For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಮನೆಗೆ ಗೋಲ್ಡನ್ ಸ್ಟಾರ್ ಹಾಗೂ ರಿಯಲ್ ಸ್ಟಾರ್ ಭೇಟಿ

  By Suneetha
  |

  ಕರುನಾಡ ಚಕ್ರವರ್ತಿ ಶಿವಣ್ಣ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಾಗವಾರದ ತಮ್ಮ ನಿವಾಸಕ್ಕೆ ಬಂದ ನಂತರ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರು ನಿನ್ನೆ (ಅಕ್ಟೋಬರ್ 09) ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

  ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿವಣ್ಣ ಹಾಗೂ ಗೀತಾಕ್ಕ ಅವರನ್ನು ಭೇಟಿ ಮಾಡಿದ್ದೆ. ಇಬ್ಬರು ವಂಡರ್ ಫುಲ್ ಜನ ಅಂತ ಟ್ವೀಟ್ ಮಾಡಿದ್ದಾರೆ.[ಮಲ್ಯ ಆಸ್ಪತ್ರೆಯಿಂದ 'ಮನಮೋಹಕ' ಶಿವಣ್ಣ ಮನೆಗೆ]

  ಇನ್ನು ಗಣೇಶ್ ಅವರ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಕೆಲ ಹೊತ್ತು ಹರಟಿದರು. ಉಪೇಂದ್ರ ಅವರೊಂದಿಗೆ ನಟ-ನಿರ್ದೇಶಕ ಜೋಗಿ ಪ್ರೇಮ್ ಅವರು ಕೂಡ ಶಿವಣ್ಣ ಮನೆಯಲ್ಲಿ ಹಾಜರಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಆರೋಗ್ಯ ವಿಚಾರಿಸಿಕೊಂಡರು.[ಶಿವಣ್ಣ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕಿಚ್ಚ]

  ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವಣ್ಣ ಅವರ ಜೊತೆ ಲವ-ಕುಶ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಶಿವಣ್ಣ ಅವರನ್ನು ನಾಗವಾರದ ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಆತ್ಮೀಯ ಗೆಳೆಯನನ್ನು ಭೇಟಿ ಮಾಡಿದ ಸಂದರ್ಭವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ (ಅಕ್ಟೋಬರ್ 6) ರಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವಲ್ಪ ಎದೆನೋವು ಕಾಣಿಸಿಕೊಂಡಿತ್ತು.[ಶಿವಣ್ಣನಿಗೆ ಫಿಟ್ ಆಗಿ ಎಂದು ಹಾರೈಸಿದ ತಮಿಳು ಸೂಪರ್ ಸ್ಟಾರ್]

  ತಕ್ಷಣ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಶಿವಣ್ಣ ಅವರನ್ನು ದಾಖಲಿಸಲಾಯಿತು ನಂತರ ಮಲ್ಯ ಆಸ್ಪತ್ರೆಗೆ ಶಿಫ್ಟ್ ಆದ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಗುರುವಾರ( ಅಕ್ಟೋಬರ್ 8) ದಂದು ಡಿಸ್ಚಾರ್ಜ್ ಆಗಿ ತಮ್ಮ ನಿವಾಸಕ್ಕೆ ತೆರಳಿದ್ದರು.

  ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದರೂ ಕೂಡ ವೈದ್ಯರ ಸಲಹೆಯ ಮೇರೆಗೆ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  English summary
  Golden Star Ganesh and Upendra made it a point to visit the actor at Shivarajkumar's residence. Taking to Twitter, Ganesh shared a picture of him posing with Shivarajkumar and that latter's wife, Geetha Shivarajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X