»   » ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...

ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...

Posted By:
Subscribe to Filmibeat Kannada

ಕಿರುತೆರೆಯಲ್ಲಿ ಕಮಿಟ್ ಆಗಿದ್ದ 'ಸೂಪರ್ ಮಿನಿಟ್' ಕಾರ್ಯಕ್ರಮ ಮುಗೀತು. ಬಾಲಿವುಡ್ 'ದಬ್ಬಂಗ್' ರೀಮೇಕ್ 'ಕನ್ವರ್ ಲಾಲ್' ಮುಂದಕ್ಕೆ ಹೋಯ್ತು. ಹಾಗಾದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಈಗೇನ್ ಮಾಡ್ತಿದ್ದಾರೆ..?

ಸದ್ದಿಲ್ಲದೇ 'ZOOಮ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೌದು, ಕಳೆದ ವರ್ಷ ಗಣಿ ಹುಟ್ಟುಹಬ್ಬದಂದು ಪೂಜೆ ಮುಗಿಸಿದ 'ZOOಮ್' ಚಿತ್ರ ಅದಾಗಲೇ ಮೊದಲನೇ ಹಂತದ ಶೂಟಿಂಗ್ ಮುಗಿಸಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

Ganesh and Radhika Pandit

ಈಗಷ್ಟೇ ರಿಲೀಸ್ ಆಗಿರುವ 'ZOOಮ್' ಚಿತ್ರದ ಪೋಸ್ಟರ್ ನೋಡಿದ್ರೆ, ಇನ್ನೊಮ್ಮೆ ಕಣ್ಣುಜ್ಜಿಕೊಂಡು ನೋಡಬೇಕು. ಹಾಗೆ, ಗುರುತು ಸಿಗದಷ್ಟು ಸ್ಟೈಲಿಶ್ ಆಗಿ ಬದಲಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್.

'ZOOಮ್'....ಹೆಸರಿಗೆ ತಕ್ಕಂತೆ ಇದು ಕಂಪ್ಲೀಟ್ ಮಾರ್ಡನ್ ಸಿನಿಮಾ ಅಂತ ಚಿತ್ರದ ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ. ಸಖತ್ ಸ್ಟೈಲಿಶ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಮಿರಿ ಮಿರಿ ಮಿಂಚಿರುವುದೇ 'ZOOಮ್' ಹೈಲೈಟ್. [ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಾಧಿಕಾ ಪಂಡಿತ್]

Ganesh and Radhika Pandit

'ZOOಮ್' ಚಿತ್ರಕ್ಕೋಸ್ಕರ ಮೇಕ್ ಓವರ್ ಮಾಡಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್, ತಲೆಗೂದಲಿಗೆ ಸ್ಪೈಕ್ ಮಾಡಿಸಿಕೊಂಡು, ಹರೆಯದ ಹುಡುಗಿಯರ ಹೃದಯಕ್ಕೆ ಬಾಣ ಬಿಡುವಂತೆ ಪೋಸ್ ಕೊಟ್ಟಿದ್ದಾರೆ.

zoom

ರಾಧಿಕಾ ಪಂಡಿತ್ ಕೂಡ ಕಮ್ಮಿ ಏನಿಲ್ಲ. ಹೇರ್ ಸ್ಟೈಲ್ ಬದಲಿಸಿಕೊಂಡು ಮಾಡೆಲ್ ರೇಂಜಿಗೆ ರಾಧಿಕಾ ಪಂಡಿತ್ ರೂಪಾಂತರಗೊಂಡಿದ್ದಾರೆ. ಮೊದಲ ನೋಟಕ್ಕೆ ಸ್ಟೈಲಿಶ್ ಸಿನಿಮಾದಂತೆ ಕಾಣುವ 'ZOOಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಪ್ರಶಾಂತ್ ರಾಜ್.

ರಾಧಿಕಾ ಪಂಡಿತ್ ಜೊತೆ 'ಲವ್ ಗುರು' ಮತ್ತು 'ಗಾನ ಬಜಾನ' ಚಿತ್ರಗಳನ್ನ ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಈಗ ಅದೇ ರಾಧಿಕಾಗೆ 'ZOOಮ್' ಹಾಕಿದ್ದಾರೆ. ಇನ್ನೂ ವಿಶೇಷ ಅಂದ್ರೆ, 'ZOOಮ್' ಚಿತ್ರಕ್ಕೆ ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ಥಮನ್ ಮ್ಯೂಸಿಕ್ ನೀಡುತ್ತಿದ್ದಾರೆ. [ಸ್ಟೈಲಿಶ್ ಸ್ಟಾರ್ ಪ್ರೇಮ್ 'ದಳಪತಿ' ಫಸ್ಟ್ ಲುಕ್ ಔಟ್]

Ganesh and Radhika Pandit

ಬೆಂಗಳೂರಿನ ಸುತ್ತಮುತ್ತ 'ZOOಮ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯದಲ್ಲೇ ಎರಡನೇ ಹಂತಕ್ಕೆ ಚಾಲನೆ ಸಿಗಲಿದ್ದು, ಚಿತ್ರತಂಡ ವಿದೇಶಗಳಿಗೆ ಫ್ಲೈಟ್ ಟಿಕೆಟ್ಸ್ ಬುಕ್ ಮಾಡಿದೆ. (ಫಿಲ್ಮಿಬೀಟ್ ಕನ್ನಡ)

English summary
Golden Star Ganesh and Radhika Pandit acted 'Zoom' movie First Look poster is out. Ganesh and Radhika Pandit looks super stylish in the movie, which is directed by Prashant Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada