»   » ಪವರ್ ಸ್ಟಾರ್ ಬಿಟ್ಟ ಸಿನಿಮಾ ಗೋಲ್ಡನ್ ಸ್ಟಾರ್ ಪಾಲು

ಪವರ್ ಸ್ಟಾರ್ ಬಿಟ್ಟ ಸಿನಿಮಾ ಗೋಲ್ಡನ್ ಸ್ಟಾರ್ ಪಾಲು

By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಸಿನಿಮಾ ಶೂಟಿಂಗ್ ನ ವೇಳೆ ತೆಲುಗು ಸಿನಿಮಾವೊಂದರ ರೀಮೇಕ್ ನಲ್ಲಿ ನಟಿಸೋ ಆಫರ್ ಬಂದಿತ್ತು. ಆದರೆ ಹಿಂದೆ ರೀಮೇಕ್ ಸಿನಿಮಾ ಸೋತಿದ್ದಕ್ಕೋ ಏನೋ ಪುನೀತ್ ಆ ಸಿನಿಮಾದ ಆಫರನ್ನು ತಿರಸ್ಕರಿಸಿದ್ರು. ಆ ಸಿನಿಮಾ ಈಗ ಗೋಲ್ಡನ್ ಸ್ಟಾರ್ ಗಣೇಶ್ ಪಾಲಾಗಿದೆ.

ಅಂದಹಾಗೆ ಪವರ್ ಸ್ಟಾರ್ ಪುನೀತ್ ಬೇಡ ಅಂದ ಸಿನಿಮಾ ತೆಲುಗಿನ ಯಶಸ್ವಿ ಚಿತ್ರ 'ಗುಂಡೇಜಾರಿ ಗುಲ್ಲಂತಯಿಂದಿ' (ಹೃದಯ ಜಾರಿ ಕಾಣೆಯಾಗಿದೆ) ಅನ್ನೋ ಸ್ವೀಟ್ ಸ್ವೀಟ್ ಲವ್ ಸ್ಟೋರಿ. ಪುನೀತ್ ಸ್ವೀಟ್ ಲವ್ ಸ್ಟೋರಿಗಿಂತ ಒಂದು ಪವರ್ ಫುಲ್ ಕ್ಯಾರೆಕ್ಟರ್ ಮಾಡೋ ಪ್ಲಾನ್ ನಲ್ಲಿದ್ರು ಅನ್ನಿಸುತ್ತೆ. ಇನ್ನು ರೀಮೇಕ್ ಸಿನಿಮಾಗಳು ಪುನೀತ್ ಗೆ ಗೆಲವು ತಂದುಕೊಟ್ಟಿರೋದು ಅಷ್ಟಕ್ಕಷ್ಟೇ. [ದಿಲ್ ರಂಗೀಲಾ ಚಿತ್ರವಿಮರ್ಶೆ]

Golden Star Ganesh

ಸದ್ಯ ಗೋಲ್ಡನ್ ಸ್ಟಾರ್ ಮುಂದಿನ ಸಿನಿಮಾ 'ದಿಲ್ ರಂಗೀಲಾ' ಸಿನಿಮಾದ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಯೋಗಿ ನಿರ್ದೇಶಿಸ್ತಿದ್ದಾರೆ. ಗಣೇಶ್ ಗೆ ಲವ್ ಸಿನಿಮಾಗಳೇನೋ ಓಕೆ ಆದರೆ ಅದ್ರಲ್ಲಿ ಆಕ್ಷನ್ ಇದ್ರೆ ಗಣೇಶ್ ಅದಕ್ಕೆ ಸೂಟಾಗೋದು ಸ್ವಲ್ಪ ಕಷ್ಟ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಆದರೆ ಪುನೀತ್ ಗೆ ಒಂದ್ಸಾರಿ ಪೊಲೀಸ್ ಆಫೀಸರ್ ಆಗಿ ಮಿಂಚ್ಬೇಕು ಅನ್ನೋ ಆಸೆ ಇತ್ತು ಅನ್ನಿಸುತ್ತೆ. ಇನ್ನು ತೆಲುಗು ನಿರ್ಮಾಪಕರು ಅರ್ಜೆಂಟ್ ಆಗಿ ಸಿನಿಮಾ ಮಾಡ್ಬೇಕು ಅಂತ ಹೊರಟಿದ್ರು ಗಣೇಶ್ ಗೂ ಸ್ಟೋರಿ ಇಷ್ಟವಾಯ್ತು. ಸಿನಿಮಾ ಸದ್ಯದಲ್ಲೇ ಶುರುವಾಗ್ತಿದೆ. ಕನ್ನಡ ಟೈಟಲ್ ಇನ್ನೂ ಪಕ್ಕಾ ಆಗಿಲ್ಲ.

English summary
Tollywood box office hit 'Gunde Jaari Gallanthayyinde' to be remade in Kannada. At first Power Star Puneeth Rajkumar agreed to act in the movie and later he refused, now Golden Star Ganesh agrees to act in the movie directed by Yogi. Kannada title is not yet finalised.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada