»   » ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!

ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!

Posted By:
Subscribe to Filmibeat Kannada

ಗುಂಡಿಗೆ ಇರೋರು ಮಾತ್ರ 'ದಂಡು ಪಾಳ್ಯ' ಸಿನಿಮಾ ನೋಡಿ ಅಂತ 'ದಂಡುಪಾಳ್ಯ ಭಾಗ 1' ಬಿಡುಗಡೆ ಆದಾಗ ಎಲ್ಲರೂ ಮಾತಾಡಿಕೊಂಡರು. ಜೊತೆಗೆ ಪೂಜಾ ಗಾಂಧಿ ಅವರ ಬೆತ್ತಲೆ ಬೆನ್ನು ಕೂಡ ಭಾರಿ ವಿವಾದ ಸೃಷ್ಟಿ ಮಾಡಿತ್ತು.

'ದಂಡುಪಾಳ್ಯ' ಮೊದಲ ಭಾಗ ಸಿನಿಮಾ ಮಾಡಿದ್ದ ನಿರ್ದೇಶಕ ಶ್ರೀನಿವಾಸ ರಾಜು ಅವರೇ 'ದಂಡುಪಾಳ್ಯ ಭಾಗ 2' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಇದೀಗ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ರಿಲೀಸ್ ಆಗಿವೆ.[ಬಿಗ್ ಮನೆಯಿಂದ 'ದಂಡುಪಾಳ್ಯ'ಕ್ಕೆ ಬಂದ 'ಮಳೆ' ಹುಡುಗಿ ಪೂಜಾ]

ಇತ್ತೀಚೆಗೆ ಚಿತ್ರದ ಫೊಟೋ ಶೂಟ್ ನಡೆಸಿರುವ ಚಿತ್ರತಂಡ, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳನ್ನು ರಿವೀಲ್ ಮಾಡಿದೆ. ಅಂದಹಾಗೆ ವಿವಾದ ಉಂಟು ಮಾಡುವ ಫೊಟೋಗಳೇ ಈ ಚಿತ್ರದ ಬಂಡವಾಳ ಅಂದರೂ ತಪ್ಪಾಗ್ಲಿಕ್ಕಿಲ್ಲ.[ತೆಲುಗು ತೆರೆಗೆ ಪೂಜಾಗಾಂಧಿ ದಂಡುಪಾಳ್ಯ ಚಿತ್ರ]

ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳನ್ನು ನೋಡುತ್ತಿದ್ದರೆ, ಒಮ್ಮೆ ಎದೆ ಝಲ್ ಎನ್ನುತ್ತದೆ. ಯಾರನ್ನೇ ಆಗಲಿ ಒಂದು ಕ್ಷಣ ಈ ಫೋಟೋಗಳು ಬೆಚ್ಚಿ ಬೀಳಿಸೋದು ಗ್ಯಾರಂಟಿ. ಅಷ್ಟಕ್ಕೂ ಪೋಸ್ಟರ್ ಗಳಲ್ಲಿ ಏನಿದೆ ಅಂತಹ ವಿಶೇಷ ಅಂತ ನೋಡಬೇಕೆ? ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

'ರಾ' ಸ್ಟೈಲ್ ನಲ್ಲಿ ಪೂಜಾ ಗಾಂಧಿ

'ದಂಡುಪಾಳ್ಯ 2' ನಲ್ಲಿ ನಟಿ ಪೂಜಾ ಗಾಂಧಿ ಅವರು ಸಖತ್ ರಾ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೊದಕ್ಕೆ ಈ ಚಿತ್ರವೇ ಸಾಕ್ಷಿ. ಇನ್ನು 'ದಂಡುಪಾಳ್ಯ' ಚಿತ್ರದಲ್ಲಿ ಲಕ್ಷ್ಮಿ ಪಾತ್ರ ವಹಿಸಿದ್ದ ನಟಿ ಪೂಜಾ ಗಾಂಧಿ ಅವರ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.[ಅಯ್ಯಪ್ಪ ಮೇಲೆ ತನಗಿದ್ದ ಭಾವನೆಯ ಬಗ್ಗೆ ಪೂಜಾ ಹೇಳಿದ್ದೇನು?]

ಪೂಜಾ ಬಾಯಲ್ಲಿ ಪೊಲೀಸರ ಬೂಟು

ಪೂಜಾ ಗಾಂಧಿ ಬಾಯಲ್ಲಿ ಪೊಲೀಸರ ಬೂಟು ನೋಡುತ್ತಿದ್ದರೆ, 'ದಂಡುಪಾಳ್ಯ ಭಾಗ 2' ರಲ್ಲೂ ಪೂಜಾ ಅವರು ಹಠಮಾರಿ ಹೆಂಗಸಾಗಿ, ಸಖತ್ ರಗಡ್ ಸ್ಟೈಲ್ ನಲ್ಲಿ ಮಿಂಚಿರಬಹುದು ಅನ್ನೋ ಅನುಮಾನ ಕಾಡುತ್ತದೆ.

ಸೆಮಿ ನ್ಯೂಡೆ

ಅರೆ ಬೆತ್ತಲೆಯಾಗಿ ಪಿ.ಕೆ ಅಮೀರ್ ಖಾನ್ ಥರ ನಿಂತಿರುವ ದಂಡುಪಾಳ್ಯದ ಖೈದಿಗಳನ್ನು ನೋಡುತ್ತಿದ್ದರೆ, ಒಂದು ಕ್ಷಣ ಎದೆ ನಡುಗುತ್ತದೆ. ಚಿತ್ರದಲ್ಲಿ ರವಿ ಕಾಳೆ, ಮಕರಂದ್ ದೇಶ್ ಪಾಂಡೆ, ಕರಿ ಸುಬ್ಬು, ಮುನಿ ಮುಂತಾದವರು ಸೆಮಿ ನ್ಯೂಡ್ ಲುಕ್ ನಲ್ಲಿ ಮಿಂಚಿದ್ದಾರೆ. ಒಟ್ನಲ್ಲಿ 'ಭಾಗ 1'ರ ತಾರಾಗಣವೇ ಇಲ್ಲೂ ಮುಂದುವರಿದಿದೆ.

ಕ್ರೌರ್ಯ ಎದ್ದು ಕಾಣುತ್ತಿದೆ

ಚಿತ್ರದ ಫಸ್ಟ್ ಲುಕ್ ಗಳನ್ನು ನೋಡುತ್ತಿದ್ದರೆ, ಎಲ್ಲಾ ಕಡೆ ಕ್ರೌರ್ಯಗಳೇ ಎರ್ರಾಬಿರ್ರಿಯಾಗಿ ಎದ್ದು ಕಾಣುತ್ತಿದೆ. ಒಟ್ನಲ್ಲಿ ಈ ಬಾರಿ ಕೂಡ ಈ ಸಿನಿಮಾ ಜನರ ಕೆಂಗಣ್ಣಿಗೆ ಗುರಿಯಾಗೋದು ಗ್ಯಾರಂಟಿ.

ಪೂಜಾ ಗಾಂಧಿ ಏನಂತಾರೆ?

'ಮೊದಲಿಗೆ ಸಾಕಷ್ಟು ಜನ 'ದಂಡು ಪಾಳ್ಯ 2' ರಲ್ಲಿ ನಟನೆ ಮಾಡಬೇಡ ಅಂದ್ರು. ನಾನೂ ಮಾಡೋದಿಲ್ಲ ಅಂದಿದ್ದೆ. ಆದರೆ ಸ್ಕ್ರಿಪ್ಟ್ ತುಂಬಾ ಚೆನ್ನಾಗಿತ್ತು, ನಾನು ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಒಪ್ಪಿಕೊಂಡೆ. ಮೊದಲ ದಂಡುಪಾಳ್ಯ ಭಾಗಕ್ಕಿಂತಲೂ ಎರಡನೇ ಭಾಗ ಸಖತ್ ಥ್ರಿಲ್ಲಿಂಗ್ ಆಗಿದೆ ಎನ್ನುತ್ತಾರೆ ಪೂಜಾ ಗಾಂಧಿ.

English summary
After the success of 'Dandupalya', Director Srinivasa Raju has said action-cut to 'Dandupalya 2'. Now the team 'Dandupalya 2' have released the first look pictures of the artist from the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada