For Quick Alerts
  ALLOW NOTIFICATIONS  
  For Daily Alerts

  ''ದೇವರು ನನಗಾಗಿಯೇ ಕಳುಹಿಸಿದ ಹುಡುಗಿ ಅನೀಶಾ'' ಎಂದ ತಮಿಳು ನಟ ವಿಶಾಲ್.!

  |
  ''ದೇವರು ನನಗಾಗಿಯೇ ಕಳುಹಿಸಿದ ಹುಡುಗಿ ಅನೀಶಾ'' ಎಂದ ತಮಿಳು ನಟ ವಿಶಾಲ್.! | FILMIBEAT KANNADA

  ಹುಡುಗಿಯರಿಗೆಲ್ಲಾ ಹಾರ್ಟ್ ಬ್ರೇಕಿಂಗ್ ನ್ಯೂಸ್ ವೊಂದನ್ನು ಇತ್ತೀಚೆಗಷ್ಟೇ ತಮಿಳು ನಟ ವಿಶಾಲ್ ನೀಡಿದ್ದರು. ಇಷ್ಟು ದಿನ ಸಿಂಗಲ್ ಆಗಿದ್ದ ವಿಶಾಲ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ತಿಳಿಸಿದ್ದರು.

  ತೆಲುಗಿನ 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಿದ್ದ ಅನೀಶಾರೊಂದಿಗೆ ವೈವಾಹಿಕ ಜೀವನ ಆರಂಭಿಸುವುದಾಗಿ ತಮಿಳು ನಟ ವಿಶಾಲ್ ಟ್ವೀಟ್ ಮಾಡಿದ್ದರು. ಅಂದ್ಹಾಗೆ, ಇದು ಲವ್ ಮ್ಯಾರೇಜೋ.. ಅರೇಂಜ್ಡ್ ಮ್ಯಾರೇಜೋ ಎಂಬ ಡೌಟ್ ಹಲವರಿಗೆ ಕಾಡುತ್ತಿತ್ತು. ಈ ಅನುಮಾನಕ್ಕೆ ವಿಶಾಲ್ ಬ್ರೇಕ್ ಹಾಕಿದ್ದಾರೆ.

  ವಿಶಾಲ್ ಮತ್ತು ಅನೀಶಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೇಮಕ್ಕೆ ಕುಟುಂಬದವರು ಸಮ್ಮತಿ ಸೂಚಿಸಿದ್ದಾರೆ. ಸದ್ಯದಲ್ಲೇ ಮದುವೆ ಆಗುವ ಈ ಜೋಡಿಯ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ.? ಅದನ್ನ ಸ್ವತಃ ವಿಶಾಲ್ ವಿವರಿಸಿದ್ದಾರೆ. ಮುಂದೆ ಓದಿರಿ...

  ವಿಶಾಲ್-ಅನೀಶಾ ಭೇಟಿ ಮಾಡಿದ್ದೆಲ್ಲಿ.?

  ವಿಶಾಲ್-ಅನೀಶಾ ಭೇಟಿ ಮಾಡಿದ್ದೆಲ್ಲಿ.?

  ''ಬೀದಿ ನಾಯಿಗಳ ಕುರಿತು ಚಿತ್ರ ಮಾಡಬೇಕೆಂದಿರುವೆ. ನನ್ನ ಕ್ರಿಯೇಟಿವ್ ಟೀಮ್ ನಲ್ಲಿ ಅನೀಶಾ ಕೂಡ ಇದ್ದರು. ಆಕೆಗೆ ನಾನು ಸ್ಕ್ರಿಪ್ಟ್ ನರೇಟ್ ಮಾಡಿದೆ. ಈ ಚರ್ಚೆ ವೇಳೆ ನಾವು ಕ್ಲೋಸ್ ಆದ್ವಿ. ಹಾಗೇ ಪ್ರೀತಿ ಹುಟ್ಟಿತು'' ಅಂತಾರೆ ನಟ ವಿಶಾಲ್.

  'ಅರ್ಜುನ್ ರೆಡ್ಡಿ' ನಟಿ ಜೊತೆ ತಮಿಳು ನಟ ವಿಶಾಲ್ ಮದುವೆ

  ಪ್ರಪೋಸ್ ಮಾಡಿದ್ದು ಯಾರು.?

  ಪ್ರಪೋಸ್ ಮಾಡಿದ್ದು ಯಾರು.?

  ''ನಾನೇ ಅನೀಶಾಗೆ ಪ್ರಪೋಸ್ ಮಾಡಿದ್ದು. ದೇವರೇ ಆಕೆಯನ್ನು ನನಗಾಗಿ ಕಳುಹಿಸಿದ್ದಾನೆ ಎಂದು ನಂಬಿರುವೆ'' ಎನ್ನುತ್ತಾರೆ ನಟ ವಿಶಾಲ್. ಅಂದ್ಹಾಗೆ, ಅನೀಶಾ ನ್ಯಾಷನಲ್ ಲೆವೆಲ್ ಫುಟ್ ಬಾಲ್ ಪ್ಲೇಯರ್ ಮತ್ತು ಸೋಷಿಯಲ್ ವರ್ಕರ್.

  ಅಚ್ಚರಿ ಪಟ್ಟಿದ್ದ ವಿಶಾಲ್.!

  ಅಚ್ಚರಿ ಪಟ್ಟಿದ್ದ ವಿಶಾಲ್.!

  ''ಅನೀಶಾ ನಿಜಕ್ಕೂ ಪ್ರತಿಭಾವಂತೆ. ಹುಲಿಯನ್ನು ಆಕೆ ಟ್ರೇನ್ ಮಾಡಬಲ್ಲಳು. ಹತ್ತು ನಿಮಿಷ ಸಮಯ ಕೊಟ್ಟರೆ, ಹುಲಿಗೆ ನಿದ್ದೆ ಬರಿಸುತ್ತಾಳೆ. ಅದನ್ನ ನೋಡಿ ನನಗೆ ಆಶ್ಚರ್ಯ ಆಯಿತು'' - ವಿಶಾಲ್, ತಮಿಳು ನಟ.

  ಎರಡು ಸಿನಿಮಾಗಳಲ್ಲಿ ನಟನೆ

  ಎರಡು ಸಿನಿಮಾಗಳಲ್ಲಿ ನಟನೆ

  ತೆಲುಗಿನ 'ಪೆಳ್ಳಿ ಚೂಪುಲು' ಮತ್ತು 'ಅರ್ಜುನ್ ರೆಡ್ಡಿ' ಚಿತ್ರಗಳಲ್ಲಿ ಅನೀಶಾ ನಟಿಸಿದ್ದಾರೆ. ''ಮದುವೆ ಆದ್ಮೇಲೂ ಆಕೆ ನಟನೆ ಮುಂದುವರೆಸಿದರೆ, ನನಗೆ ಅಭ್ಯಂತರ ಇಲ್ಲ'' ಎಂದಿದ್ದಾರೆ ನಟ ವಿಶಾಲ್. ಅಂದ್ಹಾಗೆ, ವಿಶಾಲ್-ಅನೀಶಾ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  God has sent Anisha for me says Tamil Actor Vishal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X