For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಹೇಗಿದೆ ಸಿದ್ಧತೆ? 5 ಲಕ್ಷ ಅಪ್ಪು ಫ್ಯಾನ್ಸ್ ಬರೋ ಸಾಧ್ಯತೆ!

  |

  'ಗಂಧದ ಗುಡಿ' ಇದು ಕೇವಲ ಸಿನಿಮಾ ಅಲ್ಲ. ಈ ಸಿನಿಮಾ ಕನ್ನಡಿಗರಿಗೆ, ಅಪ್ಪು ಅಭಿಮಾನಿಗಳಿಗೊಂದು ಎಮೋಷನ್. ಈ ಕಾರಣಕ್ಕೆ 'ಗಂಧದ ಗುಡಿ' ಬಿಡುಗಡೆಗೂ ಮುನ್ನ ಸ್ಯಾಂಡಲ್‌ವುಡ್ ಹಿಂದೆಂದೂ ಕಾಣದಂತಹ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲು ಸಕಲ ಸಿದ್ಧತೆಗಳೂ ನಡೆಯುತ್ತಿವೆ.

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸು 'ಗಂಧದ ಗುಡಿ'ಯನ್ನು ಲೋಕಾರ್ಪಣೆ ಮಾಡುವುದಕ್ಕೆ ದೊಡ್ಮನೆ ಕುಟುಂಬ ಸಜ್ಜಾಗಿದೆ. ಈಗಾಗಲೇ ಗಣ್ಯಾತೀಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನೂ ನೀಡಲಾಗಿದೆ. ಈ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

  'ಗಂಧದ ಗುಡಿ'ಯಲ್ಲಿ ಬದುಕಿದ ದೊಡ್ಮನೆ: ಡಾ.ರಾಜ್‌, ಶಿವಣ್ಣ, ಪುನೀತ್ ಸಿನಿಮಾ ಹೈಲೈಟ್ ಏನು?'ಗಂಧದ ಗುಡಿ'ಯಲ್ಲಿ ಬದುಕಿದ ದೊಡ್ಮನೆ: ಡಾ.ರಾಜ್‌, ಶಿವಣ್ಣ, ಪುನೀತ್ ಸಿನಿಮಾ ಹೈಲೈಟ್ ಏನು?

  'ಗಂಧದ ಗುಡಿ'ಯನ್ನು ಕಣ್ತುಂಬಿಕೊಳ್ಳುವುದಕ್ಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿದ್ಮೇಲೆ ಅವರಿಗಾಗಿಯೇ ಆಯೋಜಿಸಿರುವ 'ಗಂಧದ ಗುಡಿ' ಪ್ರಿ-ರಿಲೀಸ್‌ ಈವೆಂಟ್‌ಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆಯಿದೆ. ಅದಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿರುವ ಪುನೀತ್ ಫ್ಯಾನ್ಸ್ ಪ್ರತಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

  5 ಲಕ್ಷ ಅಪ್ಪು ಅಭಿಮಾನಿಗಳು ಸೇರುವ ಸಾಧ್ಯತೆ?

  5 ಲಕ್ಷ ಅಪ್ಪು ಅಭಿಮಾನಿಗಳು ಸೇರುವ ಸಾಧ್ಯತೆ?

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ದರ್ಶನಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕರ್ನಾಟಕ ರತ್ನನ ಕೊನೆಯ ಅದ್ಧೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಬರುವ ಸಾಧ್ಯತೆಯಿದೆ. ನಿರೀಕ್ಷೆಯ ಪ್ರಕಾರ, ಸುಮಾರು 5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಈ ಪ್ರಿ-ರಿಲೀಸ್‌ ಈವೆಂಟ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಈ ಬೆನ್ನಲ್ಲೇ ಅವರಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

  ಪುನೀತ್ ರಾಜ್‌ಕುಮಾರ್ ಚಿತ್ರ ಹಿಡಿದ ರಾಹುಲ್ ಗಾಂಧಿ!ಪುನೀತ್ ರಾಜ್‌ಕುಮಾರ್ ಚಿತ್ರ ಹಿಡಿದ ರಾಹುಲ್ ಗಾಂಧಿ!

  ಅಭಿಮಾನಿಗಳಿಗಾಗಿ ಸಕಲ ವ್ಯವಸ್ಥೆ

  ಅಭಿಮಾನಿಗಳಿಗಾಗಿ ಸಕಲ ವ್ಯವಸ್ಥೆ

  ಅಕ್ಟೋಬರ್ 21ರಂದು ನಡೆಯಲಿರುವ ಈ ಪ್ರಿ-ರಿಲೀಸ್ ಈವೆಂಟ್‌ಗೆ ರಾಜ್ಯ ಮೂಲೆ ಮೂಲೆಯಿಂದ ಫ್ಯಾನ್ಸ್ ಬರುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಉಳಿದುಕೊಳ್ಳಲು, ಊಟ-ತಿಂಡಿ ವ್ಯವಸ್ಥೆಯನ್ನು ಮಾಡಲು ಡಾ‌.ರಾಜ್ ಕುಟುಂಬದ ಅಭಿಮಾನಿ ಸಂಘ ನಿರ್ಧರಿಸಿದೆ. ಈ ಸಂಬಂಧ ಮಾಹಿತಿ ನೀಡಲು ನಾಳೆ (ಅಕ್ಟೋಬರ್ 14) ಪ್ರತಿಕಾಗೋಷ್ಠಿಯನ್ನು ಕರೆದಿದೆ. "ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಬರುವ ನಿರೀಕ್ಷೆಯಿದೆ. ನಮ್ಮ ಲೆಕ್ಕಾಚಾರದ ಪ್ರಕಾರ, ಸುಮಾರು 5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ಸಾಧ್ಯತೆಯಿದೆ. ಹೀಗಾಗಿ ಬೇರೆ ಬೇರೆ ಕಡೆಯಿಂದ ಬರುವವರಿಗೆ ಏನು ವ್ಯವಸ್ಥೆ ಮಾಡುತ್ತಿದ್ದೇವೆ ಅನ್ನೋದು ಪತ್ರಿಕಾಗೋಷ್ಠಿಯಲ್ಲಿ ಅನೌನ್ಸ್ ಮಾಡಲಾಗುತ್ತದೆ." ಅಭಿಮಾನಿಯೊಬ್ಬರು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

  ಪುನೀತ್ ವರ್ವ ಸಿದ್ಧತೆ ಹೇಗಿದೆ?

  ಪುನೀತ್ ವರ್ವ ಸಿದ್ಧತೆ ಹೇಗಿದೆ?

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಈ ಸಿನಿಮಾದ ಪ್ರಿ-ರಿಲೀಸ್‌ ಈವೆಂಟ್‌ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ 'ಪುನೀತ್ ಪರ್ವ' ಅನ್ನೋ ಹೆಸರಿಟ್ಟು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಸ್ಯಾಂಡಲ್‌ವುಡ್‌ನ ಗಣ್ಯಾತೀಗಣ್ಯರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರಿಂದ ಅಪ್ಪು ನೆನಪನ್ನು ಸಂಭ್ರಮಿಸಲು ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಚಿತ್ರರಂಗದ ಪ್ರಮುಖ ತಾರೆಯರು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

  Exclusive: ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್': 'ಗಂಧದ ಗುಡಿ' ಫ್ಲೇವರ್ಸ್ ಸವಿಯಲು ರೆಡಿಯಾಗಿ!Exclusive: ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್': 'ಗಂಧದ ಗುಡಿ' ಫ್ಲೇವರ್ಸ್ ಸವಿಯಲು ರೆಡಿಯಾಗಿ!

  'ಗಂಧದ ಗುಡಿ' ಬಿಡುಗಡೆಗೆ ದಿನಗಣನೆ

  'ಗಂಧದ ಗುಡಿ' ಬಿಡುಗಡೆಗೆ ದಿನಗಣನೆ

  'ಗಂಧದ ಗುಡಿ' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಅಕ್ಟೋಬರ್ 28ಕ್ಕೆ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆಯಾದಲ್ಲಿಂದ ಅಪ್ಪು ಹಬ್ಬವನ್ನಾಗಿ ಆಚರಿಸಲು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಪುನೀತ್ ಅಭಿಮಾನಿಗಳು ಥಿಯೇಟರ್ ಮುಂದೆ ಸಂಭ್ರಮ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.

  English summary
  Gandhada Gudi Pre-Release Event: 5 Lakh Puneeth Fans Will Be Gathering, Know More.
  Thursday, October 13, 2022, 15:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X