»   » ಬಾಲಿವುಡ್ ನಲ್ಲಿ ಅಣ್ತಮ್ಮ : ಕರಣ್ ಜೋಹರ್ ಬ್ಯಾನರ್ ನಲ್ಲಿ ಯಶ್ ನಟನೆ!

ಬಾಲಿವುಡ್ ನಲ್ಲಿ ಅಣ್ತಮ್ಮ : ಕರಣ್ ಜೋಹರ್ ಬ್ಯಾನರ್ ನಲ್ಲಿ ಯಶ್ ನಟನೆ!

Posted By:
Subscribe to Filmibeat Kannada

ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಸುದ್ದಿ ಬಂದಿದೆ. ಅದು 'ಕೆ.ಜಿ.ಎಫ್' ಸಿನಿಮಾದ ಬಗ್ಗೆ ಬಂದಿರುವ ಸುದ್ದಿ ಅಲ್ಲ. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ನ್ಯೂಸ್. ಯಾಕಂದ್ರೆ, ಇಷ್ಟು ದಿನ ಕನ್ನಡ ಸಿನಿಮಾ ಮಾಡುತ್ತಿದ್ದ ಯಶ್ ಈಗ ಡೈರೆಕ್ಟ್ ಆಗಿ ಬಾಲಿವುಡ್ ವಿಮಾನ ಏರಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಿ ಮಿಂಚಿರುವ ಯಶ್ ಗೆ ಈಗ ಅದೃಷ್ಟ ಹುಡುಕಿಕೊಂಡು ಬಂದಿದೆ. ಹಿಂದಿ ಚಿತ್ರರಂಗದಲ್ಲಿ ರಾಮಾಚಾರಿಯ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ. ಅಂದಹಾಗೆ, ಕರಣ್ ಜೋಹರ್ ಬ್ಯಾನರ್ ನಲ್ಲಿ ಯಶ್ ಸಿನಿಮಾ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಈ ಚಿತ್ರಕ್ಕೆ ಅಲಿಯಾ ಭಟ್ ಅಥವಾ ದಿಶಾ ಪಠಾನಿ ನಾಯಕಿ ಆಗುವ ಸಾಧ್ಯತೆ ಇದೆ. ಈಗಾಗಲೇ ಕನ್ನಡದ ನಟ ಸುದೀಪ್‌ ಬಾಲಿವುಡ್ ಸಿನಿಮಾ ಮಾಡಿ, ಇದೀಗ ಹಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಅದೇ ರೀತಿ ಯಶ್ ಕೂಡ ಹಿಂದಿ ಸಿನಿಮಾರಂಗಕ್ಕೆ ಹೋಗುತ್ತಿದ್ದಾರೆ.

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಕರಣ್ ಜೋಹರ್, ಯಶ್ ಜೊತೆಗೆ ಮಾತುಕತೆ ನಡೆಸಿದ್ದಾರಂತೆ. ಸೌತ್ ಸಿನಿಮಾರಂಗದ ಜೊತೆಗೆ ಒಳ್ಳೆಯ ನಂಟು ಇಟ್ಟುಕೊಂಡಿರುವ ಕರಣ್ ಈ ಹಿಂದೆ ಯಶ್ ಅವರ ಕೆಲವು ಸಿನಿಮಾಗಳನ್ನು ನೋಡಿ ಇಷ್ಟ ಪಟ್ಟಿದ್ದಾರಂತೆ. ಇನ್ನು ಯಶ್ ಕೂಡ ತಮಗೆ ಬಂದಿರುವ ಈ ಅವಕಾಶವನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ. 'ಕೆ.ಜಿ.ಎಫ್' ಸಿನಿಮಾ ರಿಲೀಸ್ ಆದ ಬಳಿಕ ಯಶ್ ಬಾಲಿವುಡ್ ಸಿನಿಮಾ ಶುರು ಆಗಲಿದೆ.

Fools day special : yash doing hindi movie

ಅಷ್ಟಕ್ಕೂ ಯಶ್ ಅಭಿನಯಿಸಲು ಒಪ್ಪಿಕೊಂಡಿರುವ ಹಿಂದಿ ಸಿನಿಮಾದ ಹೆಸರೇನು ಅಂತ ಕೇಳಿದ್ರಾ? ಹೆಸರೇನಿರಬಹುದು ಎಂದು ತಿಳಿದುಕೊಳ್ಳುವ ಮುನ್ನ ಇವತ್ತು ಏಪ್ರಿಲ್ 1 ಎನ್ನುವುದನ್ನು ನೆನಪು ಮಾಡಿಕೊಳ್ಳಿ. ಮೂರ್ಖರ ದಿನಾಚರಣೆ ವಿಶೇಷವಾಗಿ ಪ್ರಕಟವಾಗಿರುವ ಲೇಖನ ಇದು. ಆದರೆ ಯಶ್ ಪ್ರತಿಭೆ ಬಾಲಿವುಡ್ ನಲ್ಲಿಯೂ ಪಸರಿಸಲಿ ಈ ಸುದ್ದಿ ನಿಜವಾಗಲಿ ಎಂಬುದೇ ಫಿಲ್ಮಿಬೀಟ್ ಕನ್ನಡ ಆಶಯ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about Rocking Star Yash which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X