»   » ''ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ'' ಇಂತಿ ವಿ.ನಾಗೇಂದ್ರ ಪ್ರಸಾದ್!

''ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ'' ಇಂತಿ ವಿ.ನಾಗೇಂದ್ರ ಪ್ರಸಾದ್!

Posted By: Naveen
Subscribe to Filmibeat Kannada

ಕನ್ನಡ ಸಿನಿಮಾಗಳ ಇಂದಿನ ಗತಿ ನೋಡಿದ್ರೆ ಎಂಥವರಿಗೂ ಸಹ ಬೇಸರವಾಗುತ್ತೆ, ಸಿಟ್ಟು ಬರುತ್ತೆ, ಜೊತೆಗೆ ಹತಾಶ ಭಾವ ಸಹ ಮೂಡುತ್ತೆ.

'ಬಾಹುಬಲಿ-2' ಸಿನಿಮಾ ಬಂತು ಎನ್ನುವ ಕಾರಣಕ್ಕೆ ಕನ್ನಡ ನಾಡಿನಲ್ಲಿ ಕನ್ನಡದ 'ರಾಗ' ಸಿನಿಮಾವನ್ನ ಹೇಳದೆ ಕೇಳದೆ ಎತ್ತಂಗಡಿ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.

ಸದ್ಯ ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ರಾಜಮೌಳಿ, 'ಬಾಹುಬಲಿ'ಯ ಅಬ್ಬರ, ಕನ್ನಡದ 'ರಾಗ' ಸಿನಿಮಾ... ಇವೆಲ್ಲದರ ಬಗ್ಗೆ ಅರ್ಥಪೂರ್ಣವಾಗಿ ಬರೆದಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದಿರುವುದು ನಿಮಗೂ ಸರಿ ಎನ್ನಿಸಬಹುದು. ಮುಂದೆ ಓದಿ....

ನಾನು-ರಾಜಮೌಳಿ ಸಹೋದ್ಯೋಗಿಗಳು

''ಇಂದಿನ ಜನಪ್ರಿಯ ನಿರ್ದೇಶಕ ರಾಜಮೌಳಿ ಮತ್ತು ನಾನು ಒಂದು ಕಾಲದ ಸಹೋದ್ಯೋಗಿಗಳು.
ಭಾರತೀಯ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಆತನಿಗೆ ಸಲ್ಲುತ್ತದೆ'' - ವಿ.ನಾಗೇಂದ್ರ ಪ್ರಸಾದ್.

'ಬಾಹುಬಲಿ'ಯನ್ನ ವಿರೋಧಿಸುತ್ತಿಲ್ಲ

''ನನ್ನ ಈ ಬರಹದ ಉದ್ದೇಶ ಬಾಹುಬಲಿಯನ್ನು ವಿರೋಧಿಸುವುದಲ್ಲ. ಬಾಹುಬಲಿಯ ಅಸ್ತ್ರದಿಂದ ಕನ್ನಡವನ್ನು ತಿವಿಯುತ್ತಿರುವ ನಾಡದ್ರೋಹಿಗಳ ಹಾಡುಹಗಲ ಕೊಳ್ಳೆಬಾಕತನವನ್ನು ವಿರೋಧಿಸುವುದು'' - ವಿ.ನಾಗೇಂದ್ರ ಪ್ರಸಾದ್.

ಜನ ಮೆಚ್ಚಿದ ಕನ್ನಡ ಚಿತ್ರ 'ರಾಗ'

''ನಾಳೆಯಿಂದ ಇಡೀ ನಾಡಿನಲ್ಲಿ ಒಂದೇ ಒಂದು ಪ್ರದರ್ಶನಕ್ಕೂ ಅವಕಾಶವಿಲ್ಲ.!!!!!
ಕಾರಣ ಬಾಹುಬಲಿ. ಎಲ್ಲ ಚಿತ್ರಮಂದಿರಗಳನ್ನೂ ಆಕ್ರಮಿಸಿದ್ದಾನೆ'' - ವಿ.ನಾಗೇಂದ್ರ ಪ್ರಸಾದ್.

ಎಲ್ಲಾ ವ್ಯಾಪರಕ್ಕಾಗಿ

''ಪ್ರದರ್ಶಕರು ಮತ್ತು ವಿತರಕರ ವ್ಯಾಪಾರಿ ಮನೋಭಾವದ ಮುಂದೆ ಉತ್ತಮ ಎನಿಸಿಕೊಂಡ ಕನ್ನಡ ಚಿತ್ರಗಳೂ ಮಂಡಿಯೂರಿ ಕುಳಿತುಕೊಳ್ಳಬೇಕೇ?'' - ವಿ.ನಾಗೇಂದ್ರ ಪ್ರಸಾದ್.

ನ್ಯಾಯ ಕೊಡಿಸಿ

''ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ 'ರಾಗ' ತಂಡಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವೇ ತನ್ನ ಸದಸ್ಯರನ್ನು ತನ್ನ ತಹಬಂದಿಗೆ ತೆಗೆದುಕೊಳ್ಳಲಾಗದ ವೈಫಲ್ಯದ ಹೊಣೆ ಹೊರಬೇಕು'' - ವಿ.ನಾಗೇಂದ್ರ ಪ್ರಸಾದ್.

ಖಂಡಿಸುತ್ತೇನೆ

''ಬಾಹುಬಲಿಗಾಗಿ 'ರಾಗ' ಚಿತ್ರವನ್ನು ಬಲಿಕೊಟ್ಟವರನ್ನು ಖಂಡಿಸಿ ನನ್ನ ವಿರೋಧವನ್ನು ದಾಖಲಿಸುತ್ತಿದ್ದೇನೆ. ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ'' - ವಿ.ನಾಗೇಂದ್ರ ಪ್ರಸಾದ್

English summary
Kannada film writer V.Nagendra prasad says KFCC should give justice to ''Raaga' team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada