For Quick Alerts
  ALLOW NOTIFICATIONS  
  For Daily Alerts

  ನಾಲ್ವರು ನಾಯಕಿಯರಿಗೆ 'ಚಮಕ್': ಸಿಂಪಲ್ ಸುನಿ 'ಗತವೈಭವ' ಹೇಗಿದೆ ನೋಡಿ?

  |

  ಒಂದು ಸಿನಿಮಾಗೆ ಇವರೇ ನಾಯಕಿ ಇರಬೇಕು ಅನ್ನೋದು ನಿರ್ದೇಶಕರ ಕಲ್ಪನೆ. ಅವರ ಇಮ್ಯಾಜಿನೇಷನ್‌ಗೆ ತಕ್ಕಂತೆ ಹೀರೊಯಿನ್ ಹುಡುಕಾಟ ಮಾಡುತ್ತಲೇ ಇರುತ್ತಾರೆ. ಇನ್ನೊಂದು ಕಡೆ ಚಾಲ್ತಿಯಲ್ಲಿರುವ ನಾಯಕಿಯರನ್ನು ಅಪ್ರೋಚ್ ಮಾಡುತ್ತಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ತಮ್ಮ ಮುಂದಿನ ಸಿನಿಮಾಗೆ ಒಬ್ಬರಲ್ಲ ಇಬ್ಬರಲ್ಲ ನಾಲ್ವರು ಹೀರೊಯಿನ್‌ಗೆ ಅಪ್ರೋಚ್ ಮಾಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೇ ಸಿಂಪಲ್‌ ಸುನಿ ನಿರ್ದೇಶಿಸಿದ 'ಅವತಾರ್‌ ಪುರುಷ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಹಿಂದೆನೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. ಅದುವೇ 'ಗತವೈಭವ'. ಈ ಮೂಲಕ ಹೊಸ ಪ್ರತಿಭೆ ದುಷ್ಯಂತ್‌ರನ್ನು ಹೀರೊ ಆಗಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದೇ ಸಿನಿಮಾಗೆ ಹೀರೊಯಿನ್ ಹುಡುಕುತ್ತಿದ್ದಾರೆ.

  'ರಾಬಿನ್ ಹುಡ್' ಕೈ ಬಿಟ್ಟ ಸಿಂಪಲ್ ಸುನಿಯ 'ಗತವೈಭವ': ಹಾಲಿವುಡ್ ನಟ ಅವತಾರವೆತ್ತಿದ ಹೀರೊ'ರಾಬಿನ್ ಹುಡ್' ಕೈ ಬಿಟ್ಟ ಸಿಂಪಲ್ ಸುನಿಯ 'ಗತವೈಭವ': ಹಾಲಿವುಡ್ ನಟ ಅವತಾರವೆತ್ತಿದ ಹೀರೊ

  ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಎರಡು ಹಂತದ ಶೂಟಿಂಗ್ ಮುಗಿಸಿದೆ. ಈ ಮಧ್ಯೆ ಹೊಸ ಪ್ರತಿಭೆಗಾಗಿ ನಾಲ್ವರು ನಾಯಕಿಯನ್ನು ಅಪ್ರೋಚ್ ಮಾಡಿದ್ದಾರಂತೆ. ಹಾಗಿದ್ದರೆ ಸಿಂಪಲ್ ಸುನಿ ಅಪ್ರೋಚ್ ಮಾಡಿದ ಆ ನಾಲ್ವರು ಹೀರೊಯಿನ್ ಯಾರು? ಹೀರೊಯಿನ್ ರಿವೀಲ್ ಮಾಡೋದು ಯಾವಾಗ? ತಿಳಿಯಲು ಮುಂದೆ ಓದಿ.

  ಸಿಂಪಲ್ ಆಗಿಲ್ಲ ಸುನಿ 'ಗತವೈಭವ'

  ಸಿಂಪಲ್ ಆಗಿಲ್ಲ ಸುನಿ 'ಗತವೈಭವ'

  ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್ ಸುನಿ ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದೊಂದು ಸಿನಿಮಾನೂ ಒಂದೊಂದು ರೀತಿ ಇರುತ್ತೆ. ಸಿನಿಮಾ ಕಾಮಿಡಿ ಇದ್ದರೂ, ಅಲ್ಲೊಂದು ಬೇರೆ ಅಪ್ರೋಚ್ ಇರುತ್ತೆ. ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆದ 'ಅವತಾರ ಪುರುಷ' ಕೂಡ ಹೀಗೆ ವಿಭಿನ್ನ ಅಂತ ಅನಿಸಿಕೊಂಡಿತ್ತು. ಈಗ 'ಗತವೈಭವ' ಚಿತ್ರಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಶೇ. 40ರಷ್ಟು ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಈ ಹಂತದಲ್ಲಿ ಹೀರೊಯಿನ್ ಹುಡುಕುವ ಯತ್ನಕ್ಕೆ ಮುಂದಾಗಿದ್ದರು. ಆ ನಾಯಕಿಯರ ಬಗ್ಗೆನೇ ಈಗ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ.

  ವಿರಾಟ್ ಕೊಹ್ಲಿ ಸೆಂಚುರಿ ಹೊಡೆದರೆ 'ಅವತಾರ ಪುರುಷ' ಸಿನಿಮಾ ಟಿಕೆಟ್ ಫ್ರೀ : ಸಿಂಪಲ್ ಸುನಿ ಆಫರ್ವಿರಾಟ್ ಕೊಹ್ಲಿ ಸೆಂಚುರಿ ಹೊಡೆದರೆ 'ಅವತಾರ ಪುರುಷ' ಸಿನಿಮಾ ಟಿಕೆಟ್ ಫ್ರೀ : ಸಿಂಪಲ್ ಸುನಿ ಆಫರ್

  ಸುನಿ ಅಪ್ರೋಚ್ ಮಾಡಿದ ಹೀರೊಯಿನ್ ಯಾರು?

  ಸುನಿ ಅಪ್ರೋಚ್ ಮಾಡಿದ ಹೀರೊಯಿನ್ ಯಾರು?

  ಸಿಂಪಲ್ ಸುನಿಯ ಮತ್ತೊಂದು ಮಹತ್ವಕಾಂಕ್ಷೆ ಸಿನಿಮಾ 'ಗತವೈಭವ'. ಹೊಸ ಪ್ರತಿಭೆಯನ್ನು ಈಗಾಗಲೇ ತಮ್ಮದೇ ಶೈಲಿಯಲ್ಲಿ ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಹೆಚ್ಚು ಕಡಿಮೆ ಎಂಟೂವರೆ ನಿಮಿಷದ ಹೀರೊ ಲಾಂಚ್ ವಿಡಿಯೋ ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು. ಇದೇ ನಾಯಕನಿಗೆ ಸುನಿ ನಾಲ್ವರು ಹೀರೊಯಿನ್‌ ಹುಡುಕಲು ಮುಂದಾಗಿದ್ದರು. ಇಲ್ಲಿವರೆಗೂ ನಾಲ್ವರು ನಾಯಕಿಯರನ್ನು ಅಪ್ರೋಚ್ ಮಾಡಿದ್ದರು. ಅವರು ಮತ್ಯಾರೂ ಅಲ್ಲ ಅನುಪಮಾ ಪರಮೇಶ್ವರನ್, ಶ್ರೀಲೀಲಾ, ರುಕ್ಸಾರ್ ದಿಲನ್, ತಾನ್ಯ ಹೋಪ್‌ರನ್ನು ಅಪ್ರೋಚ್ ಮಾಡಿದ್ದರು. ಈ ನಾಲ್ವರಲ್ಲಿ ಒಬ್ಬರು ನಾಯಕಿಯಾಗಲಿದ್ದಾರೆ.

  ಹೀರೊಯಿನ್ ಎಂಟ್ರಿಗೊಂದು ಟೀಸರ್

  ಹೀರೊಯಿನ್ ಎಂಟ್ರಿಗೊಂದು ಟೀಸರ್

  ಹೀರೊ ಇಂಟ್ರುಡಕ್ಷನ್‌ಗೊಂದು ವಿಡಿಯೋ ಮಾಡಿದ್ದ ಸಿಂಪಲ್ ಸುನಿ, ಈಗ ಹೀರೊಯಿನ್‌ಗೂ ಒಂದು ಎಂಟ್ರಿ ಕೊಡಿಸುತ್ತಿದ್ದಾರೆ. ಅದು ನಾಳೆ (ಆಗಸ್ಟ್ 04) ರಿವೀಲ್ ಆಗುತ್ತಿದೆ. ನಟಿ ಆಶಿಕಾ ರಂಗನಾಥ್‌ 'ಗತವೈಭವ'ಕ್ಕೆ ನಾಯಕಿ ಯಾರು ಅನ್ನೋದನ್ನು ರಿವೀಲ್ ಮಾಡಲಿದ್ದಾರೆ. "ಹೀರೊ ಎಂಟ್ರಿ ಕೊಟ್ಟಂತೆಯೇ ಈ ಸಿನಿಮಾದ ಹೀರೊಯಿನ್ ಕೂಡ ಖಡಕ್ ಎಂಟ್ರಿ ಕೊಡಲಿದ್ದಾರೆ. ನಾವು ನಾಲ್ವರು ನಾಯಕಿಯರನ್ನು ಅಪ್ರೋಚ್ ಮಾಡಲಾಗಿತ್ತು. ಅವರಲ್ಲಿ ಒಬ್ಬರು ಆಯ್ಕೆಯಾಗಿದ್ದಾರೆ. ನಾಳೆ ಅವರನ್ನು ರಿವೀಲ್ ಮಾಡಲಾಗುತ್ತೆ." ಎಂದು ನಿರ್ದೇಶಕ ಸಿಂಪಲ್ ಸುನಿ ಫಿಲ್ಮಿಬೀಟ್‌ಗೆ ಹೇಳಿದ್ದಾರೆ.

  ಇದು ರೊಮ್ಯಾಂಟಿಕ್ 'ಗತವೈಭವ'

  ಇದು ರೊಮ್ಯಾಂಟಿಕ್ 'ಗತವೈಭವ'

  ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಗತವೈಭವ' ಸಿನಿಮಾ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಸಿನಿಮಾದಲ್ಲಿ ದುಷ್ಯಂತ್ ಗ್ರಾಫಿಕ್ಸ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್‌ ಥ್ರಿಲ್ಲರ್‌ ಮಾದರಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ. ದುಷ್ಯಂತ್ ಜೊತೆ 'ರಾಬಿನ್‌ ಹುಡ್‌' ಮಾಡಲು ಹೊರಟಿದ್ದ ಸಿಂಪಲ್ ಸುನಿ 'ಗತವೈಭವ'ಕ್ಕೆ ಕೈ ಹಾಕಿದ್ದರು. ಸದ್ಯ ಶೇ.40ರಷ್ಟು ಶೂಟಿಂಗ್ ಮುಗಿದಿದ್ದು, ಇನ್ನು ಶೇ.60ರಷ್ಟು ಶೂಟಿಂಗ್ ಬಾಕಿ ಉಳಿದಿದೆ. ಈ ವೇಳೆ ಚಿತ್ರತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.

  Recommended Video

  Vikranth Rona | ಜಪಾನ್‌ನಲ್ಲೂ ಮಿಂಚು ಹರಿಸೋಕೆ ಸಜ್ಜಾದ 'ವಿಕ್ರಾಂತ್ ರೋಣ' | Filmibeat Kannada
  English summary
  Four Actress Has Been Approached For Simple Suni Directed Movies Gatha Vaibhava, Know More.
  Wednesday, August 3, 2022, 16:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X