»   » ಕನಸುಗಳ ಬೆನ್ನೇರಿ ಹೊರಟ ಟಿವಿ ನಿರೂಪಕ ಗೌರೀಶ್

ಕನಸುಗಳ ಬೆನ್ನೇರಿ ಹೊರಟ ಟಿವಿ ನಿರೂಪಕ ಗೌರೀಶ್

Posted By:
Subscribe to Filmibeat Kannada

ಜೀವನದುದ್ದಕ್ಕೂ ಬರೀ ಕನಸು ಮಾತ್ರ ಕಾಣುವುದು ಒಂದು ಕಡೆಯಾದರೆ, ಕನಸುಗಳ ಬೆನ್ನೇರಿ ಹೊರಟು ನನಸು ಮಾಡುವುತ್ತ ಸಾಗುವುದು ಇನ್ನೊಂದೆಡೆ. ಇವೆರಡೂ ಮಾನವ ಸಹಜ ಧರ್ಮ.

ಹತ್ತು ಹಲವಾರು ಕನಸುಗಳನ್ನು ಹೊತ್ತು ರಾಜಧಾನಿಗೆ ಆಗಮಿಸಿ, ಅಲ್ಲಿಂದ ಹೈದರಾಬಾದಿಗೆ ತೆರಳಿ, ಈಟಿವಿ ಕನ್ನಡ, ಟಿವಿ9, ಸುವರ್ಣ ವಾಹಿನಿಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಪತ್ರಕರ್ತ ಮತ್ತು ಟಿವಿ ನಿರೂಪಕ ಗೌರೀಶ್ ಅಕ್ಕಿ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

ಗೌರೀಶ್ ಅಕ್ಕಿ ಈಗ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ. ಚಿತ್ರದ ಹೆಸರು 'ಸಿನಿಮಾ ಮೈ ಡಾರ್ಲಿಂಗ್. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡಾ ಗೌರೀಶ್ ಅವರದ್ದೇ. ಗೌರೀಶ್ ಕನಸಿನ ಈ ಪ್ರಾಜೆಕ್ಟಿಗೆ ಹಣ ಹೂಡುತ್ತಿರುವವರು ಅಂದರೆ ಚಿತ್ರಕ್ಕೆ ನಿರ್ಮಾಪಕರು ಮುರಳೀಧರ್ ಹಾಲಪ್ಪ ಮತ್ತು ಶಶಿಕುಮಾರ್.

ಚಿತ್ರಕ್ಕೆ ಮೂವರು ನಾಯಕಿಯರು. ನಾಯಕಿಯ ಆಯ್ಕೆಗಾಗಿ ನಗರದ ಗರುಡ ಮಾಲ್ ನಲ್ಲಿ ಇತ್ತೀಚೆಗೆ ಆಡಿಷನ್ ನಡೆದಿತ್ತು. ರಕ್ಷಿತ್ ಶೆಟ್ಟಿ, ಸತೀಶ್ ನೀನಾಸಂ, ಮೇಘನಾ ಗಾಂವ್ಕರ್ ಮತ್ತು ಯಜ್ಞಾ ಶೆಟ್ಟಿ ತೀರ್ಪುಗಾರರಾಗಿದ್ದರು.

'ಒನ್ ಇಂಡಿಯಾ' ಜೊತೆ ಮಾತನಾಡುತ್ತಿದ್ದ ಗೌರೀಶ್ ಹೇಳಿದ್ದಿಷ್ಟು, ಚಿತ್ರ ನಿರ್ದೇಶಿಸ ಬೇಕೆನ್ನುವುದು ನನ್ನ ಬಹಳ ದಿನದ ಕನಸು. ಈ ಕನಸನ್ನು ಹೊತ್ತು ಬೆಂಗಳೂರಿಗೆ ಬಂದೆ. ಆರಂಭದ ದಿನಗಳಲ್ಲಿ ಟಿವಿ ನಿರೂಪಕನಾಗಿ ಕೆಲಸ ಮಾಡಿದೆ. ನಿರ್ದೇಶಕನಾಗ ಬೇಕೆನ್ನುವ ನನ್ನ ಕನಸು ಈಗ ಕಾರ್ಯರೂಪಕ್ಕೆ ಬರುತ್ತಿದೆ.

ಆಡಿಷನ್ ನಲ್ಲಿ ನಡೆದ ಇಂಟರೆಸ್ಟಿಂಗ್ ಸುದ್ದಿ, ಸ್ಲೈಡಿನಲ್ಲಿ...

ಗರುಡಮಾಲ್ ನಲ್ಲಿ ನಡೆದ ಆಡಿಷನ್

ಈ ಆಡಿಷನ್ ಪ್ರೋಗ್ರಾಂನಲ್ಲಿ 40 ರಿಂದ 45 ಹುಡುಗಿಯರು ಭಾಗವಹಿಸಿದ್ದರು. ಎಲ್ಲಾ ಹುಡುಗಿಯರು ಕಲಾಜಗತ್ತಿನಲ್ಲಿ ಸಾಧನೆ ಮಾಡಬೇಕೆನ್ನುವ ಕನಸು ಹೊತ್ತು ಬಂದಿದ್ದರು. ಅವರಲ್ಲಿದ್ದ ಲವಲವಿಕೆ ಮೆಚ್ಚುವಂತದ್ದು.

ನಾಯಕಿ ಇನ್ನೂ ಫೈನಲ್ ಆಗಿಲ್ಲ

ಆಡಿಷನಿಗೆ ಕಾರಣಾಂತರದಿಂದ ಬರಲಾಗದವರು ನಮ್ಮ ಕಚೇರಿಗೆ ಬರಲಿದ್ದಾರೆ. ಗರುಡಮಾಲ್ ನಲ್ಲಿ ಭಾಗವಹಿಸಿದ್ದವರಲ್ಲಿ ಮೂವರನ್ನು ಸಿಲೆಕ್ಟ್ ಮಾಡಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಮೂವರು ನಾಯಕಿಯರನ್ನು ಅಂತಿಮ ಗೊಳಿಸುತ್ತೇವೆ.

ಮೈಸೂರಿನ ಹುಡುಗಿ

ಆಡಿಷನ್ ನಲ್ಲಿ ಮೈಸೂರಿನ ಕಾವ್ಯಶ್ರೀ ಎನ್ನುವ ಹುಡುಗಿಯೊಬ್ಬಳು ಭಾಗವಹಿಸಿದ್ದಳು. ಅವಳು ನೋಡಲು ಅಷ್ಟೇನೂ ಸುಂದರವಾಗಿರಲಿಲ್ಲ. ಆದರೆ ಅವಳಲ್ಲಿದ್ದ ಪ್ರತಿಭೆ ಕಂಡು ಸತೀಶ್ ನೀನಾಸಂ ಬೆಚ್ಚಿಬಿದ್ದರು. ತಾನೇ, ಆಕೆಗೆ ನಟನೆಯಲ್ಲಿ ಹೆಚ್ಚಿನ ತರಬೇತಿಗಾಗಿ ಕಲಾಶಾಲೆಯೊಂದಕ್ಕೆ ಫೋನ್ ಮಾಡಿ ಹುಡುಗಿಯ ಬಗ್ಗೆ ತಿಳಿಸಿ ಅಲ್ಲಿ ಸೇರುವಂತೆ ಸಲಹೆ ನೀಡಿದರು.

ನಾಯಕರ ಆಯ್ಕೆ

ಚಿತ್ರಕ್ಕೆ ನಾಲ್ವರು ನಾಯಕರು. ನಾಯಕರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ನಾಯಕಿಯ ಆಯ್ಕೆಯ ನಂತರ ನಾಯಕರು ಮತ್ತು ನಾಯಕಿಯರ ಹೆಸರನ್ನು ಬಹಿರಂಗಗೊಳಿಸುತ್ತೇವೆ.

ಚಿತ್ರದ ಬಗ್ಗೆ

ಚಿತ್ರದ ಎರಡು ಹಾಡಿಗೆ ಯೋಗರಾಜ್ ಭಟ್ ಮತ್ತು ಗುರುಪ್ರಸಾದ್ ಅವರ ಸಾಹಿತ್ಯವಿರುತ್ತದೆ. ಸಿನಿಮಾ ಜಗತ್ತಿನಲ್ಲಿ ಸಾಧಿಸ ಬೇಕೆಂದು ಬರುವವರು ಆರಂಭದಲ್ಲಿ ಎದುರಿಸುವ ತೊಂದರೆಗಳು, ಅನುಭವಗಳನ್ನು ಆಧರಿಸಿ ಚಿತ್ರಕಥೆ ಹಣೆಯಲಾಗಿದೆ. ಚಿತ್ರಕ್ಕೆ ರಘು ದೀಕ್ಷಿತ್ ಅವರ ಸಂಗೀತವಿದೆ ಎನ್ನುತ್ತಾರೆ ಗೌರೀಶ್ ಅಕ್ಕಿ. ಆಲ್ ದಿ ಬೆಸ್ಟ್ ಗೌರೀಶ್ ಎಂಡ್ ಟೀಂ.

English summary
TV acnhor and journalist Gaurish Akki directorial new movie 'Cinema My Darling' audition for Heroines was held recently in Bangalore Gaurda Mall.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada