»   » ಗಣೇಶ್ ಈಗ ಆಟೋರಾಜಾ; ಕಿಚ್ಚ ಸುದೀಪ್ ಕ್ಲಾಪ್

ಗಣೇಶ್ ಈಗ ಆಟೋರಾಜಾ; ಕಿಚ್ಚ ಸುದೀಪ್ ಕ್ಲಾಪ್

By: ಶ್ರೀರಾಮ್ ಭಟ್
Subscribe to Filmibeat Kannada
Ganesh Bhama
ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ 'ಆಟೋ ರಾಜ' ಮುಹೂರ್ತ ಮೊನ್ನೆ, ಅಂದರೆ 22 ಆಗಸ್ಟ್ 2012ರಂದು ನೆರವೇರಿದೆ. ಗಣೇಶ್-ಭಾಮಾ ಜೋಡಿಯ ಈ ಚಿತ್ರದಲ್ಲಿ ಮುಹೂರ್ತದಲ್ಲಿ 'ಕ್ಲಾಪ್' ಮಾಡಿದ್ದು 'ಕಿಚ್ಚ ಸುದೀಪ್' ಎಂಬುದು ವಿಶೇಷ. ಸುದೀಪ್ ಜೊತೆಯಲ್ಲಿ ನಿರ್ಮಾಪಕ ಕೆ ಮಂಜು ಕೂಡ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. 'ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ ಪ್ರಕಾಶ್ ಈ 'ಆಟೋರಾಜ' ಚಿತ್ರವನ್ನು ನಿರ್ದೇಶಿಸಲಿದ್ದಾರೆ.

'ಆಟೋರಾಜ' ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕರಾದ ಎಂಡಿ ವಿಶ್ವ ಹಾಗೂ ಗಿರೀಶ್, ಚಿತ್ರದ ಮುಹೂರ್ತ ಮುಗಿಸಿಕೊಂಡು ಹೊಸ ಕನಸು ಹಾಗೂ ಆತ್ಮವಿಶ್ವಾಸದೊಂದಿಗೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಗಣೇಶ್ ಜೋಡಿಯಾಗಿ ಭಾಮಾ ಇದ್ದರೂ ಚಿತ್ರದ ಇನ್ನೊಬ್ಬ ನಾಯಕಿಗಾಗಿ ಹುಡುಕಾಟ ನಡೆದಿದ್ದು ಸದ್ಯದಲ್ಲೇ ಫೈನಲ್ ಆಗಲಿದೆ ಎಂದಿದ್ದಾರೆ ಚಿತ್ರದ ನಿರ್ಮಾಪಕರು.

ಅಮೂಲ್ಯಾ ಜೊತೆ 'ಶಿಶಿರ' ಖ್ಯಾತಿಯ ಮಂಜು ಸ್ವರಾಜ್ ಚಿತ್ರ 'ಶ್ರಾವಣಿ-ಸುಬ್ರಮಣ್ಯ' ಚಿತ್ರದಲ್ಲಿ ನಟಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್, ಇತ್ತೀಚಿಗಷ್ಟೆ ದೀಪಾ ಸನ್ನಿಧಿ ಜೋಡಿಯಾಗಿ 'ಸಕ್ಕರೆ' ಚಿತ್ರೀಕರಣ ಮುಗಿಸಿದ್ದಾರೆ. ಇದೀಗ 'ಆಟೋರಾಜ'ನಾಗಲು ಹೊರಟಿರುವ ಗಣೇಶ್ ಸದ್ಯಕ್ಕೆ ಫುಲ್ ಬಿಜಿ. ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ 'ರೋಮಿಯೋ' ಚಿತ್ರ ಗಣೇಶ್ ಅವರಿಗೆ ಮತ್ತೆ ಯಶಸ್ಸಿನ ಸವಿ ತೋರಿಸಿದೆ.

ಈ ಮೊದಲು 'ಕಳ್ಳ ಮಳ್ಳ ಸುಳ್ಳ' ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾಗಿಸಿದ್ದ ನಿರ್ದೇಶಕ ಉದಯ ಪ್ರಕಾಶ್, ಈ 'ಆಟೋ ರಾಜ' ಚಿತ್ರಕ್ಕೆ ಬಹಳಷ್ಟು ಹೋಮ್ ವರ್ಕ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರಕ್ಕೆ ಪೂರಕವಾಗಿರುವುದರ ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪುವಂತಿದೆ ಎಂಬುದು ಚಿತ್ರತಂಡದಿಂದ ಬಂದಿರುವ ಮಾಹಿತಿ.

ಲಾಂಚ್ ಆಗಲಿರುವ ಈ ಹೊಸ 'ಆಟೋರಾಜ' ಚಿತ್ರಕ್ಕೂ, ಈ ಮೊದಲು ಶಂಕರ್ ನಾಗ್-ಗಾಯತ್ರಿ ಜೋಡಿಯಲ್ಲಿ ಬಂದಿದ್ದ ಚಿತ್ರ 'ಆಟೋರಾಜ'ಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರ್ದೇಶಕ ಉದಯ ಪ್ರಕಾಶ್ ಮತ್ತೆ ಸ್ಪಷ್ಟಪಡಿಸಿದ್ದಾರೆ. ಹೋಲಿಕೆಗೆ ಯಾವುದೇ ಆಸ್ಪದವಿಲ್ಲವಾದ್ದರಿಂದ ಹೊಸ 'ಆಟೋರಾಜ'ನನ್ನು ಗಣೇಶ್ ಚಿತ್ರದ ಮೂಲಕ ಪ್ರೇಕ್ಷಕರು ನೋಡಬಹುದು. ಹೊಸ 'ಆಟೋರಾಜ'ನ ಬಗ್ಗೆ ಈಗ ಎಲ್ಲರಲ್ಲಿ ಕುತೂಹಲ ಮೂಡಿದೆ.

ಹಳೆಯ ಸೂಪರ್ ಹಿಟ್ ಚಿತ್ರದ 'ಕ್ಯಾಚಿ' ಹೆಸರಿಟ್ಟುಕೊಂಡು ಬರುತ್ತಿರುವ ಹೊಸ 'ಆಟೋರಾಜ' ಚಿತ್ರಕ್ಕಾಗಿ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಹೊಸ 'ಸೌತ್ ಇಂಡಿಯಾ' ಸ್ಟಾರ್ ಆಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಬಂದು (ಗಣೇಶ್ ಚಿತ್ರಕ್ಕೆ!) 'ಆಟೋರಾಜ'ಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದು ಎಲ್ಲರಿಗೂ ಅಚ್ಚರಿ ಜೊತೆಗೆ ಆನಂದವನ್ನೂ ತಂದಿದೆ. ಗಣೇಶ್ ಅಪ್ಪಿಕೊಂಡು ಹಾರೈಸಿರುವ ಸುದೀಪ್ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. (ಒನ್ ಇಂಡಿಯಾ ಕನ್ನಡ)

English summary
Golden Star Ganesh's upcoming movie 'Auto Raja' launched on 22nd August 2012. Kichcha Sudeep clapped for this movie. Director 'Kalla Sulla Malla' fame Udaya Prakash. 'Modala Sala' and 'Shiloo' movie fame Bhama is pair for Ganesh. Producers are Girish Naik and MD Vishwa. 
 
Please Wait while comments are loading...