»   » ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಸಿಕ್ಕ 'ದಿ ಬೆಸ್ಟ್ ಗಿಫ್ಟ್' ಇದೇ.!

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಸಿಕ್ಕ 'ದಿ ಬೆಸ್ಟ್ ಗಿಫ್ಟ್' ಇದೇ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಿನ್ನೆಯಷ್ಟೇ (ಜುಲೈ 2) ತಮ್ಮ ಹುಟ್ಟುಹಬ್ಬವನ್ನ ಭರ್ಜರಿಯಾಗಿ ಆಚರಿಸಿಕೊಂಡರು. ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡ 'ಮಳೆ ಹುಡುಗ' ಗಣೇಶ್ ರವರಿಗೆ ನಿನ್ನೆ ಸಿಕ್ಕ 'ದಿ ಬೆಸ್ಟ್ ಗಿಫ್ಟ್' ಯಾವುದು ಗೊತ್ತಾ.?

'ದಿ ಬೆಸ್ಟ್ ಗಿಫ್ಟ್' ಯಾವುದು ಅಂತ ಹೇಳುವ ಮುನ್ನ, ಅಂತಹ ಗಿಫ್ಟ್ ಕೊಟ್ಟವರು ಯಾರು ಎಂಬುದನ್ನ ಮೊದಲು ತಿಳಿದುಕೊಳ್ಳಿ....

Ganesh gets 'Best Gift' from his Daughter on his Birthday

ಗಣೇಶ್ ರವರ ಹುಟ್ಟುಹಬ್ಬದಂದು ಅತ್ಯುತ್ತಮ ಉಡುಗೊರೆ ನೀಡಿದವರು ಬೇರಾರೂ ಅಲ್ಲ, ಗಣೇಶ್ ರವರ ಸುಪುತ್ರಿ ಚಾರಿತ್ರ್ಯ.

ಪತಿ ಗಣೇಶ್ ಹುಟ್ಟುಹಬ್ಬಕ್ಕಾಗಿ ಪತ್ನಿ ಶಿಲ್ಪಾ ಮಾಡಿರುವ ಕೆಲಸ ಇದು.!

ಹೌದು, ಅಪ್ಪನ ಜನ್ಮದಿನದಂದು 'ಉದಯರವಿ ಬಂದನು...' ಪದ್ಯವನ್ನು ಹೇಳಿ 'ಅಪ್ಪ... ಹುಟ್ಟುಹಬ್ಬದ ಶುಭಾಶಯಗಳು..' ಎಂದು ಮುದ್ದು ಮಗಳು ಚಾರಿತ್ರ್ಯ ವಿಶ್ ಮಾಡಿದ್ದಾರೆ. ಅಪ್ಪ ಗಣೇಶ್ ಪಾಲಿಗೆ ಇದೇ 'ದಿ ಬೆಸ್ಟ್ ಗಿಫ್ಟ್'..!

Ganesh gets 'Best Gift' from his Daughter on his Birthday

ಪುತ್ರಿ ಚಾರಿತ್ರ್ಯ ಪದ್ಯ ಹೇಳಿ ವಿಶ್ ಮಾಡಿರುವ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಗಣೇಶ್, ''ನನ್ನ ಹುಟ್ಟುಹಬ್ಬಕ್ಕೆ ಸಿಕ್ಕ ದಿ ಬೆಸ್ಟ್ ಉಡುಗೊರೆ'' ಎಂದು ಟ್ವೀಟ್ ಮಾಡಿದ್ದಾರೆ.

2008ರಲ್ಲಿ ಶಿಲ್ಪಾ ಗಣೇಶ್ ರವರನ್ನ ಪ್ರೀತಿಸಿ ಮದುವೆ ಆದ ಗಣೇಶ್ ಗೆ ಚಾರಿತ್ರ್ಯ ಹಾಗೂ ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

English summary
Watch Video: Kannada Actor Ganesh gets 'Best Gift' from his Daughter Charitriya on his Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada