For Quick Alerts
  ALLOW NOTIFICATIONS  
  For Daily Alerts

  ದರ್ಶನ್ ತೋಟದ ಮನೆ ಸೇರಿದ ಸುಂದರ ಗಿಣಿ

  |

  ನಟ ದರ್ಶನ್‌ ಅವರ ಪ್ರಾಣಿ-ಪಕ್ಷಿ ಪ್ರೇಮದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ದರ್ಶನ್ ಅವರ ಮೈಸೂರಿನ ತೋಟದ ಮನೆಯಲ್ಲಿ ಹಲವು ರೀತಿಯ ಪ್ರಾಣಿಗಳು ಪಕ್ಷಿಗಳು ಆರೈಕೆ ಪಡೆಯುತ್ತಿವೆ. ದರ್ಶನ್ ಅವರ ಫಾರಂ ಹೌಸ್‌ಗೆ ಇಂದು ಹೊಸ ಅತಿಥಿಯ ಸೇರ್ಪಡೆಯಾಗಿದೆ.

  ಶುಕವನದಲ್ಲಿ ಮುದ್ದು ಗಿಳಿಗಳ ಜೊತೆ ಕಾಲ ಕಳೆದ‌ ಡಿ ಬಾಸ್ | Filmibeat Kannada

  ಜನತಾ ಕರ್ಫ್ಯೂ ಆರಂಭವಾದಾಗಿನಿಂದಲೂ ಮೈಸೂರಿನಲ್ಲಿಯೇ ನೆಲೆಸಿರುವ ದರ್ಶನ್ ನಿನ್ನೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಶ್ರಮದಲ್ಲಿರುವ ಗಿಣಿಗಳನ್ನು ನೋಡಿ ಆನಂದಿಸಿದ್ದಾರೆ.

  ಗಣಪತಿ ಸಚ್ಚಿದಾನಂದ ಆಶ್ರಮದ ಸಚ್ಚಿದಾನಂದ ಶ್ರೀಗಳೊಟ್ಟಿಗೆ ಕುಶಲೋಪರಿ ನಡೆಸಿ ಆಶೀರ್ವಾದ ಪಡೆದ ದರ್ಶನ್‌ಗೆ ಶ್ರೀಗಳು ಗಿಣಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ರಾಜವರ್ಧನ್ ಸಹ ದರ್ಶನ್ ಜೊತೆಗಿದ್ದರು.

  ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದ ಗಿಣಿಯನ್ನು ದರ್ಶನ್ ಗೌರವದಿಂದ ಸ್ವೀಕರಿಸಿದ್ದು ತಮ್ಮ ಫಾರಂ ಹೌಸ್‌ನಲ್ಲಿ ಗಿಣಿಯನ್ನು ಸಾಕಲಿದ್ದಾರೆ ದರ್ಶನ್.

  ದರ್ಶನ್ ಈಗಾಗಲೇ ಕೆಲವು ಕುದುರೆಗಳು, ಹಸು, ಎತ್ತುಗಳು, ಕುರಿ, ಪಾರಿವಾಳ ಇನ್ನೂ ಕೆಲವು ಪ್ರಾಣಿ-ಪಕ್ಷಗಳನ್ನು ತಮ್ಮ ಫಾರಂ ಹೌಸ್‌ನಲ್ಲಿ ಸಾಕುತ್ತಿದ್ದಾರೆ. ಇದೀಗ ಗಿಣಿಯೂ ಇದಕ್ಕೆ ಸೇರ್ಪಡೆಯಾಗಿದೆ.

  ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿಯ ಜೊತೆಗೆ ವನ್ಯಜೀವಿಗಳ ಫೊಟೊಗ್ರಫಿಯಲ್ಲಿಯೂ ದರ್ಶನ್ ಆಸಕ್ತಿ ಹೊಂದಿದ್ದಾರೆ. ಆಗಾಗ್ಗೆ ಗೆಳೆಯರೊಟ್ಟಿಗೆ ಅರಣ್ಯಕ್ಕೆ ಸಫಾರಿ ತೆರಳುವ ದರ್ಶನ್ ಪ್ರಾಣಿಗಳ ಛಾಯಾಚಿತ್ರ ತೆಗೆದು ಅದನ್ನು ಮಾರಿ ಬಂದ ಹಣವನ್ನು ವನ್ಯಜೀವಿಗಳಿಗೆ ಬಳಸಲು ದೇಣಿಗೆಯಾಗಿ ನೀಡುತ್ತಾರೆ.

  ಸಿನಿಮಾ ವಿಷಯಕ್ಕೆ ಬರುವುದಾದರೆ, ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಕೆಲವು ತಿಂಗಳ ಮಾರ್ಚ್ 11 ಕ್ಕೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ದರ್ಶನ್ ನಟಿಸುತ್ತಿರುವ 'ರಾಜ ವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದೆ.

  English summary
  Actor Darshan visited Ganapathi Sachidananda ashram in Mysore. Sachidananda Seer gave parrot to Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X