twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ಸಂಕಟ ಮರೆಯಲು ಈ ಐದು ಬೊಂಬಾಟ್ ಸಿನಿಮಾಗಳನ್ನು ನೋಡಿ

    |

    ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿಯೇ ಕೂರಬೇಕಾದ ಅನಿವಾರ್ಯತೆಯಲ್ಲಿರುವ ಜನರು ದೇಶ ವಿದೇಶದ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದಾರೆ. ಟಿವಿಗಳಲ್ಲಿ ಬರುವ ಸಿನಿಮಾಗಳನ್ನು ನೋಡಿ ಸುಸ್ತಾದವರು, ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಗೂಗಲ್ಲಲ್ಲಿ ಹುಡುಕುತ್ತಿದ್ದಾರೆ. ಇನ್ನು ಕೆಲವರು ತಾವು ನೋಡಿದ ಅತ್ಯುತ್ತಮ ಎನಿಸಿದ ಚಿತ್ರಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೆ ಸಹಾಯ ಮಾಡುತ್ತಿದ್ದಾರೆ.

    Recommended Video

    ಕುರಿ ಪ್ರತಾಪ್ ತಮ್ಮದೇ ಶೈಲಿಯಲ್ಲಿ ಕೊರೊನ ಬಗ್ಗೆ ಮಾತನಾಡಿದ್ದಾರೆ

    ಕೊರೊನಾ ವೈರಸ್ ಹಾವಳಿಯ ಸುದ್ದಿಗಳನ್ನು ನೋಡಿ ಬೇಸೆತ್ತವರು ಸಿನಿಮಾಗಳ ಮೂಲಕ ತಮ್ಮ ಮನರಂಜನೆಯ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ತಮಗೆ ಖುಷಿ ನೀಡುವಂತಹ ಸಿನಿಮಾಗಳನ್ನು ನೋಡುವ ಮೂಲಕ ಮಾನಸಿಕ ದುಗುಡವನ್ನು ಶಮನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಜಾಗತಿಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಮುದ ನೀಡುವಂತಹ ಐದು ವಿಭಿನ್ನ ಸಿನಿಮಾಗಳು ಇಲ್ಲಿವೆ. ಇವು ನಿಮ್ಮ ಓಟಿಟಿ ಅಥವಾ ಇತರೆ ಪ್ಲಾಟ್ ಫಾರ್ಮ್‌ಗಳಲ್ಲಿ ಲಭ್ಯವಾದರೆ ವೀಕ್ಷಿಸಬಹುದು. ಅಂದಹಾಗೆ ಇವು ಸುದೀರ್ಘ ಕಥೆಯ ಚಿತ್ರಗಳಲ್ಲ. ಪುಟ್ಟದಾದ ಸಾಕ್ಷ್ಯಚಿತ್ರಗಳ ಸ್ವರೂಪದವು. ಮುಂದೆ ಓದಿ.

    ಸಹಜ ಸ್ಥಿತಿಗೆ ಮರಳುತ್ತಿರುವ ಚೀನಾದಲ್ಲಿ ರಿಲೀಸ್ ಆಗುತ್ತಿದೆ ಹೃತಿಕ್ ರೋಷನ್ ಸಿನಿಮಾಸಹಜ ಸ್ಥಿತಿಗೆ ಮರಳುತ್ತಿರುವ ಚೀನಾದಲ್ಲಿ ರಿಲೀಸ್ ಆಗುತ್ತಿದೆ ಹೃತಿಕ್ ರೋಷನ್ ಸಿನಿಮಾ

    ದಿ ವೊಂಬ್ಯಾಟ್ ವಿಸ್ಪರರ್

    ದಿ ವೊಂಬ್ಯಾಟ್ ವಿಸ್ಪರರ್

    ವೊಂಬ್ಯಾಟ್ ಎನ್ನುವುದು ಕೋಲಾದಂತಹ ಪ್ರಾಣಿಯನ್ನು ಹೋಲುವ ಆಸ್ಟ್ರೇಲಿಯಾದ ಅತಿ ಅಚ್ಚುಮೆಚ್ಚಿನ ಸ್ಥಳೀಯ ಪ್ರಾಣಿ. ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿಗಳಂತೆ ಇವುಗಳ ರಕ್ಷಣೆಯೂ ದೊಡ್ಡ ಸಮಸ್ಯೆಯಾಗಿದೆ. 'ದಿ ವೊಂಬ್ಯಾಟ್ ವಿಸ್ಪರರ್' ಇಂತಹ ಅನಾಥ ಮತ್ತು ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸಿ ತನ್ನದೇ ಪ್ರಾಣಿ ಸಂರಕ್ಷಣಾ ಧಾಮ ನಡೆಸುತ್ತಿರುವ ನ್ಯೂಸೌತ್ ವೇಲ್ಸ್‌ನ ಡೊನ್ನಾ ಸ್ಟೀಫನ್ ಎಂಬಾಕೆಯ ಕಥೆಯಿದು. ಮುಂದಿನ 20 ವರ್ಷಗಳಲ್ಲಿ ಈ ಜಾತಿಯ ಪ್ರಾಣಿಗಳು ಉಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಅವರು. 25 ನಿಮಿಷಗಳ ಈ ಚಿತ್ರ ಈ ಪ್ರಾಣಿಗಳ ಮುದ್ದುತನವನ್ನು ತೋರಿಸುತ್ತದೆ.

    ಪಿಜನ್ ಬ್ಯಾಟಲ್ಸ್ ಆಫ್ ಕೈರೋ

    ಪಿಜನ್ ಬ್ಯಾಟಲ್ಸ್ ಆಫ್ ಕೈರೋ

    ಪಾರಿವಾಳಗಳ ಕಾದಾಟದ ಜೂಜು ಬಹುಶಃ ಜಗತ್ತಿನಾದ್ಯಂತ ಇದೆ. ಈಜಿಪ್ಟಿನ ಕೈರೋದಲ್ಲಿನ ಈ ಚಟುವಟಿಕೆಯ ಮೇಲೆ 'ಪಿಜನ್ ಬ್ಯಾಟಲ್ಸ್ ಆಫ್ ಕೈರೋ' ಬೆಳಕು ಚೆಲ್ಲುತ್ತದೆ. ಪಾರಿವಾಳಗಳ ಕಾದಾಟ ಸ್ಪರ್ಧೆಯದ್ದೇ ಬೇರೆ ಜಗತ್ತಿದೆ. ಅಲ್ಲಿ ಒಬ್ಬರೊಬ್ಬರು ತಮ್ಮ ಪ್ರತಿಸ್ಪರ್ಧಿ, ನೆರೆಹೊರೆಯವರ ಪಾರಿವಾಳಗಳನ್ನು ಹಿಡಿಯಲು ಅಥವಾ ಬೇಟೆಯಾಡಲು ಪ್ರಯತ್ನಿಸುತ್ತಿರುತ್ತಾರೆ. ಈ ಚಿತ್ರ ಪಾರಿವಾಳಗಳ ತರಬೇತುದಾರ ಕೋಕಾ ಎಂಬಾತನ ಸುತ್ತ ನಡೆಯುತ್ತದೆ.

    ಲಾಕ್‌ಡೌನ್ ಮುಗಿದ ಮೇಲೆ ಸನ್ನಿ ಲಿಯೋನ್ ಮಾಡುವ ಮೊದಲ ಕೆಲಸ ಇದೇ ಅಂತೆಲಾಕ್‌ಡೌನ್ ಮುಗಿದ ಮೇಲೆ ಸನ್ನಿ ಲಿಯೋನ್ ಮಾಡುವ ಮೊದಲ ಕೆಲಸ ಇದೇ ಅಂತೆ

    ಪನ್ಯೀ ಫುಟ್ ಬಾಲ್ ಕ್ಲಬ್

    ಪನ್ಯೀ ಫುಟ್ ಬಾಲ್ ಕ್ಲಬ್

    ದಕ್ಷಿಣ ಥಾಯ್ಲೆಂಡ್‌ನ ಮೀನುಗಾರಿಕೆಯ ಹಳ್ಳಿ ಕೊಹ್ ಪನ್ಯೀ ಒಂದು ಕಾಲದಲ್ಲಿ ತನ್ನ ಆಹಾರ ಮತ್ತು ಆದಾಯಕ್ಕಾಗಿ ಅಂಡಮಾನ್ ಸಮುದ್ರವನ್ನು ಅವಲಂಬಿಸಿತ್ತು. ಆದರೆ ಇಂದು ಈ ದ್ವೀಪ ಈಗ ತಾಜಾ ಮೀನು ಮತ್ತು ಮುತ್ತುಗಳಿಗೆ ಜನಪ್ರಿಯವಾದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಜತೆಗೆ ಇಲ್ಲಿ ತೇಲುವ ಫುಟ್‌ಬಾಲ್ ಪಿಚ್ ಇದೆ. 1986ರ ವಿಶ್ವಕಪ್ ಫುಟ್‌ಬಾಲ್‌ನಿಂದ ಪ್ರಭಾವಿತಗೊಂಡ ಇಲ್ಲಿನ ಫುಟ್ಬಾಲ್ ಪ್ರಿಯರು ಫುಟ್ಬಾಲ್ ಕ್ಲಬ್ ಆರಂಭಿಸಿದರು. ಅಲ್ಲಿ ಫುಟ್ಬಾಲ್ ಆಡಲು ಮೈದಾನವಿಲ್ಲ. ಹಾಗಾಗಿ ಸಮುದ್ರದ ಮೇಲೆಯೇ ತೇಲುವ ಪಿಚ್ ಮಾಡಿ ಆಡುತ್ತಿದ್ದಾರೆ. ಇಂತಹ ವಿಶಿಷ್ಟ ಕಥನ ಆರೂವರೆ ನಿಮಿಷಗಳ ಕಿರುಚಿತ್ರದಲ್ಲಿದೆ.

    ರಿಯೋಸ್ ಫವೆಲಾ ಬಲ್ಲೇರಿನಸ್

    ರಿಯೋಸ್ ಫವೆಲಾ ಬಲ್ಲೇರಿನಸ್

    ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿನ ಮುಖ್ಯ ವಿಮಾನ ನಿಲ್ದಾಣದ ಪಶ್ಚಿಮ ಭಾಗದ ಬೆಟ್ಟದ ಮೇಲೆ ಕಾಂಪ್ಲೆಕ್ಸೊ ಡೊ ಅಲೆಮಾವೊ ಎಂಬ ಪಟ್ಟಣವಿದೆ. ಇದು ಬಹಳ ಕುಖ್ಯಾತಿ ಪಡೆದ ಪಟ್ಟಣ. ಬ್ರೆಜಿಲ್‌ನಲ್ಲಿ ನಡೆಯುವ ಅತಿ ಹೆಚ್ಚಿನ ಮಾತ್ರವಲ್ಲ, ಜಗತ್ತಿನ ಯಾವುದೇ ದೇಶಕ್ಕಿಂತಲೂ ಅತಿ ಹೆಚ್ಚು ಕೊಲೆಗಳು ಇಲ್ಲಿ ನಡೆಯುತ್ತವೆ. ಇಂತಹ ವಾತಾವರಣದಲ್ಲಿ ತನ್ನ ಐದನೇ ವಯಸ್ಸಿಗೆ ಬ್ಯಾಲೆ ನೃತ್ಯವನ್ನು ಕಲಿತವರು ಟುಯಾನಿ ನಸಿಮೆಂಟೊ. ಈಗ 26 ವರ್ಷದ ಆಕೆ ತನ್ನ ನೆರೆಹೊರೆಯ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ. ಪೊಲೀಸರೂ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ರೈಫಲ್‌ಗಳನ್ನು ಹೊತ್ತು ಓಡಾಡುವ ಇಲ್ಲಿ ನೃತ್ಯ ಪ್ರಕಾರವೊಂದು ಹೇಗೆ ಬೆಳೆದು ಬದುಕುವ ಉತ್ಸಾಹ ತೋರಿಸುತ್ತಿದೆ ಎಂಬುದನ್ನು 'ರಿಯೋಸ್ ಫವೆಲಾ ಬಲ್ಲೇರಿನಸ್' 7.18 ನಿಮಿಷದ ಕಿರುಚಿತ್ರದಲ್ಲಿ ವಿವರಿಸುತ್ತದೆ.

    ಪವನ್ ಒಡೆಯರ್ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್ ಕಳೆದುಹೋಗಿದೆ: ಹೊಸ ಪ್ರಯೋಗ ನೋಡಿದಿರಾ?ಪವನ್ ಒಡೆಯರ್ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್ ಕಳೆದುಹೋಗಿದೆ: ಹೊಸ ಪ್ರಯೋಗ ನೋಡಿದಿರಾ?

    ಸ್ಕೂಲಿಂಗ್ ಕೊರಿಯಾಸ್ ಗ್ರಾಂಡ್‌ಮಾಸ್

    ಸ್ಕೂಲಿಂಗ್ ಕೊರಿಯಾಸ್ ಗ್ರಾಂಡ್‌ಮಾಸ್

    ತಮ್ಮ ಬಾಲ್ಯದಲ್ಲಿ ಕಠಿಣ ಸಾಂಸ್ಕೃತಿಕ ನಿರ್ಬಂಧಗಳ ಕಾರಣ ಪಾರ್ಕ್ ಗೋ ಈ ಮತ್ತು ಆಕೆಯ ಸಹಪಾಠಿ ಪಾರ್ಕ್ ಕ್ಯೂಂಗ್ ಸೂನ್ ಮುಂತಾದ ವೃದ್ಧೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಈಗ ಕೊನೆಗೂ ಅವರು ಓದುವ ಮತ್ತು ಬರೆಯುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕೊರಿಯಾದ ಗ್ರಾಮೀಣ ಶಾಲೆಗಳು ಮುಚ್ಚಿಹೋಗುತ್ತಿವೆ. ಕನ್ನಡ ಶಾಲೆಗಳಂತೆಯೇ ಅಲ್ಲಿನ ಗ್ರಾಮೀಣ ಶಾಲೆಗಳ ಪರಿಸ್ಥಿತಿ ವಿಭಿನ್ನವಲ್ಲ. ಅಲ್ಲಿ ಜನನ ಪ್ರಮಾಣ ಕುಸಿಯುತ್ತಿದೆ. ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಕೆಲವೇ ಮಕ್ಕಳು ಕಾಣಿಸುತ್ತಿದ್ದಾರೆ. ಈ ಕಾರಣದಿಂದ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ವಯಸ್ಕರನ್ನೂ ದಾಖಲಿಸಿಕೊಳ್ಳುತ್ತಿವೆ.

    ಕೆಲವು ಪಟ್ಟಣಗಳ ಶಾಲೆಗಳು ಕುಟುಂಬಗಳಿಗೆ ಕಡಿಮೆ ಬಾಡಿಗೆಯ ಮನೆಗಳ ವ್ಯವಸ್ಥೆಯ ಆಫರ್ ನೀಡುತ್ತಿವೆ. ಯಾಕ್ಸು ಎಂಬ ಹಳ್ಳಿಯಲ್ಲಿ ಶಾಲೆಯನ್ನು ವಯಸ್ಕರ ಡೇಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಸಾಯುತ್ತಿರುವ ಶಾಲೆಗಳನ್ನು ಉಳಿಸಿಕೊಳ್ಳುವ ಈ ಪ್ರಯತ್ನದ ಸೊಗಸಾದ ಕಥೆಯನ್ನು 'ಸ್ಕೂಲಿಂಗ್ ಕೊರಿಯಾಸ್ ಗ್ರಾಂಡ್‌ಮಾಸ್' ಹೇಳುತ್ತದೆ.

    English summary
    People love to watch more movies for entertainment amid this lockdown period. Here is the 5 small films which makes you happy.
    Monday, April 13, 2020, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X