For Quick Alerts
  ALLOW NOTIFICATIONS  
  For Daily Alerts

  ಮೋದಿಗೆ 'ಜನತಾ ಕರ್ಪ್ಯೂ' ಐಡಿಯಾ ಬಂದಿದ್ದು ಎಲ್ಲಿಂದ? ಆರ್‌ಜಿವಿ ಟ್ವೀಟ್‌

  |

  ಕೊರೊನಾ ವೈರಸ್ ವಿರುದ್ಧ ಭಾರತ ಒಗ್ಗೂಡಿ ಹೋರಾಟ ಮಾಡುತ್ತಿದೆ. ಕೊರೊನಾ ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಕ್ತಿಮೀರಿ ಪ್ರಯತ್ನ ಮಾಡುತ್ತಿವೆ.

  ದಿಯಾ ನಾಯಕಿ ಖುಷಿ ಕೊರೊನ ಬಗ್ಗೆ ಹೇಳೋದೇನು | Dia Kushi | Beat corona | Awareness

  ನಿನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಜನಕ್ಕೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಭಾನುವಾರದಂದು 'ಜನತಾ ಕರ್ಪ್ಯೂ' ಹೇರಿಕೊಳ್ಳುವಂತೆ ಮನವಿ ಮಾಡಿದ್ದಾರೆ.

  ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ ವರೆಗೆ ಯಾರೂ ಹೊರಗೆ ಓಡಾಡದಂತೆ ಸ್ವಯಂ ಕರ್ಪ್ಯೂ ವಿಧಿಸಿಕೊಳ್ಳಿ, ಭಾನುವಾರ ದೇಶದಾದ್ಯಂತ 'ಜನತಾ ಕರ್ಪ್ಯೂ' ಆಗಲಿದೆ ಎಂದು ಮೋದಿ ಹೇಳಿದ್ದರು. ಮೋದಿ ಅವರ ಮನವಿಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರ 'ಜನತಾ ಕರ್ಪ್ಯೂ' ಆಚರಿಸಲಾಗುತ್ತಿದೆ.

  ''ಸಂಜೆ ಮೇಲೆ ಕಿಟಕಿ, ಬಾಗಿಲು ಬಳಿ ನಿಂತು ಚಪ್ಪಾಳೆ ತಟ್ಟಿ''

  ''ಸಂಜೆ ಮೇಲೆ ಕಿಟಕಿ, ಬಾಗಿಲು ಬಳಿ ನಿಂತು ಚಪ್ಪಾಳೆ ತಟ್ಟಿ''

  ಅಷ್ಟೆ ಅಲ್ಲದೆ, ಅದೇ ದಿನ ಸಂಜೆ ಮೇಲೆ ಜನರು ತಮ್ಮ ಮನೆ ಬಾಗಿಲಲ್ಲಿ, ಕಿಟಕಿಯ ಬಳಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿ ಎಂದಿದ್ದರು. ಇದಕ್ಕೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಜನತಾ ಕರ್ಪ್ಯೂ ಐಡಿಯಾ ಬಂದಿದ್ದು ಎಲ್ಲಿಂದ?

  ಜನತಾ ಕರ್ಪ್ಯೂ ಐಡಿಯಾ ಬಂದಿದ್ದು ಎಲ್ಲಿಂದ?

  ಆದರೆ ಮೋದಿ ಅವರ ಈ ಬ್ರಿಲಿಯಂಟ್ ಐಡಿಯಾ ಬಂದದ್ದು ಎಲ್ಲಿಂದ? ಇದಕ್ಕೆ ನಿರ್ದೇಶಕ ಹಾಗೂ ವಿಲಕ್ಷಣ ವ್ಯಕ್ತಿತ್ವದ ರಾಮ್ ಗೋಪಾಲ್ ವರ್ಮಾ ನೀಡಿದ್ದಾರೆ. ಮೋದಿ ಅವರ 'ಜನತಾ ಕರ್ಪ್ಯೂ' ಐಡಿಯಾದ ಬಗ್ಗೆ ವಿಡಿಯೋ ಒಂದನ್ನು ರಾಂ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

  ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ

  ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ

  ಬಿಬಿಸಿ ಚಾನೆಲ್‌ ನ ವಿಡಿಯೋದಲ್ಲಿ ಮೋದಿ ಅವರ ಐಡಿಯಾ 'ಜನತಾ ಕರ್ಪ್ಯೂ' ತರಹವೇ ಜನರೆಲ್ಲಾ ಮನೆಯಲ್ಲೇ ಉಳಿದು ರಾತ್ರಿ ಆದ ನಂತರ ಮನೆಯ ಕಿಟಕಿಗಳ ಬಳಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ಕೊರೊನಾ ವೈರಸ್ ವಿರುದ್ಧ ಹೋರಾಡಿದ ವೈದ್ಯರಿಗೆ ಅವರು ನೀಡಿದ ಗೌರವವಂತೆ.

  ಹಲವು ದೇಶಗಳಲ್ಲಿ ಹೀಗೆಯೇ ಮಾಡುತ್ತಿದ್ದಾರೆ

  ಹಲವು ದೇಶಗಳಲ್ಲಿ ಹೀಗೆಯೇ ಮಾಡುತ್ತಿದ್ದಾರೆ

  ರಾಮ್ ಗೋಪಾಲ್ ವರ್ಮಾ ಮಾಡಿರುವ ವಿಡಿಯೋ ಟ್ವೀಟ್‌ನಲ್ಲಿರುವಂತೆ, 'ಸ್ಪೇನ್, ಇಟಲಿ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಜನರೆಲ್ಲಾ ಮನೆಗಳಲ್ಲೇ ಉಳಿದು, ರಸ್ತೆಗಳೆಲ್ಲವೂ ಖಾಲಿ ಇದೆ. ರಾತ್ರಿ 10 ಗಂಟೆ ಆಗುತ್ತಿದ್ದಂತೆ ಸ್ಪೇನ್‌ನಲ್ಲಿ ಜನರು ಕಿಟಕಿಗಳ ಬಳಿ ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ.

  ಮೋದಿ ಐಡಿಯಾ ಬಂದಿದ್ದು ಇಲ್ಲಿಂದಲೇ? ರಾಮ್ ಗೋಪಾಲ್ ವರ್ಮಾ

  ಮೋದಿ ಐಡಿಯಾ ಬಂದಿದ್ದು ಇಲ್ಲಿಂದಲೇ? ರಾಮ್ ಗೋಪಾಲ್ ವರ್ಮಾ

  ವಿಡಿಯೋ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, 'ಓಹ್ ಹಾಗಾದರೆ ಮೋದಿ ಅವರ 'ಐಡಿಯಾ' ಬಂದಿದ್ದು ಇಲ್ಲಿಂದವಾ?'' ಎಂದು ತಮಾಷೆ ತುಂಬಿದ ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

  English summary
  From where Narendra Modi get his 'janatha curfew' idea. Ram Gopal Varma tweet a video and said, Modi got idea from Spain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X