For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ಮ್ಯಾಜಿಕ್ ಮಾಡಿ ಚಕಿತಗೊಳಿಸಿದ ಗಣೇಶ್

  |

  ಗೋಲ್ಡನ್ ಸ್ಟಾರ್ ಗಣೇಶ್ ಉತ್ತಮ ನಟ ಮಾತ್ರವಲ್ಲ, ಅವರದ್ದು ಬಹುಮುಖ ಪ್ರತಿಭೆ. ಸಿನಿಮಾಕ್ಕೆ ಬರುವ ಮುಂಚೆಯೇ ತಮ್ಮ ಪ್ರತಿಭೆಯಿಂದ ಹೆಸರು ಮಾಡಿದ್ದವರು.

  ಕಷ್ಟವನ್ನು ಎದುರಿಸುವ ಶಕ್ತಿ ಕಲಿತಿದ್ದು ದರ್ಶನ್ ಸರ್ ಅವರಿಂದಲೇ... | FILMIBEAT KANNADA

  ಆರ್ಕೆಸ್ಟ್ರಾಗಳಲ್ಲಿ ಹಾಡಿ, ನರ್ತಿಸುತ್ತಿದ್ದ ಗಣೇಶ್ ಆ ನಂತರ ಕಾಮಿಡಿ ಟೈಂನಲ್ಲಿ ತಮ್ಮ ಹಾಸ್ಯ, ಚುರುಕುತನದಿಂದ ಗಮನ ರಾಜ್ಯದಲ್ಲಿ ಮನೆ ಮಾತಾಗಿದ್ದರು. ನಂತರವೇ ಅವರು ಸಿನಿಮಾ ನಾಯಕನಾಗಿ ಎತ್ತರಕ್ಕೆ ಏರಿದ್ದು.

  ಗಣೇಶ್ - ಸುನಿ ಹೊಸ ಸಿನಿಮಾಗೆ ಟೈಟಲ್ 'ಸಖತ್ತಾಗಿದೆ'ಗಣೇಶ್ - ಸುನಿ ಹೊಸ ಸಿನಿಮಾಗೆ ಟೈಟಲ್ 'ಸಖತ್ತಾಗಿದೆ'

  ತಮ್ಮ ಸುತ್ತಲಿನವರ ಮನರಂಜಿಸುವುದು ಗಣೇಶ್ ಅವರ ಗುಣ, ಒಬ್ಬ ನಟನಿಗೆ ಇರಬೇಕಾದದ್ದೂ ಅದೇ. ಮನರಂಜಿಸುವ ತುಡಿತ ಇಲ್ಲದವನು ನಟನಾಗಲಾರ ಎಂದು ಹಿರಿಯ ನಟರೊಬ್ಬರ ಮಾತು. ಅಂತೆಯೇ ತಾವು ಹೇಗಿದ್ದರೂ, ಎಲ್ಲಿದ್ದರೂ ಗಣೇಶ್ ತಮ್ಮ ಸುತ್ತಲಿರುವವರನ್ನು ಮನರಂಜಿಸುವ ಕಾರ್ಯ ಮಾಡುತ್ತಿರುತ್ತಾರೆ.

  ಶೂಟಿಂಗ್ ಸೆಟ್‌ನಲ್ಲಿ ಗಣೇಶ್ ಮ್ಯಾಜಿಕ್

  ಶೂಟಿಂಗ್ ಸೆಟ್‌ನಲ್ಲಿ ಗಣೇಶ್ ಮ್ಯಾಜಿಕ್

  ಆರೆಂಜ್ ಸಿನಿಮಾದ ಸೆಟ್‌ನಲ್ಲಿ ಗಣೇಶ್‌ ಮಾಡಿದ್ದ ಮ್ಯಾಜಿಕ್ ನ ವಿಡಿಯೋ ಇದೀಗ ವೈರಲ್ ಆಗಿದೆ. ನೆಲದ ಮೇಲೆ ಕೂತು ಸುತ್ತಲೂ ಜನರನ್ನು ಗುಡ್ಡೆಹಾಕಿಕೊಂಡು ಗಣೇಶ್ ಮ್ಯಾಜಿಕ್ ಮಾಡಿದ್ದಾರೆ. ಈ ವಿಡಿಯೋ ಲಾಕ್‌ಡೌನ್‌ಗೆ ಮುಂಚಿನದ್ದು ಎನ್ನಲಾಗುತ್ತಿದೆ.

  ತಂತ್ರಜ್ಞರೊಬ್ಬರಿಗೆ ಮ್ಯಾಜಿಕ್ ಮಾಡಿದ ಗಣೇಶ್

  ಇಸ್ಪಿಟ್ ಎಲೆಗಳನ್ನು ಹಿಡಿದು ಗಣೇಶ್ ಅವರು ಚಿತ್ರದ ತಂತ್ರಜ್ಞರೊಬ್ಬರನ್ನು ಎದುರಿಗೆ ಕೂರಿಸಿಕೊಂಡು ಒಂದು ಎಲೆಯನ್ನು ಎತ್ತಿಕೊಳ್ಳುವಂತೆ ಹೇಳುತ್ತಾರೆ. ಅದರಂತೆ ಆತ ಆರು ಸಂಖ್ಯೆಯ ಕಪ್ಪು ಬಣ್ಣದ ಎಲೆಯನ್ನು ಗಣೇಶ್‌ ಗೆ ಕಾಣದಂತೆ ಎತ್ತಿಕೊಳ್ಳುತ್ತಾರೆ. ಆ ನಂತರ ಎತ್ತಿಕೊಂಡ ಎಲೆಯನ್ನು ಮತ್ತೆ ಉಳಿದ ಕಾರ್ಡ್‌ನೊಳಗೆ ಇಡುತ್ತಾರೆ.

  ಮದುವೆ ವಾರ್ಷಿಕೋತ್ಸವದ ಸಂಭ್ರಮ: ಪತ್ನಿಯ ಬಗ್ಗೆ ಗಣೇಶ್ 'ಗೋಲ್ಡನ್' ನುಡಿಮದುವೆ ವಾರ್ಷಿಕೋತ್ಸವದ ಸಂಭ್ರಮ: ಪತ್ನಿಯ ಬಗ್ಗೆ ಗಣೇಶ್ 'ಗೋಲ್ಡನ್' ನುಡಿ

  ಇಸ್ಪಿಟ್ ಎಲೆಗಳ ಮ್ಯಾಜಿಕ್

  ಇಸ್ಪಿಟ್ ಎಲೆಗಳ ಮ್ಯಾಜಿಕ್

  ಗಣೇಶ್ ಆ ಎಲೆಗಳನ್ನು ಎತ್ತಿಕೊಂಡು ಎರಡು ಮೂರು ಬಾರಿ ಸೂಕ್ಷ್ಮವಾಗಿ ಗಮಿಸುತ್ತಾರೆ. ನಂತರ ಗಣೇಶ್ ಅವರೇ 'ನೀವು ಎತ್ತಿಕೊಂಡ ಕಾರ್ಡ್ ಯಾವುದೆಂದು ಕೇಳುತ್ತಾರೆ. ಅದಕ್ಕೆ ಆತ ಆರು ಎನ್ನುತ್ತಾನೆ. 'ಎರಡು ಕಾರ್ಡನ್ನು ಕಾಣದಂತೆ ತಿರುಗಿಸಿ ಇಟ್ಟು, ಮೂರನೇ ಕಾರ್ಡನ್ನು ಎಲ್ಲರಿಗೂ ಕಾಣುವಂತೆ ನೆಲದ ಮೇಲೆ ಇಡು' ಎಂದು ಗಣೇಶ್ ಕಾರ್ಡಿನ ಕಟ್ಟನ್ನು ಎದುರಿನವರಿಗೆ ನೀಡುತ್ತಾರೆ.

  ಅರೇ ಅದೇ ಕಾರ್ಡ್!

  ಅರೇ ಅದೇ ಕಾರ್ಡ್!

  ಅದರಂತೆ ಆತ ಎರಡು ಕಾರ್ಡನ್ನು ಹಿಮ್ಮುಖವಾಗಿ ನೆಲದ ಮೇಲಿಟ್ಟು, ಮೂರನೇ ಕಾರ್ಡನ್ನು ಕಾಣುವಂತೆ ಮೇಲ್ಮುಖವಾಗಿ ನೆಲದ ಮೇಲಿಟ್ಟರೆ ಏನಾಶ್ಚಾರ್ಯ ಅದೇ ಆರು ಸಂಖ್ಯೆಯ ಕಪ್ಪು ಬಣ್ಣದ ಕಾರ್ಡು. ಅಲ್ಲಿ ಮ್ಯಾಜಿಕ್ ನೋಡಲು ನೆರೆದಿದ್ದ ಎಲ್ಲರೂ ಆಶ್ಚರ್ಯ ಚಕಿತರಾಗಿಹೋಗುತ್ತಾರೆ.

  ಮತ್ತೆ ಒಂದಾದ ಸೂಪರ್ ಹಿಟ್ 'ಚಮಕ್' ಜೋಡಿಮತ್ತೆ ಒಂದಾದ ಸೂಪರ್ ಹಿಟ್ 'ಚಮಕ್' ಜೋಡಿ

  English summary
  Golden star Ganesh magic trick in Orange movie set. He stuns everyone around him by his magic trick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X