For Quick Alerts
  ALLOW NOTIFICATIONS  
  For Daily Alerts

  ಪತ್ನಿಗೆ ಟಿಕೆಟ್ ಸಿಗದಿದ್ದರು ಬಿಜೆಪಿ ಪರ ಪ್ರಚಾರ ಮಾಡಿದ ಗೋಲ್ಡನ್ ಸ್ಟಾರ್

  By Pavithra
  |

  ಶಿಲ್ಪಾ ಗಣೇಶ್ ಈ ಬಾರಿ ಆರ್ ಆರ್ ನಗರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಆದರೆ ಲೆಕ್ಕಾಚಾರವೆಲ್ಲಾ ತಳೆಕೆಳಗಾಗಿ ಟಿಕೆಟ್ ಶಿಲ್ಪಾ ಗಣೇಶ್ ಅವರ ಕೈ ತಪ್ಪಿ ಹೋಯಿತು. ಇದರಿಂದ ಬೇಸರಗೊಂಡ ಶಿಲ್ಪಾ ಗಣೇಶ್ ಪಕ್ಷದ ಪರವಾಗಿ ಆಗಲಿ ಚುನಾವಣೆಯ ಪರವಾಗಲಿ ಆಗಲಿ ಮಾತನಾಡದೇ ಸುಮ್ಮನಾದರು.

  ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಯಾವುದೇ ಬೇಸರವಿಲ್ಲದೆ ತಮ್ಮ ಆಪ್ತರ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆರ್ ಅಶೋಕ್ ಗಣೇಶ್ ಅವರಿಗೆ ಆಪ್ತರು. ಈಗಾಗಲೇ ಗೊಲ್ಡನ್ ಸ್ಟಾರ್ ಅವರ ಸಾಕಷ್ಟು ಸಿನಿಮಾ ಕಾರ್ಯಕ್ರಮದಲ್ಲಿ ಆರ್ ಅಶೋಕ್ ಉಪಸ್ಥಿತಿ ಕಂಡು ಬಂದಿದೆ. ಇದೇ ಸ್ನೇಹದಲ್ಲಿ ಗಣೇಶ್ ರಸ್ತೆಗಿಳಿದು ಚುನಾವಣಾ ಪ್ರಚಾರ ಮಾಡಿದ್ದಾರೆ.

  ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ

  ಪದ್ಮನಾಬ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಅಶೋಕ್ ಅವರ ಪರವಾಗಿ ಜನರ ಬಳಿ ಮತಯಾಚನೆ ಮಾಡಿದ್ದಾರೆ. ಹೆಂಡತಿಗೆ ಟಿಕೆಟ್ ಸಿಕ್ಕರೆ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದಿದ್ದ ಗಣೇಶ್, ಟಿಕೆಟ್ ಕೈ ತಪ್ಪಿದ ನಂತರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಇನ್ನು ಗಣೇಶ್ ಜೊತೆಯಲ್ಲಿ ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ನಮಿತಾ ರಾವ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದು ವಿಶೇಷವಾಗಿತ್ತು. ಒಟ್ಟಾರೆ ರಾಜಕೀಯ ಪಕ್ಷದವರು ಕೊನೆಕ್ಷಣದ ವರೆಗೂ ಸ್ಟಾರ್ ಗಳನ್ನ ಕರೆಸಿ ತಮ್ಮ ಪರವಗಿ ಪ್ರಚಾರ ಮಾಡಿಸುತ್ತಿದ್ದಾರೆ.

  English summary
  Kannada actor Ganesh has been campaigning for Ganesh and R Ashok. By road show in Padmanabha Ganesh has been Election campaign

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X