲು ಮುಂದಾಗಿದೆ. ರಾಬರ್ಟ್ ಟೀಂ ಡಿಸೆಂಬರ್ 3ಕ್ಕೆ ನಟ ವಿನೋದ್ ಪ್ರಭಾಕರ್ ಲುಕ್ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ.

ಪ್ರಮುಖ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯ
ನಟ ವಿನೋದ್ ಪ್ರಭಾಕರ್ ರಾಬರ್ಟ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ವಿನೋದ್ ಪ್ರಭಾಸ್ ಲುಕ್ ರಿವೀಲ್ ಆಗಿರಲಿಲ್ಲ, ಇದೀಗ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದ್ದಾರೆ.

ಡಿಸೆಂಬರ್ 3 ವಿನೋದ್ ಪ್ರಭಾಕರ್ ಹುಟ್ಟುಹಬ್ಬ
ಅಂದ್ಹಾಗೆ ಸಿನಿಮಾತಂಡ ವಿನೋದ್ ಪ್ರಭಾಕರ್ ಲುಕ್ ರಿಲೀಸ್ ಮಾಡುತ್ತಿರುವ ಕಾರಣ ಹುಟ್ಟುಹಬ್ಬ. ಹೌದು, ಡಿಸೆಂಬರ್ 3 ನಟ ವಿನೋದ್ ಪ್ರಭಾಕರ್ ಹುಟ್ಟುಹಬ್ಬ. ವಿಶೇಷ ದಿನದೊಂದು ರಾಬರ್ಟ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡುತ್ತಿದ್ದಾರೆ.
'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?

ನಂದ ಕಿಶೋರ್ ಟ್ವೀಟ್
ರಾಬರ್ಟ್ ಫಸ್ಟ್ ಲುಕ್ ರಿಲೀಸ್ ಬಗ್ಗೆ ನಿರ್ದೇಶಕ ನಂದಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ವಿನೋದ್ ಪ್ರಭಾಕರ್ ರವರ 1st look ಪೋಸ್ಟರ್ 03.12.2020 ರಂದು ಬೆಳೆಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು' ಎಂದು ಟ್ವೀಟ್ ಮಾಡಿದ್ದಾರೆ.

ತೆಲುಗಿನಲ್ಲಿ ರಾಬರ್ಟ್ ರಿಲೀಸ್
ರಾಬರ್ಟ್ ಸಿನಿಮಾ ಕನ್ನಡ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ನಿರ್ದೇಶಕ ನಂದಕಿಶೋರ್ ತೆಲುಗು ಟೈಟಲ್ ಪೋಸ್ಟರ್ ಘೋಷಣೆಗೆ ವಿಶೇಷ ತಯಾರಿ ನಡೆಯುತ್ತಿದೆ ಎಂದು ಹೇಳಿದ್ದರು. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಜಗಪತಿಬಾಬು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ.