For Quick Alerts
  ALLOW NOTIFICATIONS  
  For Daily Alerts

  ವರ್ಮಾ ಅಭಿಮಾನಿಗಳಿಗೆ ಬೇಸರ ತಂದ ಗಣರಾಜ್ಯೋತ್ಸವ ದಿನ

  By Bharath Kumar
  |

  ಎಲ್ಲ ಅಂದುಕೊಂಡಂತೆ ಆಗಿದ್ದರೇ, ಜನವರಿ 26 ರಂದು ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಗಾಡ್ ಸೆಕ್ಸ್ ಟ್ರೂತ್' ಎಂಬ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಅದು ಬಿಡುಗಡೆಯಾಗಿಲ್ಲ. ಇದರಿಂದ ಭಾರಿ ನಿರೀಕ್ಷೆಯಲ್ಲಿದ್ದ ಆರ್.ಜಿ.ವಿ ಫ್ಯಾನ್ಸ್ ನಿರಾಸೆ ಪಡುವಂತಾಗಿದೆ.

  ಅಮೇರಿಕನ್ ಪೋರ್ನ್ ನಟಿ ಮಿಯಾ ಮಲ್ಕೋವಾ ಅವರ ಜೊತೆ ಕ್ರಾಂತಿಕಾರಿ ಲೈಂಗಿಕತೆ ಕುರಿತು ಆರ್.ಜಿ.ವಿ ಸಿನಿಮಾ ಮಾಡಿದ್ದು, ಗಣರಾಜ್ಯೋತ್ಸವದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆದ್ರೆ, ಅದು ಹೇಳಿದ ಸಮಯಕ್ಕೆ ತೋರಿಸಲು ಸಾಧ್ಯವಾಗಲಿಲ್ಲ.

  ಈ ಹಿಂದೆ 'ಗಾಡ್ ಸೆಕ್ಸ್ ಅಂಡ್ ಟ್ರೂತ್' (GST) ಚಿತ್ರದ ಪೋಸ್ಟರ್ ಗಳನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಅದರ ವಿರುದ್ಧ ಕೆಲವು ಸಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ಸೈಬರ್ ಪೊಲೀಸರಿಗೂ ದೂರು ನೀಡಿದ್ದರು. ನಿರ್ದೇಶಕ ವರ್ಮಾ ಅಶ್ಲೀಲ ಫೋಟೋಗಳನ್ನ ಮತ್ತು ಸಿನಿಮಾವನ್ನ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲು ಸಿದ್ದವಾಗುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು. ಈ ದೂರಿನ ಅನ್ವಯ ಹೈದರಬಾದ್ ನಲ್ಲಿ ಪ್ರಕರಣವೂ ದಾಖಲಾಗಿತ್ತು.

  ಪೋರ್ನ್ ನಟಿ ಜೊತೆ ರಾಮ್ ಗೋಪಾಲ್ ವರ್ಮ ವಿಡಿಯೋ

  ಕೆಲವು ಮಹಿಳಾ ಸಂಘಟನೆಗಳು ಕೂಡ ರಾಮ್ ಗೋಪಾಲ್ ವರ್ಮ ವಿರುದ್ಧ ಪ್ರತಿಭಟನೆ ನಡೆಸಿದ್ರು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಆರ್.ಜಿ.ವಿ ತಮ್ಮ ಹೊಸ ಸಿನಿಮಾವನ್ನ ರಿಲೀಸ್ ಮಾಡ್ತಾರ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದ್ರೆ, ತಾಂತ್ರಿಕ ಕಾರಣದಿಂದ ಅಪ್ ಲೌಡ್ ಆಗುತ್ತಿಲ್ಲ ಎಂದು ವರ್ಮ ತಿಳಿಸಿದ್ದಾರೆ. ಒಮ್ಮೆ ಅಪ್ ಲೌಡ್ ಆದ್ಮೇಲೆ ನಾನೇ ತಿಳಿಸುತ್ತೇನೆ ಎಂದು ಅಭಿಮಾನಿಗಳನ್ನ ಮತ್ತಷ್ಟು ಕಾಯುವಂತೆ ಮಾಡಿದ್ದಾರೆ.

  ಮಹಿಳೆಯರ ದೇಹದ ಬಗ್ಗೆ ಸೆಕ್ಸಿ ಕಾಮೆಂಟ್ ಮಾಡಿದ ವರ್ಮ

  ಒಟ್ನಲ್ಲಿ, ವಿವಾದ, ಚರ್ಚೆಗಳ ನಡುವೆ ಆರ್.ಜಿ.ವಿ ಅದೇನ್ ಮಾಡಿದ್ದಾರೋ ನೋಡೇ ಬಿಡೋಣ ಅಂತ ಕಾದಿದ್ದ ಮಂದಿಗೆ ನಿರಾಸೆಯಾಗಿರುವುದಂತೂ ಸುಳ್ಳಾಲ್ಲ. ಯಾವುದಕ್ಕೂ, ರಾಮ್ ಗೋಪಾಲ್ ಅವರ ಟ್ವಿಟ್ಟರ್ ಮೇಲೆ ಒಂದು ಕಣ್ಣು ಇಟ್ಟಿರಿ. ಯಾವ ಕ್ಷಣದಲ್ಲಿ ಬೇಕಾದರೂ ಅಪ್ ಲೌಡ್ ಆಗಬಹುದು.

  English summary
  ''america porn actress Mia Malkova‘s starrer God Sex Truth which will cause a delay. Will update when done'' says Director ram gopal varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X