»   » ಗೋಲ್ಡನ್ ಸ್ಟಾರ್ ಗಣೇಶ್ 'ಬುಗುರಿ' ಆಟ ಶುರು

ಗೋಲ್ಡನ್ ಸ್ಟಾರ್ ಗಣೇಶ್ 'ಬುಗುರಿ' ಆಟ ಶುರು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಈಗ ಮತ್ತೆ ಆಕ್ಷನ್ ಕಡೆಗೆ ಮುಖ ಮಾಡಿದ್ದಾರೆ. 'ದಿಲ್ ರಂಗೀಲಾ' ಬಳಿಕ ಅವರು ಇನ್ನೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ. ಎಂ.ಡಿ.ಶ್ರೀಧರ್ ಅವರು ಆಕ್ಷನ್ ಕಟ್ ಹೇಳುತ್ತಿರುವ 'ಬುಗುರಿ' ಚಿತ್ರ ಫೋಟೋಶೂಟ್ ಮುಗಿಸಿಕೊಂಡಿದೆ.

ಈ ಹಿಂದೆ ಶ್ರೀಧರ್ ಅವರು ಗಣೇಶ್ ಜೊತೆ 'ಚೆಲ್ಲಾಟ' ಹಾಗೂ 'ಕೃಷ್ಣ' ಚಿತ್ರಗಳನ್ನು ಮಾಡಿದ್ದಾರೆ. ಇದೀಗ ಆರು ವರ್ಷಗಳ ಗ್ಯಾಪ್ ಬಳಿಕ ಮತ್ತೊಮ್ಮೆ ಇಬ್ಬರೂ ಕೈಜೋಡಿಸಿದ್ದಾರೆ. ಅಂದಹಾಗೆ 'ಬುಗುರಿ' ಪಕ್ಕಾ ಸ್ವಮೇಕ್ ಚಿತ್ರ ಎಂಬುದು ವಿಶೇಷ. [ಪೂಜಾಗಾಂಧಿಯನ್ನ ಎತ್ತಿದ ಗಣೇಶ್ ಈಗ ಮತ್ತೆ ರೆಡಿ!]


ಜೂನ್ 7ರಿಂದ 'ಬುಗುರಿ' ಚಿತ್ರೀಕರಣ ಆಟ ಆರಂಭವಾಗಲಿದೆ. ಈ ಬಾರಿ ಗಣೇಶ್ ಗೆ ಯಾರು ಜೋಡಿಯಾಗಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಹೊಸಮುಖಕ್ಕಾಗಿ ಹುಡುಕಾಟ ನಡೆದಿದೆ. ಅಂದುಕೊಂಡಂತೆ ಚಿತ್ರೀಕರಣ ಮುಗಿದರೆ ಸೆಪ್ಟೆಂಬರ್ ವೇಳೆಗೆ ಗಣೇಶನ 'ಬುಗುರಿ' ಆಟ ನೋಡಬಹುದು.

ಗಣೇಶ್ ಅಭಿನಯದ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರ ಶತಕ ಬಾರಿಸಿದೆ. 'ದಿಲ್ ರಂಗೀಲಾ' ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. ಅದಕ್ಕೂ ಮುಂಚಿನ 'ಆಟೋರಾಜ' ಚಿತ್ರವೂ ಐವತ್ತು ದಿನಗಳ ಪ್ರದರ್ಶನ ಕಂಡಿದೆ. ಆದರೆ ಅದ್ಯಾಕೋ ಏನೋ 'ಸಕ್ಕರೆ' ಚಿತ್ರ ಸಿಹಿಯಾಗಲಿಲ್ಲ. ಒಟ್ಟಾರೆಯಾಗಿ ಗಣೇಶ್ ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. 'ಬುಗುರಿ' ಚಿತ್ರದ ಟೈಟಲ್ ಅವರ ಅಭಿಮಾನಿಗಳಿಗೂ ಸಖತ್ ಇಷ್ಟವಾಗಿದೆ. (ಏಜೆನ್ಸೀಸ್)

English summary
After Dil Rangeela movie Golden Star Ganesh back to action again. This time Ganesh join hands with MD Shridhar. The new movie titled as 'Buguri'. The shooting for Buguri starts from 7th of June.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada