»   » ದುಷ್ಕರ್ಮಿಗಳಿಂದ 'RJ ರಾಜೇಶ್' ಬರ್ಬರ ಕೊಲೆ

ದುಷ್ಕರ್ಮಿಗಳಿಂದ 'RJ ರಾಜೇಶ್' ಬರ್ಬರ ಕೊಲೆ

Posted By:
Subscribe to Filmibeat Kannada

ಕೇರಳದ ಮಾಜಿ ರೇಡಿಯೋ ಜಾಕಿ ರಾಜೇಶ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಮಂಗಳವಾರ ರಾತ್ರಿ ಸುಮಾರು 1.30ರ ವೇಳೆಗೆ ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದ್ದು, ರಾಜೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ಮುಗಿಸಿ ಕೇರಳದ ಅತ್ತಿಗಲ್ ಬಳಿ ಮಾಧವ್ ಪುರದಲ್ಲಿರುವ ಸ್ಟುಡಿಯೋಗೆ ವಾಪಸ್ ಆದಾಗ ಆರ್.ಜೆ ರಾಜೇಶ್ ಮತ್ತು ಸ್ನೇಹಿತ ಕುಟ್ಟನ್ ಮೇಲೆ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಈ ವೇಳೆ ತೀವ್ರ ಗಾಯಗೊಂಡಿದ್ದ ರಾಜೇಶ್ ಮೃತಪಟ್ಟಿದ್ದರೇ, ಕುಟ್ಟನ್ ಗೆ ಗಂಭೀರ ಗಾಯವಾಗಿದೆ.

ಈ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆರ್.ಜೆ ರಾಜೇಶ್ ಅವರ ಸ್ನೇಹಿತ ಕುಟ್ಟನ್ ಹೇಳಿಕೆಯ ಪ್ರಕಾರ ''ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ನಾಲ್ಕು ಜನರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಅವರು ಯಾರು ಎಂದು ನನಗೆ ಗೊತ್ತಿಲ್ಲ'' ಎಂದು ಪೊಲೀಸರಿಗೆ ತಿಳಿಸಿದ್ದಾರೆ.

Former rj Rajesh hacked to death in Kerala

ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೇರಳ ಪೊಲೀಸರು ತನಿಖೆ ಕೈಗೊಂಡಿದ್ದು, ರಾಜೇಶ್ ಅವರಿಗೆ ಯಾವುದೇ ಶತ್ರುಗಳಿಲ್ಲ. ಈ ಹತ್ಯೆಗೆ ಕಾರಣವೇನು ಎಂಬುದು ತಿಳಿದಿಲ್ಲ. ಸದ್ಯಕ್ಕೆ ಕುಟ್ಟನ್ ಅವರ ಹೇಳಿಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ರಾಜೇಶ್ ಅವರು ಎಫ್.ಎಮ್ ವಾಹಿನಿಯಲ್ಲಿ ರೇಡಿಯೋ ಜಾಕಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಆ ಕೆಲಸವನ್ನ ಬಿಟ್ಟು ಪ್ರೈವೇಟ್ ರೇಡಿಯೋ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು. 35 ವರ್ಷದ ರಾಜೇಶ್ ಅವರಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ.

English summary
A former radio jockey was hacked to death near Thiruvananthapuram early Tuesday morning, said police. Rajesh, 35, was the victim of an assault by a gang of men at the former’s recording studio at Madavur near Attingal around 1:30 am, said police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X