»   » ಮತ್ತೆ ಜೋಗದ ಗುಂಡಿ ಬಳಿ ಗಣೇಶ್ - ಭಟ್ಟರ ಸಂಚಾರ

ಮತ್ತೆ ಜೋಗದ ಗುಂಡಿ ಬಳಿ ಗಣೇಶ್ - ಭಟ್ಟರ ಸಂಚಾರ

Posted By:
Subscribe to Filmibeat Kannada

ಗಣೇಶ್ ಮತ್ತು ಯೋಗರಾಜ್ ಭಟ್ ಅವರಿಗೂ ಜೋಗ್ ಫಾಲ್ಸ್ ಗೂ ಒಂದು ಅವಿನಾಭಾವ ಸಂಬಂಧ ಇದೆ. 'ಮುಂಗಾರು ಮಳೆ' ಎಂಬ ಮ್ಯಾಜಿಕಲ್ ಸಿನಿಮಾದ ಗೆಲುವಿನ ಹಿಂದಿದ್ದ ಕಾರಣಗಳಲ್ಲಿ ಜೋಗ ಜಲಪಾತ ಕೂಡ ಒಂದು.

ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?

ಈಗ ಮತ್ತೆ ಗಣೇಶ್ ಮತ್ತು ಯೋಗರಾಜ್ ಭಟ್ ಜೋಗ್ ಫಾಲ್ಸ್ ಗೆ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ ಅವರು ಶೂಟಿಂಗ್ ಗಾಗಿ ಅಲ್ಲಿಗೆ ಹೋಗಿಲ್ಲ. ಫಾಲ್ಸ್‌ ಮೇಲೆ ನಿಂತು ಗಣೇಶ್‌ ಫೇಸ್‌ಬುಕ್‌ ಲೈವ್‌ ಬಂದು ತಮ್ಮ ಅಭಿಮಾನಿಗಳಿಗೆಲ್ಲ ಜೋಗಕ್ಕೆ ಬಂದಿರುವ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

Ganesh And Yogaraj Bhat In Jog Falls.

ಅಂದಹಾಗೆ, 'ಮಗುಳು ನಗೆ' ಸಿನಿಮಾದ ಆಡಿಯೋ ಬಿಡುಗಡೆಯನ್ನು ಒಂದೊಂದು ಊರಿನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿರುವ ತಂಡ ಸದ್ಯ ಜೋಗದಲ್ಲಿ ಇದೆ. ಆದರೆ ಜೋಗದಲ್ಲಿ ಸಾಂಗ್ ರಿಲೀಸ್ ಮಾಡುವ ಬಗ್ಗೆ ಗಣೇಶ್ ಲೈವ್ ನಲ್ಲಿ ಹೇಳಿಕೊಂಡಿಲ್ಲ.

English summary
Actor Ganesh and Director Yogaraj Bhat In Jog Falls.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada