For Quick Alerts
  ALLOW NOTIFICATIONS  
  For Daily Alerts

  'ಪ್ರೀಮಿಯರ್ ಪದ್ಮಿನಿ' ಜೊತೆ ಬರ್ತಿವೆ ಮೂರು ಸಿನಿಮಾಗಳು

  |

  ಶುಕ್ರವಾರದ ಸಿನಿ ಸಂತೆಯಲ್ಲಿ ಈ ಬಾರಿ ನಾಲ್ಕು ಸಿನಿಮಾಗಳು ರಾರಾಜಿಸಲಿವೆ. ಪ್ರತಿ ವಾರವು ಆರೇಳು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದವು. ಆದ್ರೆ ಕಳೆದೆರಡು ವಾರಗಳಿಂದ ಸಿನಿಮಾ ರಿಲೀಸ್ ಸಂಖ್ಯೆ ಕಮ್ಮಿ ಆಗಿವೆ. ಈ ವಾರ ನಾಲ್ಕು ಸಿನಿಮಾಗಳು ಚಿತ್ರಮಂದಿರದ ಬಾಗಿಲು ತಟ್ಟುತ್ತಿವೆ.

  ಈ ಶುಕ್ರವಾರ ಬಹು ನಿರೀಕ್ಷೆಯ ಚಿತ್ರವಾಗಿ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ತೆರೆಗೆ ಬರುತ್ತಿದೆ. ಇನ್ನು ಉಳಿದಂತೆ 'ಜನುಮದ ಸ್ನೇಹಿತರು'. 'ಹೌಲಾ ಹೌಲಾ', ಮತ್ತು 'ಮಹಾಕಾವ್ಯ' ಮೂರು ಚಿತ್ರಗಳು ತೆರೆಗೆ ಬರುತ್ತಿವೆ.

  ಅಣ್ಣವ್ರ ಹುಟ್ಟುಹಬ್ಬದಂದೆ ಮಗನ ಮದುವೆ ಮಾಡಿ ಅಭಿಮಾನ ಮೆರೆದ ಜಗ್ಗೇಶ್

  ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಈಗಾಗಲೆ ಚಿತ್ರಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹಳೆ 'ಪ್ರೀಮಿಯರ್ ಪದ್ಮಿನಿ' ಜೊತೆಗೆ ಹೊಸಬರ ಸಿನಿಮಾಗಳು ಕೂಡ ಚಿತ್ರಪ್ರಿಯರ ಗಮನ ಸೆಳೆಯುತ್ತಿವೆ. ಮುಂದೆ ಓದಿ..

  ಪ್ರೀಮಿಯರ್ ಪದ್ಮಿನಿ ಏರಿ ಬಂದ ಜಗ್ಗೇಶ್

  ಪ್ರೀಮಿಯರ್ ಪದ್ಮಿನಿ ಏರಿ ಬಂದ ಜಗ್ಗೇಶ್

  'ಪ್ರೀಮಿಯರ್ ಪದ್ಮಿನಿ' ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾ. ರಮೇಶ್ ಇಂದರ ನಿರ್ದೇಶದ ಚಿತ್ರಕ್ಕೆ ಶ್ರುತಿ ನಾಯ್ಡು ಬಂವಾಳ ಹೂಡಿದ್ದಾರೆ. ಜಗ್ಗೇಶ್ ಗೆ ನಾಯಕಿಯರಾಗಿ ಸುಧಾರಾಣಿ ಮತ್ತು ನಟಿ ಮಧುಬಾಲ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ 'ಪ್ರೀಮಿಯರ್ ಪದ್ಮಿನಿ' ಕಾರು ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳಲಿದೆ. ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ಪ್ರೀಮಿಯರ್ ಪದ್ಮಿನಿ' ಹೊಸ ಟ್ರೆಂಡ್ ಸೃಷ್ಟಿಮಾಡಲಿದೆ ಎನ್ನುವ ನಿರೀಕ್ಷೆ ಚಿತ್ರತಂಡಕ್ಕಿದೆ.

  ವಿಡಿಯೋ : ದರ್ಶನ್, ಸುದೀಪ್, ಪುನೀತ್ ಇವರೆಲ್ಲ ಯಾರು?

  ಜನುಮದ ಸ್ನೇಹಿತರ ಸಿನಿಮಾ ಇದು

  ಜನುಮದ ಸ್ನೇಹಿತರ ಸಿನಿಮಾ ಇದು

  ಟೈಟಲ್ ಹೇಳುವ ಹಾಗೆ ಗೆಳೆತನದ ಬಗ್ಗೆ ಇರುವ ಸಿನಿಮಾ. ಸ್ನೇಹಕ್ಕೆ ಜಾತಿ, ಮತಗಳ ಬೇದ ಭಾವ ಇರುವುದಿಲಿಲ್ಲ ಎನ್ನುವ ಪವಿತ್ರ ಸ್ನೇಹದ ಬಗ್ಗೆ ಸಿನಿಮಾ ಮಾಡಿದ್ದಾರೆ ಯುವ ನಿರ್ದೇಶಕ ಶೈಕ್ ಮುಕ್ತಿಯಾರ್. ಕಾರ್ಮಿಕ ಮತ್ತು ಮಾಲಿಕರ ನಡುವೆ ನಡೆಯುವ ಕತೆ ಈ ಚಿತ್ರದಲ್ಲಿ ಇದೆಯಂತೆ. ರೋಹಿತ್ ಶೆಟ್ಟಿ, ಅಂಗಾರಿಕ, ಶ್ರೀಧರ್ ಶೆಟ್ಟಿ ಸೇರಿದಂತೆ ಎಲ್ಲ ಹೊಸಬರೆ ಸೇರಿಕೊಂಡು ಮಾಡಿರುವ ಸಿನಿಮಾ. ಟ್ರೈಲರ್ ಮೂಲಕ ಗಮನ ಸೆಳೆದಿರುವ 'ಜನುಮದ ಸ್ನೇಹಿತರು' ಈ ವಾರ ತೆರೆಗೆ ಬರುತ್ತಿದೆ.

  ಶಾಲೆ ಮುಗಿಸಿದ ಮಗಳನ್ನು ಗ್ರೀಕ್ ದ್ವೀಪಕ್ಕೆ ಕರೆದೊಯ್ದ ಸುಧಾರಾಣಿ

  ವಿಷ್ಣು ಅಭಿಮಾನಿಯ ಹೌಲಾ ಹೌಲಾ ಸಿನಿಮಾ

  ವಿಷ್ಣು ಅಭಿಮಾನಿಯ ಹೌಲಾ ಹೌಲಾ ಸಿನಿಮಾ

  ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಸೋಮನಾಥ್ ಪಾಟಿಲ್ ನಿರ್ದೇಶನ ಮಾಡಿರುವ ಸಿನಿಮಾ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದಕ್ಕು ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಂದೇಶ ಸಾರುವ ಸಿನಿಮಾ ಇದಾಗಿದ್ಯಂತೆ. ಹೊಸಬರೆ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ಹನುಮಂತರಾಯ ಗೌಡ, ಆರತಿ, ಅಮಿತ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

  ತೆರೆಗೆ ಬರ್ತಿದೆ ಮಹಾಕಾವ್ಯ

  ತೆರೆಗೆ ಬರ್ತಿದೆ ಮಹಾಕಾವ್ಯ

  'ಮಹಾಕಾವ್ಯ' ಎನ್ನುವ ಹೆಸರಿನ ಸಿನಿಮಾ ಚಂದನವನದಲ್ಲಿ ಸದ್ದಿಲ್ಲದೆ ತಯಾರಾಗಿ ರಿಲೀಸ್ ಗೆ ರೆಡಿಯಾಗಿದೆ. ಶ್ರೀದರ್ಶನ್ ಕತೆ, ನಿರ್ದೇಶಕ ಮತ್ತು ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಸ್ ಆರ್ ಕೆ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. 'ಮಹಾಕಾವ್ಯ' ಚಿತ್ರದಲ್ಲಿ ರನ್ನನಾಗಿ ರಾಮಕೃಷ್ಣ, ಪಂಪನಾಗಿ ರವಿ ಭಟ್ ಹಾಗೂ ಪೊನ್ನನಾಗಿ ಪುರುಷೋತ್ತಮ್ ಕಾಣಿಸಿಕೊಂಡಿದ್ದಾರೆ.

  English summary
  Kannada actor Jaggesh starrer 'Premier Padmini', 'Mahakavya', 'Howla Howla' and 'Janumada Snehitaru' movies are releasing on April 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X