twitter
    For Quick Alerts
    ALLOW NOTIFICATIONS  
    For Daily Alerts

    ಲಾರ್ಡ್ ಗಣೇಶನ ಜೊತೆ 'ಕೋಟ್ಯಾಧಿಪತಿ' ಅಪ್ಪು: 9 ದಿನ ಅಭಿಮಾನಿಗಳ ಸಂಭ್ರಮ!

    |

    ವರುಣನ ಆರ್ಭಟದ ನಡುವೆಯೂ ಗಣೇಶ ಹಬ್ಬದ ತಯಾರಿ ಜೋರಾಗಿದೆ. ಕಳೆದ ಎರಡು-ಮೂರು ವರ್ಷಗಳಿಂದ ಕೊರೊನಾ ಕಾರಣಕ್ಕೆ ಗಣೇಶ ಚತುರ್ಥಿ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಿರಲಿಲ್ಲ. ಈ ಬಾರಿಗ ಹಬ್ಬವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತ ಅಪ್ಪು ಅಭಿಮಾನಿಗಳೂ ಕೂಡ ಗಣೇಶನೊಂದಿಗೆ ಪುನೀತ್ ಮೂರ್ತಿ ಇಟ್ಟು ಪೂಜೆ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.

    ರಾಜ್ಯ ಮೂಲೆ ಮೂಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮೂರ್ತಿಯನ್ನು ಮಾಡುತ್ತಿದೆ. ವಿಧವಿಧದ ಮೂರ್ತಿಯನ್ನು ಮಾಡಿ ಇಟ್ಟುಕೊಂಡಿದ್ದಾರೆ. ಈ ಮೂಲಕ ಗಣೇಶ ಹಬ್ಬವನ್ನು ಅವರ ನೆನಪಿನಲ್ಲಿಯೇ ಆಚರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಇಲ್ಲೊಬ್ಬ ಅಭಿಮಾನಿ ಪುನೀತ್ ರಾಜ್‌ಕುಮಾರ್ ಅವರ ವಿಶಿಷ್ಟ ಮೂರ್ತಿಯನ್ನು ಸಿದ್ಧಪಡಿಸಿದ್ದು, ಗಣೇಶ ಜೊತೆ ಅಪ್ಪು ಮೂರ್ತಿ ಇಟ್ಟು ಪೂಜೆ ಮಾಡುವುದಕ್ಕೆ ಮುಂದಾಗಿದ್ದಾರೆ.

    'ಪರಮಾತ್ಮ'ನ ಕರ್ಕೊಂಡು ಬರ್ತಿದ್ದಾನೆ ಗಣೇಶ: ಅಪ್ಪು ಗಣೇಶ ಮೂರ್ತಿಗಳಿಗೆ ಸಖತ್ ಡಿಮ್ಯಾಂಡ್!'ಪರಮಾತ್ಮ'ನ ಕರ್ಕೊಂಡು ಬರ್ತಿದ್ದಾನೆ ಗಣೇಶ: ಅಪ್ಪು ಗಣೇಶ ಮೂರ್ತಿಗಳಿಗೆ ಸಖತ್ ಡಿಮ್ಯಾಂಡ್!

    ಕಾರವಾರದಲ್ಲಿ ಎದ್ದು ನಿಂತ 'ಕೋಟ್ಯಾಧಿಪತಿ' ಅಪ್ಪು!

    ಕಾರವಾರದಲ್ಲಿ ಎದ್ದು ನಿಂತ 'ಕೋಟ್ಯಾಧಿಪತಿ' ಅಪ್ಪು!

    ಕಾರವಾರದ ಅಂಕೋಲಾದಲ್ಲಿರುವ ಪುನೀತ್ ರಾಜ್‌ಕುಮಾರ್ ಅಭಿಮಾನಿ ಈ ಬಾರಿ ವಿಶಿಷ್ಠವಾಗಿ ಗಣೇಶ ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳ ಪರಿಶ್ರಮದಿಂದ ಪುನೀತ್ ನಡೆಸಿಕೊಡುತ್ತಿದ್ದ ಕೋಟ್ಯಾಧಿಪತಿ ಶೈಲಿಯಲ್ಲಿ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಗಣೇಶ ಮೂರ್ತಿಯೊಂದಿಗೆ ಅಪ್ಪು ಕೋಟ್ಯಾಧಿಪತಿ ಗೆಟಪ್‌ನಲ್ಲಿ ಮೂರ್ತಿಯನ್ನು ರೆಡಿ ಮಾಡಿದ್ದಾರೆ. ಗಣೇಶನಿಗೆ ಪೂಜೆ ಪುನಸ್ಕಾರಗಳನ್ನು ಮಾಡಿದಂತೆ ಅಪ್ಪು ಮೂರ್ತಿಗೂ ಪೂಜೆ ನಡೆಯಲಿದೆ.

    ಬಾನಿಗೆ ಹಾರಲು ಸಿದ್ಧ ಮಿನುಗುತಾರೆ ಪುನೀತ್ ಉಪಗ್ರಹ: ಶ್ರೀಹರಿಕೋಟಾಕ್ಕೆ 1 ಸಾವಿರ ಮಕ್ಕಳು!ಬಾನಿಗೆ ಹಾರಲು ಸಿದ್ಧ ಮಿನುಗುತಾರೆ ಪುನೀತ್ ಉಪಗ್ರಹ: ಶ್ರೀಹರಿಕೋಟಾಕ್ಕೆ 1 ಸಾವಿರ ಮಕ್ಕಳು!

    ಅಪ್ಪು ಮೂರ್ತಿಗೆ 9 ದಿನ ಪೂಜೆ

    ಅಪ್ಪು ಮೂರ್ತಿಗೆ 9 ದಿನ ಪೂಜೆ

    ಕಾರವಾರದ ಅಂಕೋದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಸ್ನೇಹಿತರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗಣೇಶನ ಮೂರ್ತಿ ಜೊತೆ ಪುನೀತ್‌ ಮೂರ್ತಿಯನ್ನು ನಿರ್ಮಾಣ ಮಾಡಿ 9 ದಿನ ನಿರಂತರವಾಗಿ ಪೂಜೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅಲ್ಲದೆ 9ನೇ ದಿನ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದಂತೆ ಪುನೀತ್ ರಾಜ್‌ಕುಮಾರ್ ಪೂರ್ತಿಯನ್ನೂ ವಿಸರ್ಜನೆ ಮಾಡಲಿದ್ದಾರೆ. ಇವರೆಲ್ಲರೂ ಅಪ್ಪು ಅಭಿಮಾನಿಯಾಗಿದ್ದರಿಂದ ಗಣೇಶನ ಹಬ್ಬದಲ್ಲಿ ಅಪ್ಪುನೂ ಇರಬೇಕೆಂದು ಬಯಸಿದ್ದಾರೆ.

    ಅಪ್ಪು ಮೂರ್ತಿ ಮಾಡಿದ್ದು ಯಾರು?

    ಅಪ್ಪು ಮೂರ್ತಿ ಮಾಡಿದ್ದು ಯಾರು?

    ಅಂದ್ಹಾಗೆ, ಪುನೀತ್ ರಾಜ್‌ಕುಮಾರ್ 'ಕೋಟ್ಯಾಧಿಪತಿ' ಮೂರ್ತಿಯನ್ನು ಸೃಷ್ಟಿಸಿದ ಕಲಾವಿದನ ಹೆಸರು ದಿನೇಶ್ ಮೇತ್ರಿ. ಇವರು ಕೂಡ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ. ಬಹಳ ದಿನಗಳಿಂದ ಅವರದ್ದೊಂದು ಮೂರ್ತಿ ಮಾಡಬೇಕು ಅನ್ನೋ ಹಂಬಲವಿತ್ತು. ಅದನ್ನು ಗಣೇಶನ ಹಬ್ಬದ ಈ ಸಂದರ್ಭದಲ್ಲಿ ಈಡೇರಿಸಿಕೊಂಡಿದ್ದಾರೆ. ಇವರ ಕುಟುಂಬ ಮೂಲತ: ಕಲಾವಿದರು. ಪಾರಂಪರಿಕವಾಗಿ ಮೂರ್ತಿ ಮಾಡುವ ಈ ಕಲೆ ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರತಿ ಗಣೇಶ ಮೂರ್ತಿ ಮಾಡುವುದರ ಜೊತೆಗೆ ಈ ಬಾರಿ ಪುನೀತ್ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ.

    ಗಣೇಶನ ಜೊತೆ ಅಪ್ಪು ಮೂರ್ತಿ

    ಗಣೇಶನ ಜೊತೆ ಅಪ್ಪು ಮೂರ್ತಿ

    ಕರ್ನಾಟಕದ ನಾನಾ ಭಾಗಗಳಲ್ಲಿ ಗಣೇಶನ ಹಬ್ಬದಲ್ಲಿ ಪುನೀತ್ ರಾಜ್‌ಕುಮಾರ್ ಮೂರ್ತಿ ಸಿದ್ಧವಾಗುತ್ತಿವೆ. ಗಣೇಶನ ಪಕ್ಕ ಕುಳಿದ ಅಪ್ಪು, ಗಣೇಶನ ಆಶೀರ್ವಾದ ಪಡೆಯುತ್ತಿರುವ ಅಪ್ಪು, ಅಪ್ಪು ಕೈಯಲ್ಲಿ ಗಣೇಶ ಮೂರ್ತಿ, ಅಪ್ಪು ಗಲ್ಲ ಹಿಡಿದ ಗಣೇಶ, ಅಪ್ಪುಗೆ ಮೋದಕ ತಿನ್ನಿಸುತ್ತಿರುವ ಗಣೇಶ. ಹೀಗೆ ಮೂರ್ತಿ ತಯಾರಕರು ತಮ್ಮದೇ ವಿಶಿಷ್ಠ ಕಲ್ಪನೆಯಲ್ಲಿ ಬಗೆ ಬಗೆಯ ಗಣೇಶ ಹಾಗೂ ಅಪ್ಪು ಮೂರ್ತಿಗಳನ್ನು ತಯಾರಿಸಿದ್ದಾರೆ.

    English summary
    Ganesha Festival Special: Appu Fan Made Kotyadipathi Fame Puneeth Statue, Know More.
    Monday, August 29, 2022, 23:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X