For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಹಿರಂಗ

  |
  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಹಿರಂಗ | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಂಬಿನೇಷನ್ ನಲ್ಲಿ ಗಂಡುಗಲಿ ಮದಕರಿ ನಾಯಕ ಚಿತ್ರ ಬರಲಿದೆ ಎಂದು ಹೇಳಲಾಗ್ತಿದೆ. ಇದೀಗ, ಈ ಚಿತ್ರದ ಫಸ್ಟ್ ಲುಕ್ ಅಧಿಕೃತವಾಗಿ ಬಹಿರಂಗವಾಗಿದೆ.

  ನಾಳೆ (ಫೆಬ್ರವರಿ 16) ದರ್ಶನ್ ಅವರ ಹುಟ್ಟುಹಬ್ಬವಿರುವ ಕಾರಣ ಒಂದು ದಿನ ಮುಂಚೆಯೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಡಿ ಬಾಸ್ ಗೆ ವಿಶೇಷವಾಗಿ ಶುಭಕೋರಿದ್ದಾರೆ.

  ದರ್ಶನ್-ರಾಕ್ಲೈನ್ ಚಿತ್ರಕ್ಕಾಗಿ ಸುದೀಪ್ ಇಷ್ಟೊಂದು ತ್ಯಾಗಕ್ಕೆ ಸಿದ್ಧವಾದ್ರಾ.?

  ಚಿತ್ರದುರ್ಗ ಪಾಳೇಗಾರ ಮದಕರಿ ನಾಯಕನ ಕಥೆ ಹೇಳಲು ಹೊರಟಿರುವ ದರ್ಶನ್ ಮತ್ತು ರಾಕ್ ಲೈನ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾವನ್ನ ತೆರೆಗೆ ತರಲಿದ್ದಾರೆ ಎನ್ನುವುದಕ್ಕೆ ಈ ಪೋಸ್ಟರ್ ಉದಾಹರಣೆಯಾಗಿದೆ. ಕೈಯಲ್ಲಿ ಕತ್ತಿ ಹಿಡಿದು ಉದ್ದನೇಯ ಮೀಸ್ ಬಿಟ್ಟು ಖಡಕ್ ಆಗಿ ಮದಕರಿ ನಾಯಕನಾಗಿ ಪೋಸ್ ಕೊಟ್ಟಿರುವ ದರ್ಶನ್ ಮೇಲೆ ನಿರೀಕ್ಷೆ ಬೆಟ್ಟದಷ್ಟು ಹೆಚ್ಚಿದೆ.

  ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ

  ಇನ್ನುಳಿದಂತೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಬಿ ಎಲ್ ವೇಣು ಅವರು ಕಥೆ ಬರೆದಿದ್ದಾರೆ. ನಾದಬ್ರಹ್ಮ ಹಂಸಲೇಖ ಬಹುದಿನಗಳ ನಂತರ ಬಹುದೊಡ್ಡ ಪ್ರಾಜೆಕ್ಟ್ ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ಸದ್ಯದ ಮಾಹಿತಿ ಪ್ರಕಾರ ನಾಳೆ ಗಂಡುಗಲಿ ಮದಕರಿ ನಾಯಕ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆಯಂತೆ. ಸದ್ಯ ಯಜಮಾನ ಮುಗಿಸಿ ಒಡೆಯ ಶೂಟಿಂಗ್ ಮಾಡ್ತಿರುವ ದರ್ಶನ್, ನಂತರ ರಾಬರ್ಟ್ ಚಿತ್ರವನ್ನ ಆರಂಭಿಸಲಿದ್ದಾರೆ. ಅದು ಮುಗಿದ ತಕ್ಷಣ ಮದಕರಿ ನಾಯಕ ಚಿತ್ರದ ಚಿತ್ರೀಕರಣ ಆರಂಭಿಸಬಹುದು.

  ಈ ಬಗ್ಗೆ ಅಧಿಕೃತ ಮಾಹಿತಿ ಸದ್ಯಕ್ಕಿಲ್ಲ. ಈ ಕಡೆ ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾದ ಯಶಸ್ಸಿನಲ್ಲಿರುವ ರಾಕ್ ಲೈನ್, ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಆದಿಲಕ್ಷ್ಮಿ ಪುರಾಣ ಸಿನಿಮಾ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ.

  English summary
  Kannada actor Darshan's 'Gandugali Madakari Nayaka' movie movie poster out. The movie is producing by Rockline Venkatesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X