For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟೆಪ್ಸ್.. ಸಖತ್ ಸಾಂಗ್.. ಮಸ್ತ್ ಮಜಾ ಮಾಡಿ

  |

  ಚಮಕ್ ಸಿನಿಮಾ ನೋಡಿದವರಿಗೆ ಗಣೇಶ್ ಹಾಗೂ ಸಿಂಪಲ್ ಸುನಿ ಸಖತ್ ನೋಡಬೇಕು ಅನ್ನುವ ಕುತೂಹಲವಿರುತ್ತೆ. ಗಣೇಶ್ ಆಕ್ಟಿಂಗ್.. ಸಿಂಪಲ್ ಸುನಿ ಡೈಲಾಗ್.. ಇವೆಲ್ಲವೂ ಸೇರಿದರೆ ಒಂದೊಳ್ಳೆ ಮನರಂಜನೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಸಖತ್ ಚಿತ್ರದ ಬಗ್ಗೆ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಈ ಮದ್ಯೆ ಸಿನಿಮಾ ಹಾಡುಗಳು ಹಾಗೂ ಟೀಸರ್ ಸಖತ್ ಕಿಕ್ ಕೊಡುತ್ತಿದೆ.

  ಸಖತ್ ಸಿನಿಮಾ ಬಿಡುಗಡೆಗೆ ಇನ್ನು ಎರಡು ವಾರ ಬಾಕಿ ಇದೆ. ಅಷ್ಟರಲ್ಲೇ ಸಖತ್ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿನಲ್ಲಿ ಗಣೇಶ್ ಮಿರ ಮಿರ ಮಿಂಚುವ ಕಾಸ್ಟ್ಯೂಮ್‌ನಲ್ಲಿ ರ್ಯಾಪರ್ ಲುಕ್ ಕೊಟ್ಟು ಹೆಜ್ಜೆ ಹಾಕಿದ್ದಾರೆ. ಇದೇ ಹಾಡು ನಾಳೆ (ನವೆಂಬರ್ 14)ರಂದು ಬಿಡುಗಡೆಯಾಗುತ್ತಿದೆ.

  ಟೈಟಲ್ ಟ್ರ್ಯಾಕ್‌ನಲ್ಲಿ ಗಣೇಶ್ ಹೊಸ ಅವತಾರ

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಜೋಡಿ ಮಾಡುವ ಮೋಡಿನೇ ಅದು. ಇಬ್ಬರು ಜೊತೆಗೆ ಸೇರಿದರೆ ಪ್ರೇಕ್ಷಕರನ್ನು ಚಮ್ಕಾಯಿಸಿ ಬಿಡುತ್ತಾರೆ. ಇವರೊಂದಿಗೆ ಜ್ಯೂಡಾ ಸ್ಯಾಂಡಿ ಮ್ಯೂಸಿಕ್ ಸೇರಿಕೊಂಡರೆ ಪ್ರೇಕ್ಷಕರಿಗೆ ಕಿಕ್ ಮೇಲೆ ಕಿಕ್ ಸಿಗುವುದರಲ್ಲಿ ಅನುಮಾನವೇ ಇಲ್ಲ. ಈಗ ಸಖತ್ ಟೈಟಲ್ ಸಾಂಗ್ ರಿಲೀಸ್ ಮಾಡಲು ಹೊರಟಿದೆ. ಈ ಹಾಡಿನ ವಿಶೇಷ ಏನಂದರೆ, ಇದೊಂದು ರ್ಯಾಪ್ ಸಾಂಗ್ ಆಗಿದ್ದರೂ, ಎರಡು ವರ್ಷನ್‌ನಲ್ಲಿ ಇರುತ್ತೆ. ಗಾಯಕ ಎಸ್‌ಐಡಿ ರ್ಯಾಪ್ ವರ್ಷನ್ ಹಾಡಿದ್ರೆ, ಇನ್ನೊಂದು ವರ್ಷನ್ ಅನ್ನು ಜೀವಪಂಚಮ್ ಹಾಗೂ ಸುಧಾ ಸ್ಯಾಂಡಿ ಹಾಡಿದ್ದಾರೆ.

  ಸೂಪರ್ ಸೆಟ್.. ಮಸ್ತ್ ಸಾಂಗ್

  ಸುನಿ - ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಕ್ಷಕರಿಗೆ ಹಾಸ್ಯದ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಕಾಮಿಡಿ ಜೊತೆ ಗಣೇಶ್ ಇಮೇಜ್ ಮೇಲೂ ಗಮನ ಹರಿಸಿದ್ದು, ಸೂಪರ್ ಸೆಟ್ ಹಾಕಲಾಗಿದೆ. 25ಕ್ಕೂ ಅಧಿಕ ಮಂದಿ ಡ್ಯಾನ್ಸರ್‌ಗಳ ನಡುವೆ ಗಣೇಶ್ ಮಿರ ಮಿರ ಮಿಂಚುತ್ತಾ ಹೆಜ್ಜೆ ಹಾಕಿದ್ದಾರೆ. ಇದೇ ಹಾಡು ನಾಳೆ(ನವೆಂಬರ್ 14) ರಿಲೀಸ್ ಆಗುತ್ತಿದೆ. ಗಣೇಶ್ ಅವರನ್ನ ಹೊಸ ಅವತಾರದಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  ಟಿವಿ ರಿಯಾಲಿಟಿ ಶೋ ಹಿನ್ನೆಲೆ

  ಸಖತ್ ಸಿನಿಮಾ ಕತೆ ಟಿವಿ ರಿಯಾಲಿಟಿ ಶೊ ಹಾಗೂ ಕೋರ್ಟ್ ಕೇಸ್ ಒಂದರ ಹಿನ್ನೆಲೆಯನ್ನಿಟ್ಟುಕೊಂಡು ಹೆಣೆಯಲಾಗಿದೆ. ಹೀಗಾಗಿ ಸಿನಿಮಾದುದ್ದಕ್ಕೂ ಕಾಮಿಡಿ ಜೊತೆ ಜೊತೆಗೆ ಟ್ವಿಸ್ಟ್ ಅಂಡ್ ಟರ್ನ್ ಇದ್ದೇ ಇರುತ್ತೆ. ಹೀಗಾಗಿ ಸಖತ್ ಸಿನಿಮಾ ಒಂದು ರೊಮ್ಯಾಂಟಿಕ್ ಕ್ರೈಂ ಕಾಮಿಡಿ ಜಾನರ್ ಕಥೆಯಾಗಿದ್ದು, ಪ್ರೇಕ್ಷಕರಿಗೆ ಕಿಕ್ ಕೊಡುವುದರಲ್ಲಿ ಅನುಮಾನವೇ ಇಲ್ಲ. ಅಂದ್ಹಾಗೆ, ಸಖತ್ ಸಿನಿಮಾದಲ್ಲಿ ಗಣೇಶ್‌ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ.

  golden star ganesh acted sakkath title song releasing on november 14th

  ನವೆಂಬರ್ 26ಕ್ಕೆ ರಿಲೀಸ್.. ಭರ್ಜರಿ ಪ್ರಚಾರ

  ಸಖತ್ ಸಿನಿಮಾ ಇದೇ ತಿಂಗಳ 26ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ನವೆಂಬರ್ 12ರಂದೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದಿಂದ ಸಿನಿಮಾ ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡಲಾಯಿತು. ಇಡೀ ಚಿತ್ರರಂಗ, ರಾಜ್ಯದ ಜನತೆ ಪುನೀತ್ ರಾಜ್‌ಕುಮಾರ್ ನೋವಿನಲ್ಲಿರುವಾಗ ಇಂತಹ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸರಿಯಿಲ್ಲವೆಂದು ಚಿತ್ರತಂಡ ನಿರ್ಧರಿಸಿತ್ತು. ಈಗ ನಿಧಾನವಾಗಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ನೋವಿನಲ್ಲಿರುವ ಸಿನಿಪ್ರಿಯರಿ ಹಾಸ್ಯದ ಮೂಲಕ ಮತ್ತೆ ಮನರಂಜನೆ ನೀಡಲು ಮುಂದಾಗಿದೆ.

  English summary
  Golden Star Ganesh acted Sakkath film song will be release on november 14th. Simple Suni Diirected movie will be releasing on november 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X