ಗಣೇಶ್ ಗೆ ಸಿಕ್ಕ 'ದಿ ಬೆಸ್ಟ್' ಉಡುಗೊರೆಯೇ ಚಾರಿತ್ರ್ಯ 'ಚಮಕ್' ಡೈಲಾಗ್.!

By Harshitha

ಗೋಲ್ಡನ್ ಸ್ಟಾರ್ ಗಣೇಶ್ ರವರ ಈ ವರ್ಷದ ಹುಟ್ಟುಹಬ್ಬದಂದು ಅವರಿಗೆ ಒಂದು ವಿಶೇಷ ಉಡುಗೊರೆ ಸಿಕ್ಕಿತ್ತು. ಅದು ಅವರ ಪುತ್ರಿ ಚಾರಿತ್ರ್ಯ ಕಡೆಯಿಂದ.

ಅಪ್ಪನ ಜನ್ಮದಿನದಂದು 'ಉದಯರವಿ ಬಂದನು...' ಪದ್ಯವನ್ನು ಹೇಳಿ 'ಅಪ್ಪ... ಹುಟ್ಟುಹಬ್ಬದ ಶುಭಾಶಯಗಳು..' ಎಂದು ಮುದ್ದು ಮಗಳು ಚಾರಿತ್ರ್ಯ ವಿಶ್ ಮಾಡಿದ್ದರು. ಅಪ್ಪ ಗಣೇಶ್ ಪಾಲಿಗೆ ಇದೇ 'ದಿ ಬೆಸ್ಟ್ ಗಿಫ್ಟ್' ಆಗಿತ್ತು.

ಅಂದು ಚಾರಿತ್ರ್ಯ ಬಾಯಿಂದ ಬಂದ 'ಉದಯ ರವಿ ಬಂದನು...' ಪದ್ಯ ಈಗ 'ಚಮಕ್' ಚಿತ್ರದ ಡೈಲಾಗ್ ಆಗಿದೆ.

ನಿಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ, 'ಚಮಕ್' ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮುದ್ದು ಪುಟಾಣಿ ಚಾರಿತ್ರ್ಯ ಮಿಂಚಲಿದ್ದಾಳೆ. 'ಚಮಕ್'ಗಾಗಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಚಾರಿತ್ರ್ಯ, ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರ ನಿರ್ವಹಿಸುತ್ತಿದ್ದಾಳೆ.

Ganesh daughter Charitriya faces camera for the first time for 'Chamak'

'ಚಮಕ್' ಚಿತ್ರದಲ್ಲಿನ ಚಾರಿತ್ರ್ಯ ಅಭಿನಯದ ಭಾಗದ ಚಿತ್ರೀಕರಣ ನಡೆದಿದ್ದು, ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಮುಂದೆ ಚಾರಿತ್ರ್ಯ ಹೇಳಿದ ಡೈಲಾಗ್ 'ಉದಯ ರವಿ ಬಂದನು...'

ಹೌದು, 'ಉದಯ ರವಿ ಬಂದನು...' ಪದ್ಯ ಹೇಳುತ್ತಲೇ ಚಾರಿತ್ರ್ಯ ಮೆಟ್ಟಲಿನಿಂದ ಇಳಿದು ಬರುವ 'ಚಮಕ್' ಚಿತ್ರದ ದೃಶ್ಯದ ಚಿತ್ರೀಕರಣ ನಡೆದಿದ್ದು, ಅದನ್ನ ತಂದೆ ಗಣೇಶ್ ಟ್ವೀಟ್ ಮಾಡಿದ್ದಾರೆ.

ಮಗಳ ಮೊದಲ ಡೈಲಾಗ್ ಕೇಳಿ ತಂದೆ ಗಣೇಶ್ ಅಂತೂ ಫುಲ್ ಖುಷ್ ಅಗಿದ್ದಾರೆ. ಅಂದ್ಹಾಗೆ, 'ಚಮಕ್' ಚಿತ್ರದಲ್ಲಿ ಗಣೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿ. ಚಿತ್ರಕ್ಕೆ 'ಸಿಂಪಲ್' ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Watch Video: Ganesh daughter Charitriya faces camera for the first time for 'Chamak'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X