»   » ಶರಣ್ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್.!

ಶರಣ್ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್.!

Posted By:
Subscribe to Filmibeat Kannada

ನಟ ಶರಣ್ ಅಭಿನಯಿಸುತ್ತಿರುವ 'ಸತ್ಯ ಹರಿಶ್ಚಂದ್ರ' ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಈಗ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಮಧ್ಯೆ ಸಂಪ್ರದಾಯದಂತೆ ಚಿತ್ರದ ಆಡಿಯೋ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದೆ ಚಿತ್ರತಂಡ.

ಶರಣ್ ಅವರ ಈ ಚಿತ್ರಕ್ಕೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್ ಕೊಡುತ್ತಿದ್ದಾರೆ. ಹೌದು, ಗಣೇಶ್ ಅವರು ಶರಣ್ ಚಿತ್ರಕ್ಕೆ ಸಾಥ್ ಎಂದಾಕ್ಷಣ, ಚಿತ್ರದಲ್ಲೇನಾದರೂ ಅಭಿನಯಿಸುತ್ತಿದ್ದಾರ ಎಂದು ಯೋಚಿಸಬೇಡಿ. 'ಸತ್ಯ ಹರಿಶ್ಚಂದ್ರ' ಚಿತ್ರದ ಆಡಿಯೋ ಬಿಡುಗಡೆಯನ್ನ ಗಣೇಶ್ ಮಾಡಲಿದ್ದಾರೆ. ಗೌರಿ ಗಣೇಶ್ ಹಬ್ಬದ ಪ್ರಯುಕ್ತ 'ಸತ್ಯ ಹರಿಶ್ಚಂದ್ರ' ಚಿತ್ರದ ಹಾಡುಗಳು ಆಗಸ್ಟ್ 24 ರಂದು ಬಿಡುಗಡೆಯಾಗುತ್ತಿದೆ.

ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡು ಮತ್ತೆ ಬಳಕೆ!

Ganesh to Release audio of Satya harishchandra

'ಸತ್ಯ ಹರಿಶ್ಚಂದ್ರ' ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು, ಶರಣ್ ಗೆ ಜೋಡಿಯಾಗಿ ಸಂಚಿತಾ ಪಡುಕೊಣೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಭಾವನ ರಾವ್, ಸಂಚಾರಿ ವಿಜಯ್ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Ganesh to Release audio of Satya harishchandra
Nataraja Service - Public Response | First Day First Show- Filmibeat Kannada

ಇನ್ನು ಈ ಚಿತ್ರವನ್ನ ಕೆ.ಮಂಜು ನಿರ್ಮಾಣ ಮಾಡುತ್ತಿದ್ದು, ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ, ಆಡಿಯೋ ಬಿಡುಗಡೆ ಮಾಡಲಿರುವ ಹರಿಶ್ಚಂದ್ರ ಆದಷ್ಟೂ ಬೇಗ ತೆರೆಗೆ ಬರಲಿದೆ.

English summary
Golden Star Ganesh to Release audio of sharan starrer 'Satya harishchandra' Movie. the Movie directed by dayal padmanabhan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada