»   » 'ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!

'ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಕುಟುಂಬದ ಹೊಸ ಪೀಳಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದೆ. ಈ ಸುದ್ದಿಯನ್ನ ಕೇಳಿದ ತಕ್ಷಣ ಅಣ್ಣಾವ್ರ ಅಭಿಮಾನಿಗಳು ''ವಾವ್..!'' ಅಂದಿದ್ದರು. ವಿನಯ್ ಎಂಟ್ರಿಯ ಅಪೂರ್ವ ಕ್ಷಣವನ್ನ ಕಣ್ತುಂಬಿಕೊಳ್ಳುವುದಕ್ಕೆ ಕಾತರದಿಂದ ಕಾಯುತ್ತಿದ್ದರು.

ಆ ಎಲ್ಲಾ ಕಾತರ, ಕುತೂಹಲಕ್ಕೆ ಇವತ್ತು ಬ್ರೇಕ್ ಬಿದ್ದಿದೆ. ವಿನಯ್ ರಾಜ್ ಕುಮಾರ್ ಅಭಿನಯದ 'ಸಿದ್ದಾರ್ಥ' ಸಿನಿಮಾ ಇಂದು ರಿಲೀಸ್ ಆಗಿದೆ. ಬೆಳ್ಳಿ ಪರದೆ ಮೇಲೆ ವಿನಯ್ ರನ್ನ ಕಣ್ತುಂಬಿಕೊಳ್ಳುವುದಕ್ಕೆ ಬರೀ ಕನ್ನಡಾಭಿಮಾನಿಗಳು ಮತ್ತು ಅಣ್ಣಾವ್ರ ಭಕ್ತರು ಮಾತ್ರ ಇಂದು ಚಿತ್ರಮಂದಿರಕ್ಕೆ ಬಂದಿರಲಿಲ್ಲ.


'ಸಿದ್ದಾರ್ಥ' ರಿಲೀಸ್ ಆದ ಮುಖ್ಯ ಚಿತ್ರಮಂದಿರ 'ಕಪಾಲಿ'ಯಲ್ಲಿ ಒಬ್ಬ ವಿಶೇಷ ಅಭಿಮಾನಿ ಕೂಡ 'ಫಿಲ್ಮಿಬೀಟ್ ಕನ್ನಡ' ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕರು. ಆ ವ್ಯಕ್ತಿಯೇ ಈತ. ಹೆಸರು ಹೆರ್ರಿ ಅಂತ. ಮೂಲ ಫಿನ್ ಲ್ಯಾಂಡ್.


Foreign fan of Dr.Rajkumar

ನಮ್ಮ ದೇಶದ ಸಂಸ್ಕೃತಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಹೆರ್ರಿಗೆ ಕನ್ನಡ ಅಂದ್ರೆ ಅಚ್ಚುಮೆಚ್ಚು. ಅದರಲ್ಲೂ ಡಾ.ರಾಜ್ ಕುಮಾರ್ ಅಂದ್ರೆ ಪ್ರಾಣ ಅಂತೆ. ರಾಜಣ್ಣನ ಕೆಲ ಚಿತ್ರಗಳನ್ನ ನೋಡಿ ಅವರ ಅಭಿಮಾನಿಯಾಗಿರುವ ಹೆರ್ರಿಗೆ, ಅಣ್ಣಾವ್ರ ಮೊಮ್ಮಗನ ಮೊದಲ ಸಿನಿಮಾ ಇವತ್ತು ರಿಲೀಸ್ ಆಗುತ್ತಿದೆ ಅನ್ನುವ ವಿಷಯ ಗೊತ್ತಾಯ್ತಂತೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


ಇದನ್ನ ಕೇಳಿದ ತಕ್ಷಣ ಕಪಾಲಿ ಥಿಯೇಟರ್ ಗೆ ಓಡೋಡಿ ಬಂದ ಹೆರ್ರಿ ಮೊದಲ ಶೋನಲ್ಲಿ 'ಸಿದ್ದಾರ್ಥ' ಚಿತ್ರವನ್ನ ಕಣ್ಣಾರೆ ನೋಡಿದ್ದಾರೆ. ಫಿನ್ ಲ್ಯಾಂಡ್ ಮೂಲದ ಹೆರ್ರಿಗೆ 'ಕನ್ನಡ' ಎಲ್ಲಿಂದ ಅರ್ಥವಾಗಬೇಕು ಅಂದುಕೊಳ್ಳಬೇಡಿ. ಹೆರ್ರಿಯನ್ನ ಮಾತನಾಡಿಸಿದಾಗ ನಮಗೇ ಆಶ್ಚರ್ಯವಾಯ್ತು!


Foreign fan of Dr.Rajkumar

''ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು'', ''ನಾನು ರಾಜ್ ಕುಮಾರ್ ಅಭಿಮಾನಿ'' ಅಂತ ಹೆರ್ರಿ ಕನ್ನಡದಲ್ಲೇ ನಮ್ಮೊಂದಿಗೆ ಮಾತಿಗಿಳಿದರು. ಹಾಗಂತ ಅವರಿಗೆ ಸಂಪೂರ್ಣ ಕನ್ನಡ ಮಾತನಾಡುವುದು ಗೊತ್ತಿಲ್ಲ. ಭಾಷೆ ಅರ್ಥವಾಗುತ್ತೆ ಹೊರತು ಮಾತನಾಡುವುದು ಕೊಂಚ ಕಷ್ಟ. [ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ವಿಶೇಷ ಸಂದರ್ಶನ]


ಸಿನಿಮಾ, ದೃಶ್ಯ ಮಾಧ್ಯಮವಾಗಿರುವ ಕಾರಣ, ಚಿತ್ರದ ಕಥೆಯನ್ನ ಹೆರ್ರಿ ಸುಲಭವಾಗಿ ಗ್ರಹಿಸುತ್ತಾರಂತೆ. ರಾಜ್ ಕುಟುಂಬದ ಈ ವಿಶೇಷ ಅಭಿಮಾನಿಯನ್ನ ಕಂಡು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ನಿರ್ದೇಶಕ ಮಹೇಶ್ ಬಾಬು ಕೂಡ ಧಂಗಾಗಿಬಿಟ್ಟರು. [ರಾಜ್ ಕುಮಾರ್ ಮೊಮ್ಮಗ ಅಂತ ಬಿಲ್ಡಪ್ ಕೊಟ್ಟಿಲ್ಲ-ರಾಘಣ್ಣ]


'ಸಿದ್ದಾರ್ಥ'ನ ಆಗಮನಕ್ಕೆ ಬರೀ ಕನ್ನಡಿಗರು ಮಾತ್ರ ಅಲ್ಲ, ದೂರದ ಫಿನ್ ಲ್ಯಾಂಡ್ ನ ಹೆರ್ರಿಯಂತಹ ವಿದೇಶಿಯರೂ ಕಾತರದಿಂದ ಓಡಿ ಬಂದರು ಅಂದ್ರೆ ಇದು ಕನ್ನಡ ಚಿತ್ರರಂಗದ ಹೆಮ್ಮೆಯ ವಿಷಯ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)

English summary
Herry from Finland, Hardcore Fan of Dr.Rajkumar visited Kapali theatre today (Jan 23rd) to witness the debut of Rajkumar's Grand son Vinay Rajkumar through 'Siddhartha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada