Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂಗಾರು ಮಳೆ ಸಿನಿಮಾಕ್ಕೆ ಮೊದಲ ಆಯ್ಕೆ ಗಣೇಶ್ ಆಗಿರಲಿಲ್ಲ! ಮತ್ಯಾರು?
ಮುಂಗಾರು ಮಳೆ ಕನ್ನಡ ಸಿನಿ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮುಂಗಾರು ಮಳೆ ನಂತರ ಸಿನಿಮಾ ಮೇಕಿಂಗ್ ಹಾಗೂ ಕತೆ, ಹಾಡುಗಳ ವಿಭಾಗದಲ್ಲಿ ಗಮನಾರ್ಹ ಬದಲಾವಣೆ ಆಗಿದ್ದನ್ನು ಗಮನಿಸಬಹುದು.
Recommended Video
'ಮುಂಗಾರು ಮಳೆ' ಹಲವು ನಟ, ತಂತ್ರಜ್ಞರಿಗೆ ಹೊಸ ಜೀವನ ಕೊಟ್ಟ ಸಿನಿಮಾ. ಅದರಲ್ಲಿಯೂ ಗಣೇಶ್ ಅಂತೂ ಸ್ಟಾರ್ ಆಗಿ ಹೊರಹೊಮ್ಮಿದ ಸಿನಿಮಾ 'ಮುಂಗಾರು ಮಳೆ'.
ಮೂರು
ನಾಯಕರು
ಬೇಡವೆಂದಿದ್ದ
'ಹುಚ್ಚ'
ಸಿನಿಮಾ
ಸುದೀಪ್
ಜೀವನ
ಬದಲಾಯಿಸಿತು!
ವಿಚಿತ್ರವೆಂದರೆ ಮುಂಗಾರು ಮಳೆ ಸಿನಿಮಾದ ನಾಯಕ ಪಾತ್ರಕ್ಕೆ ಗಣೇಶ್ ಮೊದಲ ಆಯ್ಕೆ ಆಗಿರಲಿಲ್ಲ. ಬದಲಿಗೆ ಅದಾಗಲೇ ಹಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಪ್ರತಿಭಾವಂತ ಹೀರೋ ನಾಯಕ ಆಗಬೇಕಿತ್ತು. ಆದರೆ ಅವರ ದುರಾದೃಷ್ಟವೋ, ಗಣೇಶ್ ಅದೃಷ್ಟವೋ ಆ ಪಾತ್ರ ಗಣೇಶ್ ಗೆ ಒಲಿಯಿತು. ಆ ನಂತರದ್ದು ಇತಿಹಾಸ.

ಮುಂಗಾರು ಮಳೆ ಸಿನಿಮಾಕ್ಕೆ ಮೊದಲ ಆಯ್ಕೆ ವಿಜಯ ರಾಘವೇಂದ್ರ
ಮುಂಗಾರು ಮಳೆ ಸಿನಿಮಾದ ನಾಯಕ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ನಟ ವಿಜಯ ರಾಘವೇಂದ್ರ ಅಂತೆ. ಈ ವಿಷಯವನ್ನು ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವಕಾಶ ವಿಜಯರಾಘವೇಂದ್ರಗೆ ಸಿಗಲಿಲ್ಲ.

ಬ್ಯುಸಿ ಇದ್ದೇನೆ ಎಂದುಕೊಂಡು ಕತೆ ಹೇಳಲಿಲ್ಲ: ವಿಜಯ ರಾಘವೇಂದ್ರ
ಅಕುಲ್ ಬಾಲಾಜಿ ನಡೆಸಿಕೊಡುವ ಟಾಕ್ ಶೋ ನಲ್ಲಿ ಮಾತನಾಡಿದ್ದ ವಿಜಯರಾಘವೇಂದ್ರ, 'ಮುಂಗಾರು ಮಳೆ ಸಿನಿಮಾದ ಕತೆ ನನಗೆ ಹೇಳಬೇಕು ಎಂದುಕೊಂಡಿದ್ದರಂತೆ, ಆದರೆ ನಾನು ಬ್ಯುಸಿ ಎದ್ದುಕೊಂಡು ನನಗೆ ಕತೆ ಹೇಳಲಿಲ್ಲವಂತೆ' ಸಿನಿಮಾ ಅವಕಾಶ ತಪ್ಪಿದ್ದರ ಬಗ್ಗೆ ಹೇಳಿದ್ದಾರೆ ವಿಜಯ ರಾಘವೇಂದ್ರ.

ಕಲ್ಲರಳಿ ಹೂವಾಗಿ ಸಿನಿಮಾ ಚಿತ್ರೀಕರಣದಲ್ಲಿದ್ದೆ: ವಿಜಯ ರಾಘವೇಂದ್ರ
ಆಗ ನಾನು ಕಲ್ಲರಳಿ ಹೂವಾಗಿ ಸಿನಿಮಾ ಮಾಡುತ್ತಿದ್ದೆ. ನನಗೆ ಯೋಗರಾಜ ಭಟ್ಟರು ಕತೆ ಹೇಳಬೇಕು ಎಂದುಕೊಂಡಿದ್ದರಂತೆ. ಆದರೆ ನಾನು ಬ್ಯುಸಿ ಇರುತ್ತೇನೆ. ನಾನು ಸಿನಿಮಾ ಒಪ್ಪಿಕೊಳ್ಳುತ್ತೇನೋ ಇಲ್ಲವೋ ಎಂದುಕೊಂಡು ನನಗೆ ಕತೆ ಹೇಳಲಿಲ್ಲವಂತೆ ಎಂದು ವಿಜಯ ರಾಘವೇಂದ್ರ ಘಟನೆಯನ್ನು ವಿವರಿಸಿದ್ದಾರೆ.

ಮಣಿ ಸಿನಿಮಾದಲ್ಲಿ ಶ್ರೀಮುರಳಿ ನಟಿಸಬೇಕಿತ್ತು: ವಿಜಯ ರಾಘವೇಂದ್ರ
ನನಗೆ ಯೋಗರಾಜ್ ಭಟ್ಟರು ಮೊದಲೇ ಪರಿಚಯ ಇದ್ದರು. ಅವರು ನಿರ್ದೇಶಿಸಿದ್ದ ಮೊದಲ ಸಿನಿಮಾ 'ಮಣಿ' ಯಲ್ಲಿ ನನ್ನ ಸಹೋದರ ಶ್ರೀಮುರಳಿ ನಟಿಸಬೇಕಿತ್ತು. ಆದರೆ ಅದೂ ಸಹ ಆಗ ಕೈತಪ್ಪಿತು ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ವಿಜಯ ರಾಘವೇಂದ್ರ.

ನಾನು ಯಾವ ಸಿನಿಮಾವನ್ನು ಬೇಡ ಎನ್ನುವುದಿಲ್ಲ: ವಿಜಯ ರಾಘವೇಂದ್ರ
ನಾನು ಯಾವ ಸಿನಿಮಾವನ್ನೂ ಸಹ ಬೇಡ ಎನ್ನುವುದಿಲ್ಲ. ನನ್ನ ಬಳಿಗೆ ಬಹುತೇಕ ಹೊಸಬರೇ ಬರುತ್ತಾರೆ. ಹೊಸ ತಂಡದೊಂದಿಗೆ ಕೆಲಸ ಮಾಡಲು ನನಗೂ ಇಷ್ಟವೇ. ಹೊಸಬರಿಗೆ ಉತ್ಸಾಹ ಇರುತ್ತದೆ. ಅವರಿಗೆ ದೊರಕುವ ಯಶಸ್ಸಿನ ತುಸು ಭಾಗ ನನಗೂ ಸಿಗಲಿ ಎಂಬುದು ನನ್ನ ಆಸೆ ಎಂದಿದ್ದಾರೆ ವಿಜಯ ರಾಘವೇಂದ್ರ.